ಪುಸ್ತಕ ಪರಿಚಯ

ಲೇಖಕರು: addoor
March 10, 2023
ರಾಷ್ಟ್ರಕವಿ ಕುವೆಂಪು ಅವರ ಎಂಟು ಕತೆಗಳ ಸಂಕಲನ ಇದು. ಎಂಟು ದಶಕಗಳ ಮುಂಚೆ ಬರೆದ ಸಣ್ಣ ಕತೆಗಳಾದರೂ ಇವು ಇಂದಿಗೂ ಪ್ರಸ್ತುತ. ಮೊದಲ ಕತೆ "ನನ್ನ ದೇವರು". ಮದುವೆಯಾಗಿ ಒಂದೇ ವರುಷದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಯುವತಿಯೊಬ್ಬಳ ಮನದ ತುಮುಲಗಳ ಕತೆಯಿದು. ಭೀಷಣ ಜ್ವರದಿಂದ ಅವಳ ಪತಿ ತೀರಿಕೊಂಡರು. ಅವಳ ಸ್ವಗತ ಆ ಸಂದರ್ಭದ ದಾರುಣತೆಯನ್ನು ಹೀಗೆ ತಿಳಿಸುತ್ತದೆ:  “ಮರುದಿನದಲ್ಲಿ ಶ್ಮಶಾನದಲ್ಲಿ ನನ್ನ ಕೈಬಳೆ ಒಡೆದರು. ನನ್ನ ಮೈಮೇಲಿದ್ದ ಆಭರಣಗಳನ್ನೆಲ್ಲ ತೆಗೆದರು. ಮಂಗಲಸೂತ್ರ ಬಿಚ್ಚಿದರು. ……
ಲೇಖಕರು: Ashwin Rao K P
March 09, 2023
ಸಮಕಾಲೀನ ಕನ್ನಡ ಲೇಖಕರಲ್ಲಿ ಪ್ರಸಿದ್ಧರಾಗಿರುವ ವಿವೇಕ ಶಾನಭಾಗ ಅವರು ಕಳೆದ ಕೆಲವು ವರ್ಷಗಳಲ್ಲಿ ರಚಿಸಿದ ೬ ಕಥೆಗಳು ‘ಘಾಚರ್ ಘೋಚರ್' ಕಥಾ ಸಂಕಲನದಲ್ಲಿ ಕೂಡಿವೆ. ಘಾಚರ್ ಘೋಚರ್, ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ, ವಿಚಿತ್ರ ಕತೆ – ಇವು ಈ ಸಂಕಲನದಲ್ಲಿರುವ ವಿವೇಕರ ಕಥೆಗಳು. ಈ ಪುಸ್ತಕದ ಮುನ್ನುಡಿ ‘ಒಂದೆರಡು ಮಾತು' ಇಲ್ಲಿ ವಿವೇಕರು ತಮ್ಮ ಅನಿಸಿಕೆಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ “ಪ್ರಸ್ತುತ ಸಂಕಲನದ ಕತೆಗಳು ಕಳೆದ ಏಳು ವರ್ಷಗಳ ಅವಧಿಯಲ್ಲಿ…
ಲೇಖಕರು: Ashwin Rao K P
March 07, 2023
‘ನಿಗೂಢ ನಾಣ್ಯ' ಕೃತಿಯ ಲೇಖಕರಾದ ವಿಠಲ್ ಶೆಣೈ ಇವರು ಮತ್ತೊಂದು ಕುತೂಹಲ ಭರಿತ ಕಾದಂಬರಿಯನ್ನು ಹೊರತಂದಿದ್ದಾರೆ. ಈ ಕಾದಂಬರಿಯ ಬಗ್ಗೆ ಲೇಖಕರಾದ ವಿಠಲ್ ಶೆಣೈ ಅವರು ತಮ್ಮ ಮಾತುಗಳಲ್ಲಿ ಹೇಳುವುದು ಹೀಗೆ… “ಇದು ಪ್ರಾಯಶಃ ಬಲು ಚಿಕ್ಕ ಮುನ್ನುಡಿ- ನನ್ನುಡಿ! ನನ್ನ ಮೂರನೇ ಕಾದಂಬರಿ ಬರೆಯಲು ಪ್ರೇರಣೆ ಯೂಟ್ಯೂಬ್ ನಲ್ಲಿ ನಾನು ನೋಡಿದ ಒಂದು ವಿಡಿಯೋದಲ್ಲಿ ಗಮನಿಸಿದ ಒಂದು ಕುತೂಹಲಕಾರಿ ಅಂಶ. ಅದರ ಬಗ್ಗೆ ಹೆಚ್ಚು ಹೇಳಲು ಹೋದರೆ ಈ ಕತೆಯ ಒಂದು ಮುಖ್ಯ ಸಾರವೇ ಹೊರಬೀಳಬಹುದು. ೨೦೨೦ರ ಕೊರೋನಾ ಲಾಕ್…
