ಬಾಳೆಹಣ್ಣಿನ ಸಾಸಿವೆ

Image

ಬಾಳೆಹಣ್ಣನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಕಾಯಿತುರಿ, ಕೆಂಪುಮೆಣಸು, ಹಸಿಮೆಣಸು, ಸಾಸಿವೆ, ಎಳ್ಳು, ಕೊತ್ತಂಬರಿ ಅರಿಸಿನ ಹಾಕಿ ರುಬ್ಬಿ ಇದಕ್ಕೆ ಮೊಸರು, ಉಪ್ಪು ಬೇಕಾದರೆ ಬೆಲ್ಲ ಹೆಚ್ಚಿದ ಬಾಳೆಹಣ್ಣು, ಹಾಕಿ ಚೆನ್ನಾಗಿ ಕಯ್ಯಾಡಿಸಿ ಇದಕ್ಕೆ ಕೆಂಪು ಮೆಣಸು, ಸಾಸಿವೆ, ಎಣ್ಣೆ, ಇಂಗು ಹಾಕಿ ಚಟಪಟ ಎಂದ ಮೇಲೆ ಸಾಸಿವೆಗೆ ಹಾಕಿ ಕೈಯ್ಯಾಡಿಸಿ, 

ಬೇಕಿರುವ ಸಾಮಗ್ರಿ

ಬಾಳೆಹಣ್ಣು ೨-೩. ಕಾಯಿತುರಿ ೧/೨ ಲೋಟ, ಸಾಸಿವೆ ೧ ಚಮಚ, ಕೊತ್ತಂಬರಿ ೧/೪ ಚಮಚ. ಎಳ್ಳು ೧/೪ ಚಮಚ,ಕೆಂಪು ಮೆಣಸು ೧/೨ ಚೂರು, ಹಸಿಮೆಣಸು ೧-೨, ಅರಸಿನ ೧/೪ ಚಮಚ. ಮೊಸರು ೧-೨ ಚಿಕ್ಕಸೌಟು, ರುಚಿಗೆ ಉಪ್ಪು ಬೇಕಾದರೆ ಬೆಲ್ಲ. ಒಗ್ಗರಣೆಗೆ ಕೆಂಪು ಮೆಣಸು, ಸಾಸಿವೆ, ಎಣ್ಣೆ ೧ ಚಮಚ, ಬೇಕಾದರೆ ಇಂಗಿನ ಚೂರು, 

ಸಮಾನತೆಯ ಕನಸಿಗಾಗಿ ದುಡಿದ ಮಹಾತ್ಮ - ಜೋತಿಬಾ ಪುಲೆ

ನವೆಂಬರ್ ೨೮, ಈ ದೇಶದ ನಿಜವಾದ 'ಮಹಾತ್ಮ' ಎಂದು ಬಾಬಾಸಾಹೇಬರಿಂದ ಕರೆಸಿಕೊಂಡ ಜೋತಿಬಾ ಫುಲೆಯವರು ನಿಧನರಾದ ದಿನ. ಬಾಬಾಸಾಹೇಬರು ತಮ್ಮ ಬದುಕಿನ ಮೂರು ಜನ ಮುಖ್ಯ ಗುರುಗಳಲ್ಲಿ ಜೋತಿಬಾ ಫುಲೆಯವರನ್ನು ಒಬ್ಬರೆಂದು ಒಪ್ಪಿಕೊಂಡಿದ್ದರು.

Image

ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 4)

ಬೆಳಗ್ಗೆ ಐದು ಗಂಟೆಗೇ ರೆಡಿಯಾದ ನಾವು 5 ಕಿ.ಮೀ.ದೂರವಿದ್ದ ಜಗನ್ನಾಥ ದೇವಸ್ಥಾನಕ್ಕೆ ಬಸ್ಸು ಹೋಗಲು ಅನುಮತಿ ಇಲ್ಲದ್ದರಿಂದ ಅಟೊ ರಿಕ್ಷಾಗಳಲ್ಲಿ ಹೋದೆವು. ಗೈಡು ಅಲ್ಲಿ ನಮಗಾಗಿ ಕಾಯುತ್ತಿದ್ದರು. ಮೊದಲು ಪಶ್ಚಿಮ ದ್ವಾರದ ಮೂಲಕ ದೇವಸ್ಥಾನವನ್ನು ಪ್ರವೇಶಿಸಿದ ನಾವು ಗೈಡು ಸೂಚಿಸಿದಂತೆ ಒಂದೊಂದೇ ಮುಖ್ಯ ಗುಡಿಗಳನ್ನು ಸಂದರ್ಶಿಸುತ್ತ ನಡೆದೆವು.

Image

ಕನಸನ್ನು ನನಸಾಗಿಸಿ ‘ಯಶಸ್ವಿ’ಯಾದ ಜೈಸ್ವಾಲ್ !

