ಸ್ಟೇಟಸ್ ಕತೆಗಳು (ಭಾಗ ೧೩೫೪) - ಮೊಳೆ

ಮೊಳೆಯು ಸುಮ್ಮನಾಗಿ ನಿಂತು ಬಿಟ್ಟಿದೆ, ಜನ‌ ಗಮನಿಸೋದಿಲ್ಲ ಅನ್ನೋದು ಗೊತ್ತಿದ್ದರೂ ಗೋಡೆಯ ಒಳಗೆ ಆಳಕ್ಕಿಳಿದು ಭಾರ ಹೊತ್ತು ಚಂದದ ಚಿತ್ರಗಳನ್ನ, ಮಾಹಿತಿಯ ಫಲಕಗಳನ್ನು ಹೊತ್ತು ನಿಂತಿದೆ. ಜನ ನೋಡಿ‌ ಹೋಗುತ್ತಿದ್ದಾರೆ. ಚಿತ್ರವನ್ನು ಆಸ್ವಾದಿಸಿ ಮಾಹಿತಿಯನ್ನ ಮನಸ್ಸಿಗಿಳಿಸಿ ಹೊರಟಿದ್ದಾರೆ. ಯಾರಿಗೂ ಮೊಳೆಯ ಬಗ್ಗೆ ಗಮನವೇ ಇಲ್ಲ.

Image

ಭಾಮತಿ

ಈ ದಿನ ಭಾವವಿಕಾಸದಲ್ಲಿ ಮಗ್ನತೆಯ ಪಾತ್ರದ ಬಗ್ಗೆ ತಿಳಿದುಕೊಳ್ಳೋಣ. ಭಾವ ವಿಕಸಿತವಾಗಬೇಕು. ಭಾವ ವಿಕಾಸವಾಗುವ ಸಾಧನಗಳ ಬಗ್ಗೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಕರ್ಮ ಯೋಗದ ಪ್ರವಚನದಲ್ಲಿ ಹೇಳಿದ ಕಥೆ.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 24

 

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.

205)  ಮೂಲ ಹಾಡು - ತೇರೆ ಬಿನಾ ಜಿಯಾ ಜಾಯೆ ನಾ

ನನ್ನ ಅನುವಾದ :
ನಿನ್ನ ವಿನಾ ಇರಲಾಗದು
ಇರಲಾಗದು ನಿನ್ನ ವಿನಾ
ಉಸಿರಲ್ಲಿ ಉಸಿರು ಆಡದು

206) ಮೂಲ ಹಾಡು -  ನಾರೀ ನಾರೀ (ಅರಾಬಿಕ್  ಹಾಡು )

ನನ್ನ ಅನುವಾದ :
ನಾರೀ ನಾರೀ, ಯಾರು ನಿಂಗೆ ಮೇಲು ?
ನಾರೀ ನಾರೀ, ಮರುಳು ನಿಂಗೆ ನಾನು!

207) ಮೂಲ ಹಾಡು - ಮುಝೆ ಕಿಸೀಸೆ ಪ್ಯಾರ ಹೋ ಗಯಾ

ನನ್ನ ಅನುವಾದ :
ಓ ಯಾರಲ್ಲೋ ನಂಗೆ ಪ್ರೀತಿ ಆಯಿತು
ಪ್ರೀತಿ ಆಯಿತು ಬದುಕು ಒಂದು ರೀತಿ ಆಯಿತು!

ಬದುಕಿನೊಂದಿಗೆ ವಿಜ್ಞಾನ ಕಲಿಸಿದ ನನ್ನಪ್ಪ

ನನ್ನ ತಂದೆ ಓದಿದ್ದು ಎಂಟನೆಯ ತರಗತಿ. ಆಮೇಲೆ ಹತ್ತನೆಯ ತರಗತಿ ಪಾಸು ಮಾಡಿಕೊಂಡರು ಅದೂ ದನಗಳನ್ನು ಕಾಯುತ್ತಾ. ಆಮೇಲೆ HTC ತರಬೇತಿ ಮುಗಿಸಿ ತಾವೇ ಶಾಲೆ ತೆರೆದು ಶಿಕ್ಷಕರಾದರು. ಆದ್ದರಿಂದ ನನ್ನೂರಿಗೆ ಶಾಲೆ ಬಂದುದು ನಾನು ಹುಟ್ಟುವುದಕ್ಕಿಂತ ಎಷ್ಟೋ ಮೊದಲು. ಆದ್ದರಿಂದ ನನ್ನ ಶಾಲಾ ವ್ಯಾಪ್ತಿಗೆ ಬರುವ ನಾಲ್ಕಾರು ಮಜರೆಗಳು ಯಾವಾಗಲೋ ಸಂಪೂರ್ಣ ಸಾಕ್ಷರ.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 23

 

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.

