Poem scrap
(ಹುಚ್ಚು ಕನಸಿನ ತುಣುಕು) ಕವನದ ಭಾಗ
ಬಿಲ್ಲೆ ಮೇಲಿನ ಮೊಹರು ಕತ್ತಿ ಅಲುಗಿನ ಸೃಷ್ಟಿ
ರಕ್ತಚಿತ್ರಗಳ ರಹದಾರಿ ತಂದಿತಿಲ್ಲಿಗೆ ದಿಲ್ಲಿ
ಕ್ರೂರ ಮಹಾಮತಿ ತನ್ನ ಹೊಸ ತರ್ಕ ಹೆಣೆದಂತೆ
ಹುಟ್ಟಿತಿಲ್ಲಿ ಮಸಣರೂಪದ ಅವನ ರಾಜಧಾನಿ
ತಾರೆಸಂಕುಲ ತಂದು ಸಾಮ್ರಾಜ್ಯ ಸಿಂಗರಿಸಿ
ಇತಿಹಾಸದಲಿ ನೆಲೆಸಿರುವ ರಮ್ಯ ಬಿಂದು
ಮುಠ್ಠಾಳ ತುಘ್‌ಲಕ್‌ನ ಅತಿಬುದ್ದಿಯ ಕಥೆ
ಹುಚ್ಚು ಕನಸಿನ ತುಣುಕು ದೌಲತಾಬಾದು
Rating