ಕಳೆದ ವಾರವಷ್ಟೇ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆದ ಬೋರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ೧೬೧ ರನ್ ಗಳಿಸಿ ಭಾರತದ ದಾಖಲೆಯ ಅಂತರದ ವಿಜಯಕ್ಕೆ ಕಾರಣರಾದ ಯಶಸ್ವಿ ಜೈಸ್ವಾಲ್ ಸಾಗಿ ಬಂದ ಹಾದಿ ಹೂವಿನದ್ದಲ್ಲ. ಹೂವಿಗಿಂತ ಅಧಿಕ ಮುಳ್ಳುಗಳೇ ತುಂಬಿದ್ದ ಈ ಹಾದಿಯಲ್ಲಿ ನಡೆದು ಬಂದು ತಾನು ಬಾಲ್ಯದಲ್ಲಿ ಕಂಡಿದ್ದ ಕನಸುಗಳನ್ನು ನನಸು ಮಾಡಿಕೊಂಡಿದ್ದಾರೆ.

Image

ಅರ್ಥಪೂರ್ಣ ಚರ್ಚೆ ಅಗತ್ಯ

ಸಂಸತ್ತಿನ ಪ್ರಮುಖ ಉದ್ದೇಶವೇ ಶಾಸನ ರಚನೆ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮತ್ತು ಪರಿಹಾರ. ಇತ್ತೀಚಿನ ವರ್ಷಗಳಲ್ಲಿ ಸಂಸತ್ತು ಈ ಮೂಲ ಉದ್ದೇಶಗಳನ್ನೇ ಮರೆತಂತಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದ ಬಳಿಕ, ೧೮ ನೇ ಲೋಕಸಭೆಯ ಮೊದಲ ಅಧಿವೇಶನ ಕಳೆದ ಜೂನ್ ಜುಲೈ ತಿಂಗಳಲ್ಲಿ ಏಳು ತಿಂಗಳುಗಳ ಕಾಲ ನಡೆಯಿತು.

Image

ಸಂವಿಧಾನ ದಿನದಂದು ಮಾನವೀಯತೆಯ ತೊಳಲಾಟ ಮತ್ತು ಹುಡುಕಾಟ

" ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ "  ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳ ಆಗ್ರಹ.

Image

ಸ್ಟೇಟಸ್ ಕತೆಗಳು (ಭಾಗ ೧೧೫೪)- ಕಮಲ

ಅಲ್ಲೊಂದು ಕಲ್ಲಿನ ಪಕ್ಕದಲ್ಲಿ ಕಮಲ ಒಂದರಳಿದೆ. ತುಂಬಾ ಜನ ಬಂದು ಅದನ್ನೇ ನೋಡುತ್ತಿದ್ದಾರೆ, ಎಲ್ಲರಿಗೂ ಆಶ್ಚರ್ಯ ಕೆಸರಲ್ಲರಳಿ ನಗಬೇಕಾದ ಕಮಲವಿಂದು ಎರಡು ಕಲ್ಲುಗಳ ಮಧ್ಯದ ಪುಟ್ಟ ಜಾಗದಲ್ಲಿ ಅದು ಹೇಗೆ ನಿಂತುಬಿಟ್ಟಿದೆ? ಇಲ್ಲೇನೋ ತಪ್ಪಿದೆ ಅನ್ನೋದು ಅವರೆಲ್ಲರ ವಾದ. ಕಮಲವೂ ಯಾವತ್ತೂ ಕೆಸರಿನಲ್ಲಿ ಇರಬೇಕು, ಅಲ್ಲಿಯೇ ತಾನಿರಬೇಕು, ಎತ್ತರದ ಬೆಟ್ಟದ ಮೇಲೆ ಕಮಲವರಳಬಾರದು.

Image

ನಿಷ್ಪಾಪಿ ಸಸ್ಯಗಳು (ಭಾಗ ೭೬) - ವಿಷಮಧಾರಿ ಗಿಡ

ಮಳೆಗಾಲ ಆರಂಭವಾಗುತ್ತಲೇ ತಲೆ ಎತ್ತುವ ಹಲವಾರು ಸಣ್ಣ ಪುಟ್ಟ ಸಸ್ಯಗಳು ಮಳೆ ಕಡಿಮೆಯಾಗುತ್ತಲೇ ಮರೆಯಾಗತೊಡಗುತ್ತಿವೆಯಲ್ಲವೇ? ಅವುಗಳು ಅಲ್ಪಾಯುಷಿ ಅಥವಾ ಏಕವಾರ್ಷಿಕ ಸಸ್ಯಗಳಾಗಿವೆ. ಕೆಲವು ಸಸ್ಯಗಳನ್ನು ನಾವು ಬೇಲಿಗೆಂದು ನೆಟ್ಟು ಬೆಳೆಸುತ್ತೇವೆ. ಅವುಗಳನ್ನು ಒಮ್ಮೆ ನೆಟ್ಟೆವೆಂದರೆ ಹತ್ತು ಇಪ್ಪತ್ತು ವರ್ಷವಾದರೂ ಕರ್ತವ್ಯದಲ್ಲೇ ಇರುತ್ತವೆ.

Image