ಸ್ಟೇಟಸ್ ಕತೆಗಳು (ಭಾಗ ೧೩೫೪) - ಮೊಳೆ

ಮೊಳೆಯು ಸುಮ್ಮನಾಗಿ ನಿಂತು ಬಿಟ್ಟಿದೆ, ಜನ ಗಮನಿಸೋದಿಲ್ಲ ಅನ್ನೋದು ಗೊತ್ತಿದ್ದರೂ ಗೋಡೆಯ ಒಳಗೆ ಆಳಕ್ಕಿಳಿದು ಭಾರ ಹೊತ್ತು ಚಂದದ ಚಿತ್ರಗಳನ್ನ, ಮಾಹಿತಿಯ ಫಲಕಗಳನ್ನು ಹೊತ್ತು ನಿಂತಿದೆ. ಜನ ನೋಡಿ ಹೋಗುತ್ತಿದ್ದಾರೆ. ಚಿತ್ರವನ್ನು ಆಸ್ವಾದಿಸಿ ಮಾಹಿತಿಯನ್ನ ಮನಸ್ಸಿಗಿಳಿಸಿ ಹೊರಟಿದ್ದಾರೆ. ಯಾರಿಗೂ ಮೊಳೆಯ ಬಗ್ಗೆ ಗಮನವೇ ಇಲ್ಲ. ಮೊಳೆಯೊಂದು ಗಟ್ಟಿಯಾಗಿ ನಿಂತಿಲ್ಲವಾದರೆ ಎಲ್ಲವೂ ಕೆಳಗಿರುತ್ತಿತ್ತು. ಹಾಗಾಗಿ ಮೊಳೆಯು ಬೇಸರಿಸಿಕೊಂಡಿದೆ. ಜನರ ಗಮನ ತನ್ನ ಕಡೆಗಿಲ್ಲದ್ದನ್ನ ಕಂಡು, ತನ್ನವಷ್ಯಕತೆಯ ಅರಿವು ಮೂಡದಿದ್ದದ್ದನ್ನ ಕಂಡು. ಆದರೆ ಅದನ್ನ ಮರೆತು ಕಾರ್ಯವರ್ತಿಯಾಗಿ ಸುಮ್ಮನಿದೆ. ಅದರಂತಾಗಬೇಕೆಂದು ಅಪ್ಪನ ಉವಾಚ. ನೀನಿಲ್ಲದೆ ಕೆಲಸವಾಗಬಾರದು, ಕೆಲಸವಾಗುವಾಗ ನೀನು ಕಾಣಲೇಬಾರದು. ಇದ್ದು ಇಲ್ಲದಂತಿರಬೇಕು. ಅಪ್ಪನ ಮಾತನ್ನ ಪಾಲಿಸುತ್ತಾ ಊರೊಳಗೆ ಉಳಿದುಬಿಟ್ಟಿದ್ದಾನೆ. ಇನ್ನೂ ಯಾರ ಗಮನಕ್ಕೂ ಬಾರದೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