ಪುಸ್ತಕ ಪರಿಚಯ

ಲೇಖಕರು: addoor
February 24, 2023
ಪುರಾತನ ಕಾಲದ ಕತೆಗಳನ್ನು ಮಕ್ಕಳಿಗಾಗಿ ಸಾದರ ಪಡಿಸಿದ್ದಾರೆ ಎಂ. ಚೋಕ್ಸಿ ಮತ್ತು ಪಿ. ಎಂ. ಜೋಷಿಯವರು. ಆ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂ.ವಿ. ನಾರಾಯಣ ರಾವ್. ಕತೆಗಳಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಪುಲಕ್ ಬಿಶ್ವಾಸ್. ಇದು ಎರಡು ಭಾಗಗಳಲ್ಲಿ ಮುದ್ರಣವಾಗಿರುವ ಪುಸ್ತಕ. ಮೊದಲ ಕತೆ "ಆ ಪುರಾತನ ಮೊಹೆಂಜೊದಾರೋ ನಗರದಲ್ಲಿ”. ಐದು ಸಾವಿರ ವರುಷ ಹಿಂದಿನ ಕಾಲದಲ್ಲಿ ಅಲ್ಲಿನ ಜನಜೀವನ ಹೇಗಿತ್ತು ಎಂಬುದನ್ನು ಸರಳ ಭಾಷೆಯಲ್ಲಿ ತಿಳಿಸುವ ಕತೆ. ಹುಡುಗರ ತಂಡವೊಂದು ಕೆಲವರ ಮನೆಗೆ…
February 24, 2023
“ಸಾಮಾಜಿಕ ಜೀವನವನ್ನು ಆಧರಿಸಿ ವಾಸ್ತವದ ಜನಜೀವನವನ್ನೇ ಬಳಸಿ ಕಥೆಗಳನ್ನು ಹೆಣೆದಿರುವುದು ವಿಶೇಷ. ಪ್ರತಿ ಕಥೆಯಲ್ಲೂ ಒಂದು ಎಚ್ಚರದ ದನಿ ಇದೆ. ಹಳ್ಳಿ ಹಳ್ಳಿ ತಿರುಗುವ ಕಣಿ ಹೇಳುವವರು, ಸುಡುಗಾಡು ಸಿದ್ದರು ಇವರೆಲ್ಲರ ಮಾತು ಸತ್ಯವಾಗಲೂ ಹೇಗೆ ಸಾಧ್ಯ? ಎಂದು ಪ್ರಶ್ನಿಸುತ್ತಲೇ ಅವರ ಮಾತಿನ ಮೋಡಿಗೊಳಗಾಗಿ ಅವರು ಕೇಳಿದ್ದನ್ನೆಲ್ಲ ಕೊಡುವ ಹಳ್ಳಿಯ ಪರಿಸರದ ಮುಗ್ಧ ಹೆಣ್ಣು, ಕಣಿ ಹೇಳುವವರ ಚಾಲಾಕಿತನ, ಇವೆಲ್ಲವೂ ನಮ್ಮ ಸುತ್ತವೇ ನಡೆದಂತೆ ಭಾಸವಾಗುತ್ತದೆ'', ಎನ್ನುವುದು ನನ್ನ ಅನಿಸಿಕೆ. ಸುಧಾ ಎಂ…
ಲೇಖಕರು: Ashwin Rao K P
February 23, 2023
ರಾಜು ಹೆಗಡೆ ಇವರು ಬರೆದ ಕವಿತೆಗಳ ಸಂಕಲನೇ ‘ಕಣ್ಣಿನಲಿ ನಿಂತ ಗಾಳಿ' ನಮ್ಮ ಸಾವಧಾನ ಮತ್ತು ಅವಧಾನವನ್ನು ಉದ್ದಕ್ಕೂ ಬಯಸುವ ಈ ಪದ್ಯಗಳ ಸಂಕಲನದ ಕುರಿತು ಪ್ರೀತಿಯಿಂದ ನಾಲ್ಕು ಮಾತು ಬರೆದಿದ್ದಾರೆ ಪತ್ರಕರ್ತ, ಲೇಖಕ ‘ಜೋಗಿ’. ಅವರ ಹೇಳುವಂತೆ ರಾಜು ಹೆಗಡೆ ಕವಿತೆಗಳನ್ನು ಒಪ್ಪಿಸುತ್ತಾ ಹೋಗುತ್ತಾರೆ. ಒಪ್ಪಿಗೆಗಾಗಿ ಕಾಯುವುದಿಲ್ಲ. ಅವರ ಕವಿತೆಗಳೂ ಕೂಡ ತಮ್ಮನ್ನು ಪೂರ್ತಿಯಾಗಿ ಒಪ್ಪಿಸಿಕೊಂಡು ಸುಮ್ಮನುಳಿಯುತ್ತವೆ. ಜೋಗಿ ಅವರು “ಕಣ್ಣಿನಲಿ ನಿಂತ ಗಾಳಿ” ಕವಿತೆಗಳ ಕೃತಿಗೆ ಬರೆದ ಮುನ್ನುಡಿಯ…
ಲೇಖಕರು: Ashwin Rao K P
