ಒಂದು ಪೆಲಕಾಯಿ ಪ್ರೇಮ ಕಥೆ

ನನ್ನ ಬಾಲ್ಯದ ದಿನಗಳಲ್ಲಿ ಪೆಲಕಾಯಿಯ (ಹಲಸು) ಸೀಸನು ಸುರುವಾಯಿತು ಎಂದರೆ ಸಾಕು (ಸಾಧಾರಣವಾಗಿ ಫೆಬ್ರವರಿ ತಿಂಗಳಿಂದ ಜೂನ್ ವರೆಗೆ), ನಮ್ಮ ಮನೆಯ ಊಟದ ತಟ್ಟೆಗಳಲ್ಲಿ ಪ್ರತಿದಿನ ಎಂಬಂತೆ ಯಾವುದಾದರೂ ಒಂದು ಬಗೆಯ ಪೆಲಕಾಯಿ ವ್ಯಂಜನ ಇರುವುದು ಸರ್ವೇ ಸಾಮಾನ್ಯವಾಗಿತ್ತು. ಆಗ ಊರಲ್ಲಿ ಹಲಸಿನ ಮರ ಇಲ್ಲದ ಹಿತ್ತಿಲುಗಳು ಬಹಳ ವಿರಳ ಎಂದೇ ಹೇಳಬಹುದು.

Image

ನನಗೂ ಆಸೆ

ಮೇಲೆ ತಿಳಿಸಿದಂತೆ, ಸಾಂಸ್ಕೃತಿಕ ಹಾಗು ರಾಷ್ಟ್ರೀಯ ಹಬ್ಬಗಳ ಮಧ್ಯೆ ಏನೂ ಭೇದವಿಲ್ಲದೆ ಸಮಾನತೆಯಿಂದ ಆಚರಿಸುವ ಸಂಸ್ಕೃತಿ ನಮ್ಮದು. ಅದರ ಪರವಾಗಿ ಎಲ್ಲೆಡೆ ಭರ್ಜರಿಯ ತಯಾರಿಗಳು ನಡೆಯುವಾಗ, ಶಾಲೆಯಲ್ಲಿ ನಮ್ಮದೇ ಆದ ತಯಾರಿಗಳು. ಹೀಗೆ ತಯಾರಿಯ ವಿಚಾರ ಬಂದಾಗ ಮಕ್ಕಳಿಗೆಲ್ಲ 15 ದಿನಗಳ ಮುಂಚಿನಿಂದಲೇ ಸಿದ್ಧ ಪಡಿಸದಿದ್ದರೆ ಕಡೆಗೆ ಮಕ್ಕಳು ತಮ್ಮ ಸ್ವತಂತ್ರದಂತೆ ಮೆರೆದುಬಿಡುತ್ತಾರೆ.

Image

ಕೃಷಿ ಅರಣ್ಯಕ್ಕಿಂತ ನೈಸರ್ಗಿಕ ಅರಣ್ಯವೇ ಮುಖ್ಯ

ಹೊಸತಾಗಿ ಸೃಷ್ಟಿಮಾಡುವ ಅರಣ್ಯ ಕೃಷಿ ಅರಣ್ಯ. ನೈಸರ್ಗಿಕವಾಗಿ ಹುಟ್ಟಿ, ಬೀಜ ಪಸರಿಸಿ, ಸತ್ತು ಹುಟ್ಟಿ- ಸಾಯುವ ಅರಣ್ಯ ಶಾಶ್ವತ ಅರಣ್ಯ. ನೈಸರ್ಗಿಕ ಅರಣ್ಯಕ್ಕೂ ಕೃತಕ ಅರಣ್ಯಕ್ಕೂ ಬಹಳ ವ್ಯತ್ಯಾಸವಿದೆ. ಸಹಸ್ರಾರು ವರ್ಷಗಳಿಂದ ಅರಣ್ಯ ಅಭಿವೃದ್ದಿಯಾಗುತ್ತಾ ಬಂದಿರುವುದು ನೈಸರ್ಗಿಕವಾಗಿ. ಮಾನವನ ಹಸ್ತಕ್ಷೇಪ ಇಲ್ಲದೆ ಅದರಷ್ಟಕ್ಕೇ ಅಭಿವೃದ್ಧಿಯಾಗುತ್ತಿರುರುವ ಹಸುರು ರಾಶಿಯೇ ನೈಜ ಅರಣ್ಯ.

Image

ವಿತ್ತೀಯ ಶಿಸ್ತು ಮುಖ್ಯ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ (ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ, ಯುವಾನಿಧಿ) ಯೋಜನೆಗಳ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಯಾವುದೇ 'ಉಚಿತ' ಯೋಜನೆಗಳು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಬಾರದು, ಆರ್ಥಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು.

Image

ಬೀದಿ ನಾಯಿಗಳ ಸಮಸ್ಯೆ ಮತ್ತು ನಿಯಂತ್ರಣ

ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆ ? ಅದು ಅರ್ಜಿ ವಿಚಾರಣೆ ಮಾಡಿ ಆದೇಶ ಹೊರಡಿಸಬೇಕೆ ? ಅದರ ಅವಶ್ಯಕತೆ ಇದೆಯೇ ? ಬೀದಿ ನಾಯಿಗಳ ಸಮಸ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅಷ್ಟೊಂದು ಮಾಹಿತಿ ಇರುತ್ತದೆಯೇ ?