195)  ಮೂಲ ಹಾಡು - ಧೀರೆ ಧೀರೆ ಪ್ಯಾರ್ ಕೋ ಬಢಾನಾ ಹೈ

ನನ್ನ ಅನುವಾದ:
ಮೆಲ್ಲ ಮೆಲ್ಲ ಪ್ರೀತಿಯನ್ನು ಹೆಚ್ಚಿಸುವ
ಎಲ್ಲ ಎಲ್ಲೆ ಮೀರಿ ಹೋಗುವ
ನನಗೆ ನಿನ್ನ ಪ್ರೀತಿ ಮಾಡಲಿದೆ
ಎಲ್ಲ ಎಲ್ಲೆ ಮೀರಿ ಹೋಗಲಿದೆ.

ಬದುಕು ಹೀಗೆ ಆಗಲಿದೆ
ಖುಷಿ ಇರಲಿದೆ ಎಲ್ಲೆಡೆಗೆ
ಅಷ್ಟು ಪ್ರೀತಿ ಕೊಡುವೆ ನಾನು
ಕೇಳು ನಲ್ಲೆಯೇ

ಇನ್ನು ದುಃಖ ಇರೋದಿಲ್ಲ.
ಪ್ರೀತಿ ಕಡಿಮೆ ಆಗೋಲ್ಲ
ನಲ್ಲ ಕೇಳು
ಇದುವೇ ನನ್ನ ಆಣೆಯು

196)  ಮೂಲ ಹಾಡು - ಸಾಂಸ್ ಮೇ ತೇರಿ ಸಾಂಸ್ ಮಿಲೇ ತೋ

ಅಪ್ಪನ ದಿನ : ತಂದೆ ಎಂಬ ಪಾತ್ರವ ಕುರಿತು...

ಅಪ್ಪಾ, ಸ್ವಲ್ಪ ಇಲ್ಲಿ ನೋಡಪ್ಪಾ… ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೫೩) - ಬೆಕ್ಕಿನ ಪಾಠ

ಮನೆಗೊಂದು ಬೆಕ್ಕು ತಂದಿದ್ದಾರೆ. ತುಂಬಾ ಸಣ್ಣದಿರುವಾಗ ತಂದು ಮನೆಯಲ್ಲಿ ಸಾಕುವುದಕ್ಕೆ ಆರಂಭ ಮಾಡಿದ್ದಾರೆ. ಆ ಬೆಕ್ಕಿಗೆ ಬೇಕು ಬೇಡದನ್ನೆಲ್ಲ ಕೇಳಿ ನೀಡಿದ್ದಾರೆ, ಪ್ರೀತಿ ಸರ್ವಸ್ವವನ್ನು ಧಾರೆದಿದ್ದಾರೆ. ಆ ಮನೆಯಲ್ಲಿ ಬೆಕ್ಕು ಕೂಡ ಒಬ್ಬ ಸದಸ್ಯನಾಗಿ ಬದುಕೋದಕ್ಕೆ ಪ್ರಾರಂಭ ಆಯ್ತು. ಬೆಕ್ಕು ಬೆಳೆದು ದೊಡ್ಡವನಾಗಿತ್ತು.

Image

ನನ್ನ ಮಾತು ಒಂದಿಷ್ಟು ಕೇಳಿ!

ನಾನು ನಿಮ್ಮೆಲ್ಲರನ್ನೂ ಕಾಯುತ್ತಿರುವ, ಸಾಕುತ್ತಿರುವ, ಪ್ರತಿ ಕ್ಷಣವೂ ನಿಮ್ಮನ್ನು ಉಳಿಸಿಕೊಳ್ಳುತ್ತಿರುವ ಮೂಕ ರಕ್ಷಕನಾಗಿದ್ದೇನೆ. ನೀವು ಉಸಿರಾಡುತ್ತಿರುವ ಆಮ್ಲಜನಕದಿಂದ ಹಿಡಿದು ಕುಡಿಯುವ ನೀರಿನವರೆಗೆ, ಮನೆ ಕಟ್ಟಲು ಬೇಕಾಗುವ ಕಚ್ಚಾ ವಸ್ತುಗಳಿಂದ ಹಿಡಿದು, ಓಡಾಡಲು ಬೇಕಾದ ರಸ್ತೆಯವರೆಗೂ ಎಲ್ಲವನ್ನು ಒದಗಿಸಿರುವೆ. ನನ್ನೊಡಲ ಸರ್ವಸ್ವವನ್ನೂ ನಿಮಗೆ ಅರ್ಪಿಸಿದ್ದೇನೆ.

Image