ಸ್ಟೇಟಸ್ ಕತೆಗಳು (ಭಾಗ ೧೩೫೧) - ಚೆಸ್

ಸ್ಟೇಟಸ್ ಕತೆಗಳು (ಭಾಗ ೧೩೫೧) - ಚೆಸ್

ಅಪ್ಪ ರಾಜಿಯ ಟೇಬಲ್‌ ಮೇಲೆ ದಿನವೂ ಒಂದೊಂದೇ ಚೆಸ್ ಕಾಯಿನ್ ಇಟ್ಟು ಹೋಗುತ್ತಿದ್ದರು, ರಾಜಿ ಅದನ್ನು‌ ನೋಡಿ ಆಮೇಲೆ‌ ಬದಿಗೆ ತೆಗೆದಿಡುತ್ತಿದ್ದಳು. ಕೊನೆಗೆ ಎಲ್ಲಾ ಕಾಯಿನ್ ಗಳು ಮುಗಿದ‌ ನಂತರ ಮಗಳ ಬಳಿ‌ ಕುಳಿತು ಮಾತಿಗಾರಂಬಿಸಿದರು, ನೋಡು ಮಗಾ ನೀನು ದಿನವೂ ಒಂದೊಂದು ಕಾಯಿನ್ ನೋಡುತ್ತಾ ಇದ್ದೆ. ಎಲ್ಲದರ‌‌ ಕೆಲಸವೂ ನಿನಗೆ ಗೊತ್ತು ಹಾಗಿರುವಾಗ ನೀನು ಈ ಕಾಯಿನ್ ಗಳಲ್ಲಿ ಯಾವುದಾಗ ಬಯಸ್ತಿ. ಅಪ್ಪಾ ಇದರಲ್ಲಿ‌ ಪ್ರತಿಯೊಂದು‌ ಕಾಯಿನ್ ಗಳು ವಿಭಿನ್ನ ಪ್ರತಿಯೊಂದು ಅದರ ಕೆಲಸವನ್ನ ಮಾಡುತ್ತಿದೆ. ಆದರೆ ಇದರಲ್ಲಿ ನಾನು ರಾಜನಾಗಿ ಎಲ್ಲರೂ ನನ್ನ ಉಳಿವಿಗೆ ಕೆಲಸ ಮಾಡುವಂತೆ ಆಗಬೇಕು. ಇಲ್ಲದಿದ್ದರೆ ಮಂತ್ರಿಯಾಗಿ ಎಲ್ಲಾ‌ ತರಹವೂ ಓಡಾಟ ನನ್ನದಾಗಬೇಕು. ಅಥವಾ ಕುದುರೆಯ ತರಹ ವಿಭಿನ್ನವಾಗಿ ಉಳಿದುಬಿಡಬೇಕು. ನನ್ನ ಮುಂದಿನ ಜೀವನದ ಅವಶ್ಯಕತೆಗೆ ತಕ್ಕನಾಗಿ ಚಲಿಸುವಂತವಳಾಗುತ್ತೇನೆ. ನೀನು ರಾಜನಾಗಿದ್ದು ನಿನ್ನನ್ನು‌ ಗೆಲ್ಲಿಸುತ್ತೇನೆ ಅಪ್ಪ ಎಂದಳು. ಮಗಳ ಮಾತು ಕೇಳಿ ಪಾಠ ಅರ್ಥವಾದದ್ದಕ್ಕೆ ಅಪ್ಪನ‌ ಮುಖದಲ್ಲಿ ನಗು ಮೂಡಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