ಎಚ್ಚರ, ಮಕ್ಕಳು ನಿಮ್ಮನ್ನು ಅನುಸರಿಸುತ್ತಿದ್ದಾರೆ !

ಹೌದು, ಮಕ್ಕಳು ಸಣ್ಣವರಿರುವಾಗ ಹೆಚ್ಚಾಗಿ ತಮ್ಮ ಪೋಷಕರನ್ನು ಅನುಸರಿಸುತ್ತಾರೆ. ಅವರು ನಡೆದುಕೊಳ್ಳುವ ರೀತಿ, ಮಾತನಾಡುವ ಕ್ರಮ ಮೊದಲಾದ ವಿಷಯಗಳನ್ನು ಬೇಗನೇ ಗ್ರಹಿಸಿಕೊಳ್ಳುತ್ತಾರೆ. ಪ್ರತೀ ದಿನ ಗಲಾಟೆ ಮಾಡಿಕೊಳ್ಳುವ ದಂಪತಿಗಳ ಮಕ್ಕಳು ಹೆಚ್ಚಾಗಿ ಒಂದೋ ಅಂತರ್ಮುಖಿಯಾಗಿರುತ್ತಾರೆ ಅಥವಾ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ.

Image

ವಿವಾದಾಸ್ಪದ ಪ್ರಸ್ತಾಪ

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಸ್ತಾಪವೊಂದು ಈಗ ವಿವಾದ ಸೃಷ್ಟಿಸಿದ್ದರಲ್ಲಿ ಅಚ್ಚರಿಯಿಲ್ಲ. ದೇಶದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆಯಿದೆ ಎಂದು ಹೇಳಿರುವ ಕಾಂಗ್ರೆಸ್ ಪ್ರಣಾಳಿಕೆಯು, ಸಂಪತ್ತಿನ ಹಂಚಿಕೆಯಲ್ಲಿ ಎಲ್ಲರಿಗೂ ಸಮಾನತೆಯಿರಬೇಕು ಎಂಬಂತಹ ಮಾತುಗಳನ್ನಾಡಿದೆ.

Image

ರಾಜಕುಮಾರನಾದ ಮುತ್ತುರಾಜ...

ಡಾಕ್ಟರ್ ರಾಜಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಹೇಳುತ್ತಾ..... ಏಪ್ರಿಲ್ 24. ಒಬ್ಬ ಜನಪ್ರಿಯ ವ್ಯಕಿಯ ವ್ಯಕ್ತಿತ್ವವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಸುವುದು ತುಂಬಾ ಕಷ್ಟ. ಜನರ ಕಾಲ್ಪನಿಕ ಲೋಕವೇ ಬೇರೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೪೬) - ಹೊನೆಗನಿ ಸೊಪ್ಪು

ಇಂದು ನಿಮ್ಮ ಶಾಲೆಯ ಮೈದಾನದ ಅಂಚಿನಲ್ಲಿ, ಮನೆಯ ಹಿತ್ತಲು, ತೋಟ, ಬೇಲಿ, ಕರೆಯ ಅಂಚು ಅಥವಾ ಮಾರ್ಗದ ಬದಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಒಂದು ಸಸ್ಯದ ಪರಿಚಯವನ್ನು ಮಾಡಿಕೊಳ್ಳೋಣ. ಇದು ತನಗೆ ದೊರಕಿದ ಮಣ್ಣು, ನೀರು, ಹವಾಮಾನಕ್ಕೆ ಅನುಗುಣವಾಗಿ ತನ್ನಲ್ಲೆ ಬದಲಾವಣೆ ಮಾಡಿಕೊಂಡು ಬದುಕಲು ಉಪಾಯ ಕಂಡುಕೊಂಡಂತಹ ಸಸ್ಯ. ನೀರಿನ ಬದಿಯಲ್ಲಿದ್ದರೆ ಸಸ್ಯದ ಕಾಂಡ ಟೊಳ್ಳಾಗಿರುತ್ತದೆ.

Image

ನನ್ನದೊಂದು ಬದುಕಿನ ಪುಸ್ತಕ…(ಭಾಗ 2)

ಕೆಲವೊಮ್ಮೆ ಸಂಜೆಯ ನಡಿಗೆಗಾಗಿ ಪಾರ್ಕಿನಲ್ಲಿ ಹೋಗುತ್ತಿರುವಾಗ ಅಲ್ಲಿ ಕಾಣುವ ಯುವಕ ಯುವತಿಯರ ನಗುವನ್ನು ನೋಡಿದಾಗ ಯೌವ್ವನದ ನನ್ನ ಪ್ರೀತಿಯು ನೆನಪಾಗುತ್ತದೆ.

Image

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫೦) - ಚನ್ನವೀರ ಕಣವಿ

ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರ ಜೂನ್ ೨೮ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ.

Image

ಭವದ ಅಗುಳಿ

ಪುಸ್ತಕದ ಲೇಖಕ/ಕವಿಯ ಹೆಸರು
ಸಂತೋಷ ಅಂಗಡಿ
ಪ್ರಕಾಶಕರು
ಅನ್ವೇಷಣೆ ಪ್ರಕಾಶನ, ಚಿಕ್ಕಲಸಂದ್ರ, ಬೆಂಗಳೂರು -೫೬೦೦೬೧
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ : ೨೦೨೩

'ಭವದ ಅಗುಳಿ’ ಸಂತೋಷ ಅಂಗಡಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಲ್. ಪುಷ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇಲ್ಲಿನ ಕವಿತೆಗಳಲ್ಲಿ ತಾನು ಕಂಡ, ಅರ್ಥೈಸಿಕೊಂಡ ಬದುಕನ್ನು ಹಿಡಿಯಲೆತ್ನಿಸುವ ಒಬ್ಬ ಕವಿಯಿದ್ದಾನೆ. ಇಲ್ಲ ಲೋಕ ಸಾಂಗತ್ಯದ ಜೊತೆಗೆ, ಅವನಿಗೆ ಆತ್ಮ ಸಾಂಗತ್ಯವೂ ಸಹ ಸಾಧ್ಯ. ಹೀಗಾಗಿ ಅವನು ಹೊರಗೂ, ಒಳಗೂ ಸಂವಾದಿಸಬಲ್ಲವನು.

ನನ್ನದೊಂದು ಬದುಕಿನ ಪುಸ್ತಕ…(ಭಾಗ 1)

ವಿಶ್ವ ಪುಸ್ತಕ ದಿನದ ಅಂಗವಾಗಿ, ಏಪ್ರಿಲ್ 23. ಈ ದಿನದ ನೆನಪಾಗಿ ನನಗೂ ಪುಸ್ತಕ ಬರೆಯುವ ಆಸೆಯಾಗುತ್ತಿದೆ. ಬಹಳಷ್ಟು ಜನರು, ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ, ಬರೆಯುತ್ತಲು ಇದ್ದಾರೆ. ಆ ಪುಸ್ತಕಗಳ ಶೀರ್ಷಿಕೆಗಳೇ ನನಗೊಂದು ಅದ್ಭುತ, ಆಶ್ಚರ್ಯ, ಕುತೂಹಲಕರ.

Image