ಕನ್ನಡದ ಚರ್ಚೆ

ಕನ್ನಡದ ಚರ್ಚೆ

Comments

ಬರಹ

ಕಳೆದ ಹಲವಾರು ದಿನಗಳಿಂದ ಸಂಪದ ಪುಟಗಳನ್ನು ಓದುತ್ತಿದ್ದೇನೆ. ಸ್ವಾರಸ್ಯಕರವಾದ ಅನೇಕ ಬರಹಗಳನ್ನು ಓದಿದೆ. ನನಗೆ ಸಾಹಿತ್ಯದಲ್ಲಿ ಆಸಕ್ತಿ ಇದೆಯಾದ್ದರಿಂದ ಆ ಕುರಿತ ಬ್ಲಾಗ್ ಗಳು, ಲೇಖನಗಳು ಇಷ್ಟವಾದವು. ವಿಶೇಷವಾಗಿ, ಓಎಲ್ ನಾ ಸ್ವಾಮಿ ಹಾಗೂ ಅನಂತಮೂರ್ತಿಯವರ ಪುಟಗಳು. ಪರಾಗ ಎಂಬ ಬೇಂದ್ರೆ ಕವನದ ವಿಶ್ಲೇಷಣೆ (ಸ್ವಾಮಿ) ತುಂಬ ಚೆನ್ನಾಗಿದೆ.

ಪುಟಗಳನ್ನು ಓದುತ್ತ ನನಗೆ ಯಾಕೆ ಇಷ್ಟೆಲ್ಲ ಜನ ಕನ್ನಡ ಭಾಷೆಯ ಕುರಿತು ಆತಂಕಿತರಾಗಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಭಾಷೆ ಬಡವಾಗುತ್ತಿದೆ, ಇನ್ನೇನು ಕಾಣೆಯಾಗುತ್ತಿದೆ ಎಂಬರ್ಥದ ಹಲವು ಅಭಿಪ್ರಾಯಗಳನ್ನು ಕಂಡಿದ್ದೇನೆ. ಇದೊಂದು ಅತಿಭೀತಿ ಎಂದು ನನ್ನ ಅನಿಸಿಕೆ. ಯಾಕೆಂದರೆ, ಹಲವು ಕೋಟಿ ಜನ ದಿನೇ ದಿನೇ ಬಳಸುವ ಭಾಷೆ ಅಷ್ಟು ಸುಲಭವಾಗಿ ನಾಶವಾಗದು. ಬೆಂಗಳೂರು, ಮೈಸೂರುಗಳಂತ ಶಹರಗಳಲ್ಲಿ ಅನ್ಯ ಹಾಗೂ ಆಂಗ್ಲ ಭಾಷೆಯ ಪ್ರಯೋಗ ಹೆಚ್ಚುತ್ತಿರಬಹುದು. ಆದರೆ, ಅದಷ್ಟೇ ಕನ್ನಡ ಭಾಷಾ ಕ್ಷೇತ್ರವಲ್ಲ. ಇಡೀ ಕರ್ನಾಟಕದಲ್ಲಿ ಎಷ್ಟು ಮಂದಿ ಮನೆಮಾತಾಗಿ ಇಂಗ್ಲೀಷ ಬಳಸುತ್ತಾರೆ? ಏನೋ ಕೆಲ ಸಾವಿರ ಅಥವಾ ಲಕ್ಷ ಇರಬಹುದು. ಹಾಗಂತ, ಕನ್ನಡ ನಶಿಸುತ್ತಿದೆ ಎಂಬ ಗಾಭರಿಗೆ ಬಿದ್ದರೆ ಹೇಗೆ.

ಾಷೆ ಆಡುವ ಜನರಿಗೆ ಆ ಭಾಷೆ ಯಾವರೆಗೆ ಬೇಕೋ ಆವರೆಗೆ ಏನೂ ಭಯ ಬೇಡ. ಕೆಲವು ಶಹರಗಳ ಸ್ಥಿತಿಯನ್ನೇ ಇಡೀ ನಾಡಿನ ಕತೆ ಎಂಬಂತೇ ಭಾವಿಸುವುದು, ನಾವು ನಮ್ಮ ಭಾಷಾಸಮಾಜಕ್ಕೆ ಮಾಡುವ ಅಪಮಾನ. ಈಗಾಗಲೇ ಭಾಷಾಭಿಮಾನದ ಹೆಸರಲ್ಲಿ ಹಿಂಸಾತ್ಮಕ ಪ್ರವೃತ್ತಿ ಬೆಳೆಯುತ್ತಿದೆ, ಇಂಥಹ ಅತಿಭೀತಿಗಳನ್ನು ಅನುಸರಿಸಿ. ದೊಡ್ಡಶಹರಗಳ ಸಮಸ್ಯೆಯನ್ನೇ ರಾಜ್ಯದ ಸಮಸ್ಯೆಯನ್ನಾಗಿ ನೋಡುವ ರಾಜಕಾರಣಿಗಳ ಪ್ರವ್ರತ್ತಿಯಂತಾಗಿ ಬಿಡಬಾರದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet