ಕಂಪ್ಯೂಟರ್‍‍ನಲ್ಲಿ ಕನ್ನಡ ಬಳಕೆದಾರರ ಗಮನಕ್ಕೆ -- ಕನ್ನಡ ಪದಪರೀಕ್ಷಕದ ಸದ್ಯದ ಸ್ಥಿತಿ.

ಕಂಪ್ಯೂಟರ್‍‍ನಲ್ಲಿ ಕನ್ನಡ ಬಳಕೆದಾರರ ಗಮನಕ್ಕೆ -- ಕನ್ನಡ ಪದಪರೀಕ್ಷಕದ ಸದ್ಯದ ಸ್ಥಿತಿ.

'ನುಡಿ' ತಂತ್ರಾಂಶವು ಪದಪರೀಕ್ಷಕವನ್ನು ಒಳಗೊಂಡಿದೆ. ಅದರಲ್ಲಿ ಎರಡು ಶಬ್ದಕೋಶಗಳ ಕಡತಗಳಿವೆ .
nudimain.dct ನುಡಿ ಜತೆಗೆ ಬರುವಂಥದು . ಸುಮಾರು ೪೦೦೦೦ ಶಬ್ದಗಳಿವೆ .
nudiuser.dct ಕಡತ ಬಳಕೆದಾರರು ಹೊಸದಾಗಿ ಸೇರಿಸುವ ಶಬ್ದಗಳನ್ನು ಸಂಗ್ರಹಿಸುವದು . ನಾನು ಅದರಲ್ಲಿ ಒಂದು ಲಕ್ಷ ಶಬ್ದಗಳನ್ನು ಸಂಗ್ರಹಿಸಿದೆ .

ಈಗ ನಾನು ಎರದೂ ಕಡತಗಳನ್ನು ಸೇರಿಸಿ ಒಂದು ಹೊಸ nudimain.dct ಮಾಡಿದ್ದೇನೆ. ಅದರಲ್ಲಿ ಮೇಲಿನ ಎರಡೂ ಕಡತಗಳ ಶಬ್ದಗಳು ಸೇರಿ ಸುಮಾರು ೧,೪೦,೦೦೦ ಶಬ್ದಗಳು ಅಕಾರಾದಿಯಲ್ಲಿ ವಿಂಗಡಿಸಲ್ಪಟ್ಟಿವೆ. ಹೀಗಾಗಿ ಇದರ ಜತೆಯಲ್ಲಿನ nudiuser.dct ಕಡತವನ್ನು ಹೊಸದಾಗಿ ಪ್ರಾರಂಭಿಸಬಹುದು .

ಇದರಿಂದ ಅನುಕೂಲಗಳು .

೧)nudiuser.dct ದಲ್ಲೂ ಬಳಕೆದಾರನು ೧,೫೦,೦೦೦ ಶಬ್ದಗಳನ್ನು ಸೇರಿಸಬಹುದು. ಅಂದರೆ ಒಟ್ಟು ೩,೦೦,೦೦೦ ಲಕ್ಷದತ್ತ ಈ ಶಬ್ದಸಂಗ್ರಹವನ್ನು ಬೆಳೆಸಬಹುದು. ಆಗ ಪದಪರೀಕ್ಷಕದ ಕ್ಷಮತೆ ಹೆಚ್ಚುವದು.

