ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 21
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
175) ಮೂಲ ಹಾಡು - ಪ್ಯಾರ ಮೇ ಹೋತಾ ಹೈ ಕ್ಯಾ ಜಾದೂ
ನನ್ನ ಅನುವಾದ:
ಪ್ರೀತಿಲಿ ಎಂತಹ ಮಾಯಕ ಇಹುದು
ಬಲ್ಲೆ ನೀನು ಬಲ್ಲೆ ನಾನು
ಇರುವುದೇ ಇಲ್ಲ ಮನದ ನಿಯಂತ್ರಣ
ಬಲ್ಲೆ ನೀನು ಬಲ್ಲೆ ನಾನು
ಗುನುಗುನು ಎಂದು ಅಲೆವುದು ಏಕೆ
ದುಂಬಿಯು ತಾ ತೋಟದಲಿ
ತಿಂಗಳ ರಾತ್ರಿ ಏಕೆ ಚಕೋರ
ಹುಚ್ಚಾಗುವುದು ಹೇಳು ನೀನು
ಚೈತ್ರದಿ ಏಕೆ ಕೋಗಿಲೆ ಕೂಗು
ಬಲ್ಲೆ ನೀನು ಬಲ್ಲೆ ನಾನು
- Read more about ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 21
- Log in or register to post comments