ಕೃಷಿ ಉದ್ಯಮಿಯ ವಾರ್ಷಿಕ ವ್ಯವಹಾರ ರೂ.9 ಕೋಟಿ

ಪಂಜಾಬಿನ ಬಟಾಲದ ಜಗಮೋಹನ್ ಸಿಂಗ್ ನಾಗಿ (66 ವರುಷ) ಅವರಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ. ಅದರಿಂದಾಗಿ ಪದವೀಧರರಾದ ನಂತರ ಅವರು ಕೃಷಿಯಲ್ಲೇ ತೊಡಗಿದರು. ಆರಂಭದಲ್ಲಿ ಕೆಲವೇ ಎಕರೆಗಳಲ್ಲಿ ಜೋಳ ಬೆಳೆಯುತ್ತಿದ್ದ ಅವರೀಗ "ಒಪ್ಪಂದ ಕೃಷಿ”ಯಲ್ಲಿ 300 ಎಕರೆಯಲ್ಲಿ ಜೋಳ, ಸಾಸಿವೆ ಮತ್ತು ಗೋಧಿ ಬೆಳೆಯುತ್ತಿದ್ದಾರೆ. ಜೊತೆಗೆ, ಕ್ಯಾರೆಟ್, ಬೀಟ್‌ರೂಟ್, ಟೊಮೆಟೋ ಮತ್ತು ಹೂಕೋಸು ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ.

Image

ಸಂಭ್ರಮ ಸಡಗರದಿಂದ ಆಚರಿಸುವ ಗೌರಿ ಹಬ್ಬ

ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆಯಂದು ಗೌರಿ ಹಬ್ಬ ಆಚರಣೆ ಮಾಡುತ್ತಾರೆ. ನಮ್ಮ ಮನೆಯಲ್ಲಿ ನಾವು ಸಣ್ಣವರಿರುವಾಗಿನಿಂದ ಗೌರಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ನಾವೆಲ್ಲಾ ಇದು ಮಹಿಳೆಯರ ಹಬ್ಬ ಎಂದು ಹೇಳಿ ದೂರ ಉಳಿಯುತ್ತಿದ್ದೆವು.

Image

ಆತ್ಮನಿರ್ಭರ ರಕ್ಷಣೆಯಲ್ಲಿ ಬಲುದೊಡ್ಡ ಹೆಜ್ಜೆ

ಒಡಿಶಾ ಕರಾವಳಿಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೊತ್ತ ಮೊದಲ ಸಮಗ್ರ ವಾಯು ರಕ್ಷಣ ವ್ಯವಸ್ಥೆ (ಇಂಟಿಗ್ರೇಟೆಡ್ ಏರ್‌ಡಿಫೆನ್ಸ್ ವೆಪನ್ ಸಿಸ್ಟಮ್-ಐಎಡಿಡಬ್ಲ್ಯುಎಸ್) ಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸುವ ಮೂಲಕ ಭಾರತವು ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೪೨೪) - ಮೌನದವಳು

ಅವಳಿಗೆ ಮಾತನಾಡುವುದಕ್ಕೆ ಇಷ್ಟವಿಲ್ಲ ಅಂತಲ್ಲ, ಆದರೆ ಮಾತನಾಡಲು ಹೊರಟರೆ ಅನುಭವಿಸಿದ ಒಂದಷ್ಟು ಸತ್ಯಗಳನ್ನು ಹೊರಗಿಡಬೇಕಾಗುತ್ತದೆ, ಅದನ್ನ ಕೇಳುವ ಕಿವಿಗಳು ಕಡಿಮೆ ಇದ್ದರೂ ಕೇಳಿದ್ದಕ್ಕೆ ಇನ್ನೊಂದಷ್ಟು ಹೆಚ್ಚು ಸೇರಿಸಿ ಹಲವು ಮನಸ್ಸುಗಳನ್ನ ನಾಶ ಮಾಡಲು ಕಾಯುತ್ತಿವೆ. ಹೀಗಿರುವಾಗ ಮಾತನಾಡದೆ ಸುಮ್ಮನಿರುವುದೇ ಒಳಿತು ಅಂತಂದುಕೊಂಡಿದ್ದಾಳೆ.

Image

ಹೀಗೊಂದು ನೀತಿ ಕಥೆ

ಒಂದು ದಿನ ಭಾನುವಾರದಂದು ಬಿಡುವಿನ ಸಮಯದಲ್ಲಿ ಫೇಸ್ಬುಕ್ ಪೋಸ್ಟ್ ಗಳನ್ನು ಓದುತ್ತಿದ್ದೆ. ಆಗ ಯಾವುದೋ ಒಂದು ಪೇಜ್ ನಲ್ಲಿ ಒಂದು ಸುಂದರವಾದ ಕಥೆಯನ್ನು ಓದಿದೆ. ಆ ಕಥೆ ನನಗೆ ಎಷ್ಟು ಇಷ್ಟವಾಯಿತೆಂದರೆ ಮರುದಿನವೇ ಅದನ್ನು ನನ್ನ ಶಾಲೆಯ ಮಕ್ಕಳಿಗೆ ಹೇಳಬೇಕು ಅಂತ ಅಂದುಕೊಂಡೆ. ಮರುದಿನ ಶಾಲೆಗೆ ತಲುಪಿದಾಗಲೂ ನನ್ನ ಮನಸ್ಸಿನಲ್ಲಿ ಆ ಕಥೆ ಭದ್ರವಾಗಿತ್ತು. ಆದರೆ ಆ ದಿನ ನನ್ನ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿದ್ದವು.

Image

ದೇಹದಿಂದ ವಾಸನೆ ಬರಲು ಕಾರಣವೇನು?

ಕೆಲವರ ದೇಹದಿಂದ ತೀವ್ರವಾದ ವಾಸನೆ ಕಂಡುಬರುತ್ತದೆ. ಚಳಿ ಇರಲಿ ಮಳೆ ಇರಲಿ, ಸ್ವಲ್ಪ ದೂರ ನಡೆಯಲಿ ಹೀಗೆ ಚಿಕ್ಕ ಕೆಲಸ ಮಾಡಿದರೂ ಅವರಿಗೆ ಅತಿಯಾಗಿ ಬೆವರು ಬರುತ್ತದೆ. ಈ ರೀತಿ ಸಮಸ್ಯೆ ಇರುವ ವ್ಯಕ್ತಿಗಳು ಇತರರೊಂದಿಗೆ ಇರಲು ತುಂಬಾ ಕಷ್ಟಪಡುತ್ತಾರೆ. ದೇಹದ ವಾಸನೆ ಅವರಿಗೆ ಮುಜುಗರ ಉಂಟುಮಾಡುತ್ತದೆ.

Image

ಬಯಲು

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರವೀಣ್ ಕುಮಾರ್ ಜಿ.
ಪ್ರಕಾಶಕರು
ಒಲವು ಬರೆಹ ಪ್ರಕಾಶನ
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೫

ಸಿನೆಮಾ ಚಿತ್ರ ಕಥಾ ಬರಹಗಾರ ಪ್ರವೀಣ್ ಕುಮಾರ್ ಅವರು ಬರೆದ ಕಥಾ ಸಂಕಲನ ‘ಬಯಲು’. ಈ ಕಥಾ ಸಂಕಲನದ ಬಗ್ಗೆ ಮುನ್ನುಡಿಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಜಯಲಕ್ಷ್ಮಿ ಪಾಟೀಲ್. ಅವರು ಬರೆದ ಅನಿಸಿಕೆಗಳ ಆಯ್ದ ಭಾಗ…