March 05, 2023
“ಕೋಡಗನ ಕೋಳಿ ನುಂಗಿ"ಯ ಲೇಖಕ ಮಹಾದೇವ ಬಸರಕೋಡ ಅವರ ಕೃತಿಯ ಲೇಖನಗಳಲ್ಲಿ ಒಂದು ಸ್ಪಷ್ಟ ಚಿಂತನೆಯಿದೆ. ಅವರ ಯೋಚನೆಗಳಲ್ಲಿ ದ್ವಂದ್ವ, ತರ್ಕ ಕಾಣುವುದಿಲ್ಲ. ಲೇಖಕರ ದೃಷ್ಟಿಕೋನವು ಜನರ ಬದುಕಿನ ಯೋಚನೆಗಳ ಕಡೆ ಗಮನ ಹರಿಸದೇ, ಅವರ ಅಂತರಂಗದ ಕಲ್ಮಷಗಳಿಗೆ ಕನ್ನಡಿ ಇಟ್ಟು ಅದರ ಪರಿಶುದ್ಧತೆಯ ಕಡೆಗೆ ಗಮನ ಹರಿಸಿದೆ. ನಮ್ಮಲ್ಲಿನ ಅಂಧತ್ವ, ಮೂಢನಂಬಿಕೆಗಳು, ಆಚರಣೆಗಳು ತೊಲಗಿ ಸಮಾಜಮುಖಿ ಜಾಗೃತಿಯ ಚಿಂತನೆಯಲ್ಲಿ ಮುಳುಗಬೇಕು ಎಂಬ ತಿಳಿಮಾತನ್ನು ಅವರು ಈ ಕೃತಿಯ ಮೂಲಕ ಮನವರಿಕೆ ಮಾಡಿ ಕೊಟ್ಟಿದ್ದಾರೆ"…
ಲೇಖಕರು: Ashwin Rao K P
March 04, 2023
ಸಾವಯವ ಕೃಷಿಕ, ಗ್ರಾಹಕ ಬಳಗ ಇವರು ಈಗಾಗಲೇ ಎರಡು ಪುಟ್ಟದಾದ ಮಾಹಿತಿ ಪೂರ್ಣ ಪುಸ್ತಕಗಳನ್ನು ಹೊರತಂದಿದ್ದಾರೆ. ಇದೇ ಮಾಲಿಕೆಯ ಮೂರನೆ ಪುಸ್ತಕ ಸವಿತಾ ಎಸ್ ಭಟ್ ಅಡ್ವಾಯಿ ಅವರ ‘ಮರೆತು ಹೋಗುತ್ತಿರುವ ಪೌಷ್ಟಿಕ ಅಡುಗೆಗಳು'. ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಸವಿತಾ ಎಸ್ ಭಟ್ ಅವರ ಅಡುಗೆಯ ಬಗ್ಗೆ ಬರೆದ ಬರಹಗಳು ಬೆಳಕು ಕಂಡಿವೆ. ಅಡುಗೆ ಪುಸ್ತಕಗಳು ಬಿಡುಗಡೆಯಾಗಿವೆ. ಆದರೆ ಇಲ್ಲಿರುವ ಪುಟ್ಟ ಪುಸ್ತಕದಲ್ಲಿ ಅವರು ಪೌಷ್ಟಿಕ ಆಹಾರದ ಅಗತ್ಯತೆಯನ್ನು ಪೂರೈಸುವ ಅಡುಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ…
ಲೇಖಕರು: addoor
March 02, 2023
ಭಾರತದ ಜನಪ್ರಿಯ ಮಕ್ಕಳ ಪುಸ್ತಕಗಳ ಲೇಖಕರಾದ ರಸ್ಕಿನ್ ಬಾಂಡ್ ಅವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಅಹಲ್ಯಾ ಚಿಂತಾಮಣಿ. ರಸ್ಕಿನರ  ಹಲವಾರು ಇಂಗ್ಲಿಷ್ ಪುಸ್ತಕಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದವಾಗಿವೆ. ಚಿತ್ರಗಳಿರುವ ಈ ಪುಸ್ತಕದಲ್ಲಿವೆ ಎರಡು ಭಾಗಗಳು: ಅಂಕಲ್ ಕೆನ್ ಮತ್ತು ಪಲಾಯನದ ಸಾಹಸ ಯಾತ್ರೆ. ಮೊದಲ ಭಾಗದ ಆರು ಅಧ್ಯಾಯಗಳಲ್ಲಿ ಲೇಖಕರು ತನ್ನ ಮಾವ ಕೆನ್ ಅವರ ವಿಚಿತ್ರ ಸ್ವಭಾವಗಳನ್ನು ಪರಿಚಯಿಸುತ್ತಾರೆ. "ಸೋಮಾರಿ ಅಂಕಲ್ ಕೆನ್” ಅಧ್ಯಾಯದಲ್ಲಿ, ಆ ಆಸಾಮಿಯ ಬಗ್ಗೆ ಅವರು…