ಜೇಸುದಾಸರ ಮಲೆಯಾಳಂ ಮಧುರ ಗೀತೆಯ ಅನುವಾದ

ಜೇಸುದಾಸರ ಮಲೆಯಾಳಂ ಮಧುರ ಗೀತೆಯ ಅನುವಾದ

ಮಲೆಯಾಳಂ ಭಾಷೆಯಲ್ಲಿ  ಗಾಯಕ ಜೇಸುದಾಸ್ ಅವರ ಒಂದು ಇಂಪಾದ ಹಾಡು -  'ನೀರ್ಮಿಳಿ ಪೀಲಿಯಲ್ ನೀರ್ಮಣಿ ತುಳುಂಬಿ'.     ಇದನ್ನು  ಇಲ್ಲಿ ಕೇಳಿ - https://youtu.be/kgLN-Z_YhzI

ಇದರ ಅರ್ಥ  ಇಂಗ್ಲೀಷಿನಲ್ಲಿ 
https://lyricstranslate.com/en/neermizi-peeliyil-neermani-tears-spilling.html ಕೊಂಡಿಯಲ್ಲಿ ಸಿಕ್ಕಿತು. ಅದನ್ನು ಬಳಸಿಕೊಂಡು ನಾನು ಅದನ್ನು ಕನ್ನಡಕ್ಕೆ  ಅನುವಾದಿಸಿದ್ದೇನೆ .  ಮೂಲದ ಧಾಟಿಯಲ್ಲಿಯೇ ನನ್ನ ಅನುವಾದವನ್ನೂ ಹಾಡಬಹುದು. 

ಕಣ್ಣಲಿ ಕಂಬನಿ  ತುಳುಕಿರಲು
ಅವುಗಳ ನೀನು ತಡೆದಿರಲು 
ಕಂಬನಿ ತೊಡೆಯದೆಯೇ,  ನಾ 
ಏನನೂ ನುಡಿಯದೆಯೇ
ನಿಂತೆನು ಪರಕೀಯ, ನಾ
ಪೂರಾ ಪರಕೀಯ
 
ಎದೆಯ ಒಳಗೋ ಸ್ನೇಹದ ಕಡಲು , ಹೊರ -
ಹೊಮ್ಮಲೇ ಇಲ್ಲ ಒಂದು ಹನಿ ತಾನು
ಮನಸಿನ ಭಾವವ ಮೌನದಿ ಅಡಗಿಸಿ ನಾವು
ಕುಳಿತೆವು ಗೆಳತಿ,   ಮಾತಿರದೆ

ಅಜ್ಞಾತ ಸಹಯಾತ್ರಿಕ ನಾನು
ಬಲ್ಲೆನು ನಿನ್ನೆದೆ ತುಡಿತಗಳ
ಅರಿಯದೆ ವಿನಿಮಯ ಮಾಡಿದೆವೆ
ಎಷ್ಟೋ  ಬಯಕೆಗಳ, ಮತ್ತೆ ನೋವುಗಳ 

Rating
Average: 4.3 (4 votes)