ಪುಸ್ತಕ ಪರಿಚಯ

ಲೇಖಕರು: addoor
February 17, 2023
ನಿನ್ನೆ ಪ್ರಕಟವಾದ ಭಾಗ-1ರಲ್ಲಿ ಈ ಪುಸ್ತಕದ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ 2 ಭಾಗಗಳ ಮಾಹಿತಿ ನೀಡಲಾಗಿತ್ತು. "ಕಲಿಯುವುದು" ಎಂಬ ಕೊನೆಯ ಅಧ್ಯಾಯ ಹೀಗೆ ಆರಂಭವಾಗುತ್ತದೆ: "ಮಕ್ಕಳು ಏಕೆ ಶಾಲೆಗೆ ಹೋಗುತ್ತಾರೆ? ಅವರು ಏಕೆ ತರಗತಿಯಲ್ಲಿ ಕುಳಿತುಕೊಳ್ಳಬೇಕು? ಅವರು ಏಕೆ ಟೀಚರ್ ಹೇಳಿಕೊಡುವ ಪಾಠಗಳನ್ನು ಕೇಳಿಸಿಕೊಳ್ಳಬೇಕು? ಶಾಲೆಗೆ ಹೋಗುವುದಕ್ಕಿಂತ ಇಡೀ ದಿನ ಆಡುತ್ತಾ ಓಡುತ್ತಾ ಕಳೆಯುವುದೇ ಎಷ್ಟೋ ಚೆನ್ನಾಗಿರುತ್ತದೆ ಎಂದು ಬಹಳ ಮಕ್ಕಳಿಗೆ ಅನ್ನಿಸಬಹುದು." ಮುಂದುವರಿದು,…
ಲೇಖಕರು: addoor
February 16, 2023
ಇದೊಂದು ಅಪರೂಪದ ಪುಸ್ತಕ. ಸುಂದರ್ ಸರುಕ್ಕೈ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಮಾಧವ ಚಿಪ್ಪಳಿ. ನೋಡುವುದು, ಯೋಚನೆ, ಓದುವುದು, ಬರೆಯುವುದು, ಗಣಿತ, ಕಲೆ, ಒಳ್ಳೆಯತನ, ಕಲಿಯುವುದು - ಎಂಬ ಎಂಟು ಅಧ್ಯಾಯಗಳಲ್ಲಿ ಈ ಮೂಲಭೂತ ಸಂಗತಿಗಳ ಬಗ್ಗೆ ಸರಳವಾಗಿ ವಿವರಿಸಲಾಗಿದೆ. ಪುಸ್ತಕದ ಪ್ರಸ್ತಾವನೆಯಲ್ಲಿ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ ಎರಡು ಭಾಗಗಳಿವೆ. “ಮಕ್ಕಳಿಗಾಗಿ” ಭಾಗದಲ್ಲಿ ಬರೆದಿರುವ ಕೆಲವು ವಿಷಯಗಳು ಹೀಗಿವೆ: “ಈ ಪುಸ್ತಕವು ನಿಮಗೆ ತಾತ್ತ್ವಿಕವಾಗಿ ಯೋಚನೆ…
ಲೇಖಕರು: Ashwin Rao K P
February 16, 2023
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಇದರ ಬೈರವೈಕ್ಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಇವರ ಬಗ್ಗೆ ಅವರ ಶಿಷ್ಯರೂ, ಮಂಗಳೂರಿನ ಶಾಖಾ ಮಠದ ಮುಖ್ಯಸ್ಥರೂ ಆಗಿರುವ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಬರೆದ ಪುಸ್ತಕವೇ “ಮಹಾತಪಸ್ವಿ". ಆದಿಚುಂಚನಗಿರಿ ಮಠ ಹಾಗೂ ಮಠದ ಮುಖಾಂತರ ನಡೆಯುತ್ತಿರುವ ವಿದ್ಯಾದಾನ ಮೊದಲಾದ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗ್ಗೆ ಮತ್ತು ಶ್ರೀ ಗುರುಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪುಸ್ತಕಕ್ಕೆ ತಮ್ಮ ‘ಅನುಗ್ರಹ…
