ನಿಷ್ಪಾಪಿ ಸಸ್ಯಗಳು (ಭಾಗ ೩೭) - ಕಾಂಡ್ಲಾ ಸಸ್ಯ

ನಾನು ಕಳೆದ ಭಾನುವಾರ ಪುಟ್ಟ ಹೊರಸಂಚಾರಕ್ಕೆ ಹೋಗಿದ್ದೆ. ಅದು ಬ್ರಹ್ಮಾವರದ King of Kings ಎಂಬ ಪಿಕ್ನಿಕ್ ಪಾಯಿಂಟ್ ಗೆ. ಅದು ಸೀತಾನದಿ ಅರಬೀ ಸಮುದ್ರ ಸೇರಲು ಧಾವಿಸಿ ಬರುವಂತಹ ಒಂದು ಅಳಿವೆ ಪ್ರದೇಶ. ಅಲ್ಲಿಂದ ಮುಂದೆ ಸೀತಾನದಿ ಸುವರ್ಣಾ ನದಿಯ ಜೊತೆ ಸೇರಿ ಸಂಗಮವಾಗಿ ಸಾಗರ ಸೇರುವುದಂತೆ. ನದಿಯೊಂದು ಸಮುದ್ರಕ್ಕೆ ಸೇರುವ ಜಾಗವನ್ನು ಅಳಿವೆ ಪ್ರದೇಶವೆನ್ನುವರು.

Image

ಒಂದು ಒಳ್ಳೆಯ ನುಡಿ - 261

ಸರ್ವಜ್ಞ ಎನ್ನುವ ಹೆಸರಿನಿಂದ ತ್ರಿಪದಿಗಳನ್ನು ಲೋಕಮುಖಕ್ಕೆ ನೀಡಿದ, ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಕವಿ, ಪ್ರಚಾರ ಬಯಸದ, ಪ್ರಾಪಂಚಿಕ ಸುಖಕ್ಕೆ ಆಶಿಸದ, ಅದ್ಭುತ ಶೈಲಿಯ ಹಾಡುಗಾರ.

Image

ಗೋಡೆಗೆ ಬರೆದ ನವಿಲು (ಕಥಾ ಸಂಕಲನ)

ಪುಸ್ತಕದ ಲೇಖಕ/ಕವಿಯ ಹೆಸರು
ಸಂದೀಪ ನಾಯಕ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ.60/-

ಛಂದ ಪುಸ್ತಕ 2009ನೇ ಸಾಲಿನ ಬಹುಮಾನ ಪಡೆದ ಕಥಾಸಂಕಲನ ಇದು. ಕಥಾಸ್ಪರ್ಧೆಯ ತೀರ್ಪುಗಾರರಾದ ಅಮರೇಶ ನುಗಡೋಣಿ ಹತ್ತಾರು ಕತೆಗಾರರ ಸುಮಾರು 100 ಕತೆಗಳನ್ನು ಓದಿ, ಇದನ್ನು ಆಯ್ಕೆ ಮಾಡಿದ್ದಾರೆ.

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೧) - ದಿನಕರ ದೇಸಾಯಿ

ಚುಟುಕು ಬ್ರಹ್ಮ ಎಂದೇ ಪ್ರಸಿದ್ಧರಾಗಿರುವ ದಿನಕರ ದೇಸಾಯಿ ಅವರು ಜನಿಸಿದ್ದು ೧೯೦೯ ಸೆಪ್ಟೆಂಬರ್ ೧೦ರಂದು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಲಗೇರಿ. ಬೆಂಗಳೂರಿನಲ್ಲಿ ಇಂಟರ್ ಮೀಡಿಯೇಟ್‌ ಶಿಕ್ಷಣ ಪಡೆದಿದ್ದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೊತ್ತರ ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಪಡೆದಿದ್ದರು.  