Image

ಸ್ಟೇಟಸ್ ಕತೆಗಳು (ಭಾಗ ೧೪೧೯) - ಬಿದಿರು

ಬಿದಿರು ತುಂಬಾ ನೋವಿನಿಂದ ಅಳುತ್ತಿತ್ತು. ಹತ್ತಿರ ನಿಂತು ಬಿದಿರ  ಯಜಮಾನ ಬಿದಿರಿನ ಬಳಿ ಕೇಳಿದ ಯಾಕೆ ಮಾರಾಯ ಅಳುತ್ತಾ ಇದ್ದೀಯಾ, ಇಷ್ಟು ನೋವಾಗುವಂಥದ್ದು ಏನಾಗಿದೆ? ಅದಕ್ಕೆ ಬಿದರು " ನೋಡಿ ನಾನು ಸಂಗೀತಗಾರನ ಕೈಯಲ್ಲಿ ಕೊಳಲಾಗಬೇಕು ಅನ್ನುವ ಆಸೆಯಿಂದ ಜೀವಿಸಿದ್ದು.

Image

ನಿಷ್ಪಾಪಿ ಸಸ್ಯಗಳು (ಭಾಗ ೧೧೪) - ಬಿದಿರು

ಮಳೆಯಾರ್ಭಟ ಒಂದಿಷ್ಟು ಕಡಿಮೆಯಾಗಿ ಸಣ್ಣ ಪುಟ್ಟ ಸಸ್ಯಗಳು ಲಗುಬಗೆಯಿಂದ ಹೊಸ ಚಿಗುರುಗಳ ಜೊತೆಗೆ ಹೂ ಕಾಯಿ ಬಿಡುವ ತರಾತುರಿಯಲ್ಲಿವೆ, ಗಮನಿಸಿದಿರಾ? ಏಕೆಂದರೆ ಅವು ವಾರ್ಷಿಕ ಸಸ್ಯಗಳು..! ಮಳೆ ಕಳೆದ ಬಳಿಕ ಬಹುಕಾಲ ಬಾಳಲಾರವು. ವಂಶದ ಪೀಳಿಗೆ ಮುಂದುವರಿಯಲು ಬದುಕಿನ ವಸಂತಕಾಲ ಅಮೂಲ್ಯವಾಗಿದೆ. ಆದರೆ ಬಹುವಾರ್ಷಿಕ ಸಸ್ಯಗಳು ಹಾಗಲ್ಲ. ಮಳೆಗಾಲ ಕಳೆಯುತ್ತಿದ್ದಂತೆ ಮೈತುಂಬಿಕೊಂಡು ಬೆಳೆಯತೊಡಗುತ್ತದೆ.

Image

POK - ಕಾಣದ ರೇಖೆಯ ಕಥನ

ಪುಸ್ತಕದ ಲೇಖಕ/ಕವಿಯ ಹೆಸರು
ಗೋಪಾಲಕೃಷ್ಣ ಕುಂಟಿನಿ
ಪ್ರಕಾಶಕರು
ಸಾವಣ್ಣ ಪ್ರಕಾಶನ
ಪುಸ್ತಕದ ಬೆಲೆ
120

ಜಗತ್ತೇ ಪಹಲ್ಗಾಮ್‌ ಕುರಿತು ಮಾತನಾಡುತ್ತಿದ್ದ ಹೊತ್ತಲ್ಲಿ ಇಷ್ಟೇ ಅಲ್ಲ, ಇದರ ಹಿಂದೆ ವರ್ಷಾನುಗಟ್ಟಲೆ ನಡೆದ ಕೃತ್ಯಗಳಿವೆ ಎಂಬ ಸತ್ಯವನ್ನು ಬಿಚ್ಚಿಟ್ಟ ಕೃತಿಯಿದು. ನಾವು ಶಾಲೆಯಲ್ಲಿ ಇತಿಹಾಸ ಓದುತ್ತೇವೆ. ಅದರಲ್ಲಿ ಯಾವುದು ಸತ್ಯ ಗೊತ್ತಿಲ್ಲ. ಅಥವಾ ಅದರಲ್ಲಿ ಎಲ್ಲ ಸತ್ಯವನ್ನು ಹೇಳಲಾಗಿದೆಯೆ ಎಂದರೆ ಇಲ್ಲ ಎನ್ನಬೇಕಿದೆ.

ಭಾರತ ಪಾಕ್ ಕುರಿತಾಗಿ ಇಲ್ಲಿರುವ ಎಷ್ಟೋ ವಿಷಯಗಳು ನಮ್ಮ ಪಠ್ಯದಲ್ಲಾಗಲಿ ಅಥವಾ ಪಾಠ ಮಾಡುವಾಗಾಗಲಿ ನಮಗ್ಯಾರಿಗೂ ಹೇಳೇ ಇಲ್ಲ. ಪಠ್ಯ ಪುಸ್ತಕದಲ್ಲಿ ಹೇಳಿರುವುದರ ಜಾಡು ಹಿಡಿದು ಇನ್ನೇನಾಗಿದೆ ಎಂದು ತಿಳಿಯುವ ಪ್ರಯತ್ನವನ್ನು ನಾವೂ ಮಾಡಿಲ್ಲ.‌ ಹಾಗಾಗಿ ಈ ವಿಷಯಗಳು ಬೂದಿ ಮುಚ್ಚಿದ ಕೆಂಡದಂತಾಗಿದೆ. ಬೂದಿಯನ್ನು ಬದಿ ಸರಿಸುವ ಕೆಲಸವನ್ನು ಕುಂಟಿನಿಯವರು ಮಾಡಿದ್ದಾರೆ.