ಪುಸ್ತಕ ಪರಿಚಯ

ಲೇಖಕರು: Ashwin Rao K P
March 18, 2023
ಲೇಖಕರಾದ ಎಂ ಆರ್ ಆನಂದ ಅವರು ಬರೆದ ಸುಮಾರು ನಾಲ್ಕುನೂರು ಚಿಲ್ಲರೆ ಪುಟಗಳ ಸರಳ ಶೈಲಿಯ ಕೃತಿಯೇ ‘ಸ್ತ್ರೀಯಾನ'. ಇಲ್ಲಿ “ವೈದೇಹಿ ಮತ್ತು ಮಾನಸಿಯರಂತೂ ನಿಜವಾದ ಅರ್ಥದಲ್ಲಿ ಶೋಷಿತರು. ಶಿಕ್ಷಣ ಮತ್ತು ಉದ್ಯೋಗವಿದ್ದರೂ ಇವರಿಬ್ಬರು ತಮಗಾದ ಅನ್ಯಾಯ ಮತ್ತು ಮಾನಭಂಗಗಳನ್ನು ಪ್ರತಿಭಟಿಸದೇ ಮೌನವಾಗಿ ಪುರುಷ ದಬ್ಬಾಳಿಕೆಯನ್ನು ಸಹಿಸಿ ಕಣ್ಣೀರು ಹಾಕುತ್ತಾರೆ. ಕಾದಂಬರಿಯ ಆ ಕಾಲಮಾನವೇ ಹಾಗೆ: 'ಪ್ರಾಣಕ್ಕಿಂತ ಮಾನ ದೊಡ್ಡದು' ಎಂಬುದು ಆಗಿನ ಮೌಲ್ಯವಾಗಿತ್ತು,” ಎನ್ನುವುದು ಕಾದಂಬರಿಗೆ ಮುನ್ನುಡಿಯನ್ನು…
ಲೇಖಕರು: Ashwin Rao K P
March 16, 2023
ಜ್ಯೋತಿ ಇ.ಹಿಟ್ನಾಳ್ ಇವರು ಬರೆದ ಪುಟ್ಟ ಮಹಿಳೆಯರ ಆರೋಗ್ಯ ಸಂಬಂಧಿ ಪುಸ್ತಕ “ಮುಟ್ಟು ಮತ್ತು ಆರೋಗ್ಯ" ಬಿಡುಗಡೆಯಾಗಿ ಬಹಳ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. "ಇತ್ತೀಚಿನ ದಿನಗಳಲ್ಲಿ ಮುಟ್ಟನ್ನು ಕುರಿತು ಇದ್ದ ಅನೇಕ ಪೂರ್ವಗ್ರಹಗಳು ನಗರಗಳಲ್ಲಿ ಮರೆಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಆರೋಗ್ಯದ ಹಿನ್ನೆಲೆಯಲ್ಲಿ ಮನೆಮದ್ದು, ವೈದ್ಯಕೀಯ ನೆರವು ಕುರಿತು ಮುಕ್ತ ಮಾತುಕತೆಯಾಗುತ್ತಿದೆ. ಮುಟ್ಟಾದ ಹೆಣ್ಣುಮಕ್ಕಳೊಡನೆ ಹೇಗೆ ನಡೆದುಕೊಳ್ಳಬೇಕು, ಮುಟ್ಟಾದ…
ಲೇಖಕರು: addoor
March 16, 2023
ಕನ್ನಡದ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆ “ಕಿರಗೂರಿನ ಗಯ್ಯಾಳಿಗಳು” ಇದರ ನಾಟಕದ ರೂಪಾಂತರ ಹಲವು ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಕೃಷ್ಣೇಗೌಡನ ಆನೆ” ಕತೆ ಹಲವು ಭಾಷೆಗಳಿಗೆ ಅನುವಾದವಾಗಿದೆ. ಮಲೆನಾಡಿನ ಮೂಲೆಯ ಹಳ್ಳಿ ಕಿರಗೂರು. ಅಲ್ಲಿನ ಆಗುಹೋಗುಗಳ ಕಥನ “ಕಿರಗೂರಿನ ಗಯ್ಯಾಳಿಗಳು”. ತೇಜಸ್ವಿಯವರು ಮೂಡಿಗೆರೆಯ ಹತ್ತಿರ ಕಾಫಿ ಎಸ್ಟೇಟಿನಲ್ಲಿ ವಾಸಿಸುತ್ತಾ ಸುತ್ತಮುತ್ತಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದವರು…