Image

ಒಂದು ಒಳ್ಳೆಯ ನುಡಿ (260) ವಿಶ್ವ ಮಾತೃಭಾಷೆ ದಿನ

ಮಾತೃಭಾಷೆ ಮಾನವನ ಆರಂಭಿಕವಾದ ಮಾತುಗಳ ಭಾಷೆ. ಮೊದಲು ನೆನಪಾಗುವ ನುಡಿ ‘ಅಮ್ಮ’. ಅದುವೇ ನಮ್ಮ ಮಾತೃಭಾಷೆ. ಮಗುವಿನ ತೊದಲು ನುಡಿ ತಾಯಿಭಾಷೆ. ಈ ಪವಿತ್ರವಾದ, ಶ್ರೇಷ್ಠವಾದ ಭಾಷೆಯನ್ನು ಮರೆಯಬಾರದು.

Image

ಕೇಳಿಸದ ಸದ್ದುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಜಯಶ್ರೀ ಬಿ ಕದ್ರಿ
ಪ್ರಕಾಶಕರು
ಸುಮಾ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ: ೨೦೨೩

ಜಯಶ್ರೀ ಕದ್ರಿಯವರ ನೂತನ ಕವನ ಸಂಕಲನ ‘ಕೇಳಿಸದ ಸದ್ದುಗಳು'ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಯತ್ರಿಯಾದ ಎಂ ಆರ್ ಕಮಲ. ಅವರ ಪ್ರಕಾರ “ಜಯಶ್ರೀ ಕದ್ರಿಯವರಿಗೆ ಕವಿತೆಯೆನ್ನುವುದು ತುದಿ ಬೆರಳಿಗಂಟಿದ ಪರಾಗ. ಹೂವಿನ ಘಮಲು. ರಾಗವೊಂದನ್ನು ಜೀವದಲ್ಲಿ ಮೆಲ್ಲನೆ ಅರಳಿಸುವ ಸೋಜಿಗ. ಒಳಗಿನ ಕುದಿತ,ಇರಿತಗಳಿಂದ ಬಿಡುಗಡೆಯನ್ನು ಪಡೆವ ಹಾದಿ.

ಮತ್ತೊಂದು ಬೃಹತ್ ರೈತ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ ದೆಹಲಿ...

ಇತಿಹಾಸದಲ್ಲಿ ಅನೇಕ ಏಳು ಬೀಳುಗಳಿಗೆ ಸಾಕ್ಷಿಯಾಗಿರುವ ದೆಹಲಿ ಕೆಲವೇ ತಿಂಗಳುಗಳ ಹಿಂದೆ ಒಂದು ವರ್ಷದ ನಿರಂತರ ಯಶಸ್ವಿ ರೈತ ಹೋರಾಟವನ್ನು ಕಂಡಿದೆ. ಜಾಗತೀಕರಣದ ನಂತರ ಅತಿ ಹೆಚ್ಚು ನಷ್ಟಕ್ಕೆ, ತೊಂದರೆಗೆ ಒಳಗಾಗಿದ್ದು ಭಾರತದ ರೈತ ಸಮೂಹ.

Image

ಸ್ಟೇಟಸ್ ಕತೆಗಳು (ಭಾಗ ೮೮೨)- ಕಾಲಹರಣ

ಅದೊಂದು ತುಂಬಾ ದೊಡ್ಡ ಗೋಡೌನು. ಅದರಲ್ಲಿ ಹಲವಾರು ಜನ ಸಾಧಕರ ದೊಡ್ಡ ಪುಸ್ತಕಗಳನ್ನ ಇಡಲಾಗಿದೆ, ಜೊತೆಗೆ ಸೋತವರ ಪುಸ್ತಕಗಳನ್ನು ಅಲ್ಲಿ ಶೇಖರಿಸಿ ಇಡಲಾಗಿದೆ. ನಮಗೆ ಬೇಕಾದರೆ ಯಾವ ಪುಸ್ತಕವನ್ನು ಬೇಕಾದರೂ ಓದಿ ನೋಡಬಹುದು.

Image