೨) ೧.೪೦,೦೦೦ ಶಬ್ದಸಂಗ್ರಹದ nudimain.dct ಅನ್ನ್ನು ಪರಿಷ್ಕರಿಸಬಹುದು. ( ಅದರಲ್ಲಿ ತಪ್ಪಾಗಿ ಶಬ್ದಗಳು ಸೇರಿದ್ದರೆ ಅವುಗಳನ್ನು ತೆಗೆದು ಹಾಕಬಹುದು)

೩) ಅಂತಿಮವಾಗಿ ೫ ಲಕ್ಷದ ಗುರಿಯನ್ನು ತಲುಪಿದಾಗ ಕನ್ನಡದಲ್ಲಿ ಮುಂದೆ ಹೊಸ ವಿಕೃತಿಗಳು ( ತಪ್ಪು ಕಾಗುಣಿತ) ಸರ್ವವ್ಯಾಪಕವಾಗಿ ಬಳಕೆಗೆ ಬರದಂತೆ ತಪ್ಪಿಸಬಹುದು . ( ಉದಾಹರಣೆಗೆ ಡೈವೋರ್ಸ್ ಗೆ ಸೋಡಚೀಟಿ ಎಂಬ ಪದ ಬಳಕೆಯಲ್ಲಿದೆ . ಆದರೆ ತಪ್ಪಾಗಿ ಬೆಂಗಳೂರು ಕಡೆಯ ಮುದ್ರಣ ಮಾಧ್ಯಮಗಳು ಸೋಡಾಚೀಟಿ ಎಂದು ಬರೆದೂ ಬರೆದೂ ಈಗಾಗಲೇ ಹಾಗೆಯೇ ಬಳಕೆಗೆ ಬಂದಿದೆ.) ಇಂಥವನ್ನು ಭವಿಷ್ಯದಲ್ಲಿ ತಪ್ಪಿಸಬಹುದು.

೩. ಈಗಾಗಲೇ ಮೈಕ್ರೋಸಾಫ್ಟ್ ನ ವರ್ಡ್ ತಂತ್ರಾಂಶಕ್ಕೆ ಪ್ಲಗ್-ಇನ್ ( ನೋಡಿ http://www.kannadasaahithya.com ) ಬಂದಿರುವದರಿಂದ ವರ್ಡ್ ನಲ್ಲೂ ಉಪಯೋಗಿಸಬಹುದಗಿದೆ.

ಮುಖ್ಯವಾಗಿ ಕಂಪ್ಯೂಟರ್‍‍ನಲ್ಲಿ ಕನ್ನಡ ಬಳಸುವವರು ಈ ಶಬ್ದಸಂಗ್ರಹವನ್ನು ಉಪಯೋಗಿಸಲು ಆರಂಭಿಸಬೇಕು. ಅಗಾಗ ತಮ್ಮ ಶಬ್ದಸಂಗ್ರಹವನ್ನು ಯಾರಾದರೊಬ್ಬರಿಗೆ ಕೊಟ್ಟು ಅವರು ಅವನ್ನೆಲ್ಲ ಸೇರಿಸಿ , ವಿಂಗಡಿಸಿ , ಡೂಪ್ಲಿಕೇಟುಗಳನ್ನು ತೆಗೆದು , ಮತ್ತೆ ಹಂಚಿ , ಆಗ ಹೊಸಶಬ್ದಗಳ ಸೇರ್ಪಡೆ ಬಲು ಬೇಗ ಬೇಗ ಆಗಿ ಎಲ್ಲ ಕನ್ನಡ ಬಳಕೆದಾರರರಿಗೆ ಬಹಳ ಅನುಕೂಲವಾಗಿ ಎಲ್ಲ ಕನ್ನಡಿಗರಿಗೂ ಅನುಕೂಲವಾಗುವದು. ಕನ್ನಡ ತಂತ್ರಜ್ಞಾನಕ್ಕೂ, ಕನ್ನಡಕ್ಕೂ , ಕನ್ನಡಿಗರಿಗೂ ಲಾಭವಾಗುವದಲ್ಲಿ ಸಂಶಯವಿಲ್ಲ.

--೧,೪೦,೦೦೦ ದ 'nudimain.dct' ಬೇಕಾದವರು ನನ್ನನ್ನು ಸಂಪರ್ಕಿಸಬಹುದು .
ಶ್ರೀಕಾಂತ ಮಿಶ್ರಿಕೋಟಿ

Rating
No votes yet

Comments