March 15, 2023
ದಾಸರ ಕೀರ್ತನೆ ಬಗ್ಗೆ ನಾನು ಬರೆದ ಕೀರ್ತನೆಗಳ ಸಂಕಲನ ‘ದಾಸರ ದಾರಿಯಲ್ಲಿ' ಶ್ರೇಷ್ಟಮಟ್ಟದ ದಾಸರ ಕೃಷಿ ವಿಶ್ವವ್ಯಾಪಿಯಾಗಿ, ಪ್ರಮುಖವಾಗಿ ಪುಂರಂದರ ದಾಸರು ಮತ್ತು ಕನಕದಾಸರು ಹಾಗೂ ಜಗನ್ನಾಥ ದಾಸರ ಕೀರ್ತನೆಗಳಿಂದ ಜನಪ್ರೀಯತೆ ಪಡೆದ ಈ ಸಾಹಿತ್ಯವು ಅಕ್ಷರಸ್ಥರಿಂದ ಹಿಡಿದು ಅನಕ್ಷರಸ್ಥರವರೆಗೂ ಪರಿಚಯ. ತನ್ನ ಅರ್ಥಗರ್ಭಿತ ಸಂದೇಶ ಮತ್ತು ಸಂಗೀತ ಸಂಯೋಜನೆಗೆ ಒಳಪಡುವ ಸಾಹಿತ್ಯವಾದುದರಿಂದ ಸಾರ್ವತ್ರಿಕ ಮನ್ನಣೆ ಪಡೆದಿದೆ ಎನ್ನುವುದು ನನ್ನ ಅಭಿಪ್ರಾಯ. ‘ದಾಸರ ದಾರಿಯಲ್ಲಿ’ ಕೀರ್ತನೆಗಳಿಗೆ ಬರೆದ…
ಲೇಖಕರು: Ashwin Rao K P
March 14, 2023
ಗಿರಿಮನೆ ಶ್ಯಾಮರಾವ್ ಅವರ “ಮಲೆನಾಡಿನ ರೋಚಕ ಕತೆಗಳು” ಸರಣಿಯ ಹದಿಮೂರನೇ ಪುಸ್ತಕವೇ “ಮೃಗ ಬೇಟೆ". ಈಗಾಗಲೇ ೧೨ ಪುಸ್ತಕಗಳು ಈ ಸರಣಿಯಲ್ಲಿ ಪ್ರಕಟವಾಗಿದ್ದರೂ ಎಲ್ಲಿಯೂ ರೋಚಕತೆಗೆ ಕಡಿಮೆಯಾಗದಂತೆ ಓದುಗರನ್ನು ಮುಂದಿನ ಸರಣಿ ಪುಸ್ತಕಕ್ಕೆ ಕಾಯುವಂತೆ ಮಾಡುವುದೇ ಗಿರಿಮನೆಯವರ ಬರವಣಿಗೆಯ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಕಾಡಿನ ಪರಿಸರದಲ್ಲೇ ಬಹಳಷ್ಟು ವರ್ಷಗಳನ್ನು ಕಳೆದ ಗಿರಿಮನೆಯವರಿಗೆ ಅಲ್ಲಿಯ ಕಥೆಗಳನ್ನು ಬಹಳ ಸೊಗಸಾಗಿ, ರಸವತ್ತಾಗಿ ಹೇಳುವ ಕಲೆ ಕರತಲಾಮಲಕವಾಗಿದೆ.  ‘ಮೃಗಬೇಟೆ' ಬಗ್ಗೆ…
ಲೇಖಕರು: Ashwin Rao K P
March 11, 2023
"ಒಬ್ಬರು ಇನ್ನೊಬ್ಬರನ್ನು ಪ್ರೀತಿಸಿ, ಆದರೆ ಪ್ರೇಮವನ್ನು ಬಂಧನವಾಗಿಸಿಕೊಳ್ಳಬೇಡಿ; ಬದಲಿಗೆ ಅದು ನಿಮ್ಮಿಬ್ಬರ ಆತ್ಮಗಳ ದಂಡೆಗಳ ನಡುವೆ ಹರಿದಾಡುವ ಸಾಗರವಾಗಿರಲಿ" -ಖಲೀಲ್ ಗಿಬ್ರಾನ್ ಶಿವಶಂಕರ ಕಡದಿನ್ನಿ ಇವರು ಬಹಳ ಸೊಗಸಾದ ಗಜಲ್ ಗಳನ್ನು ಒಟ್ಟುಗೂಡಿಸಿ ‘ಒಡಲು ಉರಿದಾಗ' ಎಂಬ ಸಂಕಲನವಾಗಿ ಹೊರತಂದಿದ್ದಾರೆ. ಈ ೮೪ ಪುಟಗಳ ಪುಟ್ಟ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಮಲ್ಲಿನಾಥ ಎಸ್ ತಳವಾರ ಇವರು. ಅವರ ಮುನ್ನುಡಿಯಲ್ಲಿ ವ್ಯಕ್ತವಾದ ಭಾವಗಳು ಹೀಗಿವೆ... ಒಡಲು ತಂಪಾಗಿರಲಿ…