February 21, 2023
ವಿದ್ಯಾಭಾರತಿ ಕರ್ನಾಟಕ ಇವರು “ನಮ್ಮ ರಾಷ್ಟ್ರ ನಿರ್ಮಾಪಕರು" ಎಂಬ ಪುಸ್ತಕದಲ್ಲಿ ಭಾರತ ಮಾತೆಯ ಹೆಮ್ಮೆಯ ಮಕ್ಕಳ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಈ ಪುಸ್ತಕದ ಹಿಂದಿ ಮೂಲ ಡಾ॥ ಶ್ಯಾಮಸುಂದರ ತ್ರಿಪಾಠಿ ಮತ್ತು ಇದನ್ನು ಕನ್ನಡಕ್ಕೆ ಅನುವಾದ ಮಾಡಿದವರು ಶ್ರೀಮತಿ ಮಾಲತಿ ಎಂ. ಕಾನಿಟ್ಕರ್. ಈ ಬರಹಗಳನ್ನು ಸಂಪಾದಿಸಿದವರು ಡಾ॥ ಹಿಮ್ಮತ್ ಸಿಂಹ್ ಸಿನ್ಹಾ ಇವರು.  ಲೇಖಕರಾದ ಶ್ಯಾಮಸುಂದರ ತ್ರಿಪಾಠಿ ಇವರು ತಮ್ಮ ನುಡಿಯಲ್ಲಿ “ನಮ್ಮ ರಾಷ್ಟ್ರ ನಿರ್ಮಾಪಕರ ಸಂಕ್ಷಿಪ್ತ ಪರಿಚಯ ನೀಡುವಂತಹ ಒಂದು…
February 20, 2023
“ಅನಗತ್ಯ ಮತ್ತು ಕುತೂಹಲ ಇಲ್ಲದ ಸಾಕಷ್ಟು ಸಂಗತಿಗಳನ್ನು ಬಿಟ್ಟು ಮಂಡೇಲಾ ಅವರ ಬದುಕಿನ ಎಲ್ಲ ಮುಖ್ಯ ಘಟ್ಟಗಳನ್ನು ಮತ್ತು ಸ್ವಾರಸ್ಯಕರವಾದ ವಿಷಯಗಳನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಮಂಡೇಲಾ ಅವರು ಬರೆದಿರುವ ಆತ್ಮಕಥೆಯ ಶೈಲಿ ಅಸಾಧಾರಣವಾಗಿದೆ. ಅವರ ಬದುಕು ಕೂಡ ಕತ್ತಲ ಖಂಡ ಆಫ್ರಿಕಾದ ಇತಿಹಾಸದ ಒಂದು ಮುಖ್ಯ ಅಧ್ಯಾಯವಾಗಿದೆ,” ಎನ್ನುತ್ತಾರೆ ಲೇಖಕ ಎಂ. ವೆಂಕಟಸ್ವಾಮಿ. ಅವರು ತಮ್ಮ ‘ನೆಲ್ಸನ್ ಮಂಡೇಲಾ ಜೀವನಚರಿತ್ರೆ’ ಕೃತಿಗೆ ಬರೆದಿರುವ ಲೇಖಕರ ಮಾತು ನಿಮ್ಮ ಓದಿಗಾಗಿ... “ನೆಲ್ಸನ್ ಮಂಡೇಲಾ…
ಲೇಖಕರು: Ashwin Rao K P
February 18, 2023
ಕಪ್ಪು ವರ್ಣದ ಚೂಪು ಹಲ್ಲುಗಳ ವ್ಯಕ್ತಿಯೊಬ್ಬನ ಮುಖಪುಟವನ್ನು ಹೊಂದಿರುವ ‘ಓಟಾ ಬೆಂಗ' ಎಂಬ ಪುಸ್ತಕವು ಹಲವು ಬರಹಗಳ ಸಂಕಲನ. ಲೇಖಕರಾದ ರೋಹಿತ್ ಚಕ್ರತೀರ್ಥ ಇವರು ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ಪತ್ರಿಕೆಗಳಿಗೆ ಬರೆದ ಚುಟುಕು ಬರಹಗಳು ಪುಸ್ತಕದ ರೂಪದಲ್ಲಿ ಹೊರಬಂದಿವೆ. ಈ ಬರಹಗಳಲ್ಲಿ ಸುಖಕ್ಕಿಂತ ಅಧಿಕ ದುಃಖದ ಛಾಯೆ ಇದೆ.  ಪುಸ್ತಕದ ಪುಟ ತೆರೆದಂತೆ ‘ಓಟಾ ಬೆಂಗ' ಸೇರಿ ೧೧ ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವನ್ನು ಓದಿದಾಗಲೂ ನೋವು ಸಹಜವಾಗಿ ಕಾಡುತ್ತದೆ. ಒಂದಿಷ್ಟು ಅದೃಷ್ಟ ಕೈ…