February 15, 2023
“ಪರಿಸರ ಮಾಲಿನ್ಯದಲ್ಲಿ ಸರ್ಕಾರದ ಪಾತ್ರ ಎಷ್ಟಿದೆ, ಯಾವ ಯಾವ ಹಂತದಲ್ಲಿ ಯಾರು ಯಾರು ಎಷ್ಟು ಕಮಿಷನ್ ತಿನ್ನುತ್ತಾರೆ, ಮತ್ತೆ ಒಂದು ಸಣ್ಣ ಸಮಸ್ಯೆ ನಿರ್ಲಕ್ಷಿಸಿದರೆ ಅದು ಮುಂದೆ ಹೇಗೆ ಒಂದು ಸರ್ಕಾರದ ಪತನಕ್ಕೆ ಕಾರಣಾವಾಗುತ್ತೆ ಎಂಬುದನ್ನು ತೀರಾ ಸಾಮಾನ್ಯವಾಗಿ, ನೇರವಾಗಿ ಅರ್ಥವಾಗುವಂತೆ ಕೆ.ಆರ್. ಚಂದ್ರಶೇಖರ್ ಅವರು ಬರೆದಿದ್ದಾರೆ" ಎನ್ನುವುದು ನನ್ನ ಅನಿಸಿಕೆ. ʻನಮಾಮಿ ಗಂಗೆʼ ಪುಸ್ತಕ ನನ್ನ ಕೈ ಸೇರಿ ಸುಮಾರು ತಿಂಗಳುಗಳೇ ಕಳೆದಿದ್ದರೂ, ಎರಡು ಬಾರಿ ಅರ್ಧ ಓದಿ ಅನಿವಾರ್ಯ ಮತ್ತು ಅಗತ್ಯ…
ಲೇಖಕರು: Ashwin Rao K P
February 14, 2023
ಅಕ್ಷಯ ನಾಗ್ರೇಶಿ ಅವರ “ಮ್ಯಾಜಿಕ್ ನಡಿದು ಹೋಯಿತು..!” ಎನ್ನುವ ಕೃತಿಯು ಹದಿಹರೆಯಕ್ಕೆ ಕಾಲಿಡುತ್ತಿರುವ ಯುವಕ ಯುವತಿಯರ ಹುಡುಗು ಮನದಲ್ಲಿ ಕಾಡುವ ಕಥೆಗಳ ಸಂಗ್ರಹ. “ಪರೀಕ್ಷೆಯಲ್ಲಿ ಫೇಲಾಗಿ ಆತ್ಮಹತ್ಯೆಗೆ ಪ್ರಯತ್ನಿಸುವ ವಿದ್ಯಾರ್ಥಿಗಳು ಮತ್ತು ಅವರ ಮಾನಸಿಕ ಲೋಕದತ್ತಲೇ ಸುತ್ತುವ ಕತೆ ಇದು" ಎನ್ನುತ್ತಾರೆ ಸಾಹಿತಿ ಸುನಂದಾ ಕಡಮೆ. ಸುನಂದಾ ಕಡಮೆ ಅವರು ‘ಮ್ಯಾಜಿಕ್ ನಡಿದು ಹೋಯಿತು...!’ ಪುಸ್ತಕಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಅದರಲ್ಲಿ ಅವರು ವ್ಯಕ್ತ ಪಡಿಸಿದ ಭಾವನೆಗಳು…
February 12, 2023
“ಎಷ್ಟೋ ಜನ ತಮಗೆ ಗೊತ್ತಿರುವ ವಿಚಾರಕ್ಕೆ ಅಥವಾ ಕಣ್ಣಾರೆ ಕಂಡ ವಿಚಾರಕ್ಕೆ ಸಾಕ್ಷಿಯಾಗಲು ಒಪ್ಪುವುದಿಲ್ಲ. ಇನ್ನು ಕೆಲವರು ತಮಗೆ ಸಂಬಂಧವೇ ಇರದ ವಿಚಾರದಲ್ಲಿ ಸಾಕ್ಷಿಯಾಗಿ ಒದ್ದಾಡುತ್ತಿರುತ್ತಾರೆ. ಇನ್ನು ಕೆಲವರಿಗೆ ಸಾಕ್ಷಿ ಹೇಳುವುದೇ ವೃತ್ತಿಯೂ ಆಗಬಲ್ಲದು. ಸುನಂದಕ್ಕನ ಕೇಸಿಗೆ ಮನು ಸಾಕ್ಷಿಯಾದ ನಂತರ ಏನಾಯಿತು? ಒಂದು "ಸಾಕ್ಷಿ" ಕೇವಲ ಕೇಸನ್ನು ಅಷ್ಟೇ ಅಲ್ಲ, ಸಂಬಂಧಗಳನ್ನು, ನೆಮ್ಮದಿಯ ಬದುಕನ್ನು ತಿರುವು ಮುರುವು ಮಾಡಿ ಬಿಡಬಲ್ಲದು," ಎನ್ನುವುದು ನನ್ನ ಅನಿಸಿಕೆ. ಲೇಖಕ ನರೇಂದ್ರ ಪೈ…