ಬೆಂಗಳೂರು ಕೆಫೆ ಬಾಂಬರ್ ಗಳಿಗೆ ಅತ್ಯಂತ ಕಠಿಣವಾದ ಶಿಕ್ಷೆಯಾಗಲಿ

ಬೆಂಗಳೂರಿನ ಐಟಿ ಕಾರಡಾರ್ ನಲ್ಲಿ ಇರುವ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಮಾ ೧ರಂದು ಬಾಂಬ್ ಸ್ಫೋಟಿಸಿ ಭೀತಿ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಬಾಂಬರ್ ಸೇರಿ ಇಬ್ಬರನ್ನು ಎನ್ ಐ ಎ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ. ೪೩ ದಿನಗಳಿಂದ ಈ ಶಂಕಿತ ಉಗ್ರರಿಗಾಗಿ ತೀವ್ರವಾಗಿ ನಡೆದಿದ್ದ ಶೋಧಕ್ಕೆ ಕೊನೆಗೂ ತೆರೆ ಬಿದ್ದಿದೆ.

Image

ಬಾಬಾಸಾಹೇಬರನ್ನು ನೆನೆಯುತ್ತಾ...

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ ‌14 ) ಅವರ ವ್ಯಕ್ತಿತ್ವ ಮತ್ತು ಸಾಧನೆ ನೆನಪು ಮಾಡಿಕೊಳ್ಳುವ  ಒಂದು ಸಣ್ಣ ಪ್ರಯತ್ನ. ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು ಎನ್ನಲು ಕಾರಣ.

Image

ಸ್ಟೇಟಸ್ ಕತೆಗಳು (ಭಾಗ ೯೩೪)- ಪ್ರಶ್ನೋತ್ತರ

ಗಡಿಯಾರದ ಮುಳ್ಳುಗಳು ಆ ಪರಿಧಿಯ ಒಳಗಡೆ ಅದೆಷ್ಟು ಬಾರಿ ಸುತ್ತಿದೆಯೋ ಗೊತ್ತಿಲ್ಲ. ಮನೆಯಲ್ಲಿರುವ ಒಂದಷ್ಟು ಕ್ಯಾಲೆಂಡರ್ ಗಳು ಬದಲಾದರೂ ವಯಸ್ಸಿನ ಅಂತರ ಹೆಚ್ಚಾದರೂ ಕೂಡ ನಿನಗಿನ್ನು ಈ ಜಗತ್ತಿನ ಮುಖದ ಪರಿಚಯವೇ ಆಗಿಲ್ಲ ಅಂದುಕೊಳ್ಳುತ್ತೇನೆ .ಇದು ನಿನಗರ್ಥವಾಗದ ಜಗತ್ತು. ಒಂದು ಸಲ ಹಾಗಂದು ಕೊಂಡ್ರೆ ಇನ್ನೊಂದು ಸಲ ಹಾಗಿರುವುದೇ ಇಲ್ಲ.

Image

ಮಳ್ಳಿ ಮಳ್ಳಿ ಅಂದೀರಾ, ಇದು ಹೆಮ್ಮಿಂಚುಳ್ಳಿ !

ತರಬೇತಿಗೆ ಅಂತ ಬೆಂಗಳೂರಿಗೆ ಹೋಗಿದ್ದೆ. ತರಬೇತಿ ಮುಗಿಸಿ ರೈಲಿನಲ್ಲಿ ಮರಳಿ ಬಂದೆ. ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಇಳಿದೆ. ರೈಲ್ವೇ ನಿಲ್ದಾಣದಿಂದ ಬಸ್ ನಿಲ್ದಾಣ ಒಂದು ಕಿಲೋಮೀಟರ್ ದೂರ. ಬೆಳಗ್ಗಿನ ಹವೆಯೂ ತಂಪಾಗಿ ಹಿತವಾಗಿತ್ತು. ನಡೆದುಕೊಂಡೇ ಬಸ್ ಸ್ಟಾಂಡ್ ಕಡೆಗೆ ಹೊರಟೆ. ಸ್ವಲ್ಪ ದೂರ ಬಂದರೆ ಮಹಾಲಿಂಗೇಶ್ವರ ದೇವರ ದೇವಸ್ಥಾನ ಮತ್ತು ಜಾತ್ರೆ ನಡೆಯುವ ಗದ್ದೆ ಕಾಣಸಿಗುತ್ತದೆ.

Image

ಕಾಡು ಕಾಡ್ತು

ಪುಸ್ತಕದ ಲೇಖಕ/ಕವಿಯ ಹೆಸರು
ರೇಖಾ ಹೆಗಡೆ ಬಾಳೇಸರ
ಪ್ರಕಾಶಕರು
ಬಹುರೂಪಿ ಪ್ರಕಾಶನ, ಸಂಜಯ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ: ೨೦೨೩

ಕಾಡು ಕಾಡ್ತು’ ರೇಖಾ ಹೆಗಡೆಯವರು ಕಾಡಿನ ಅನುಭವಗಳ ಕುರಿತು ಬರೆದ ಕೃತಿಯಾಗಿದೆ. ಇದಕ್ಕೆ ಅವರದ್ದೇ ಮುನ್ನುಡಿ ಬರಹವಿದೆ: ಅಡವಿಯೆಂದರೆ ಅದೇನು ಹುಚ್ಚೋ.. ನನ್ನ ಬಾಲ್ಯ, ಹದಿಹರೆಯ ದಿನಗಳಲ್ಲಿ ಪುಸ್ತಕಗಳನ್ನು ಬಿಟ್ಟರೆ ನಾನು ಅತಿಹೆಚ್ಚು ಪ್ರೀತಿಸಿದ್ದು ಅಡವಿಯನ್ನು ಮುಗಿಲಿಗೆ ಏಣಿ ಚಾಚುವ ಸಾಗವಾನಿ, ಮತ್ತಿ, ಹೆದ್ದೇಗ, ಬೀಟೆ ಮರಗಳು, ಗಾಳಿ ಬೀಸಿದಾಗೆಲ್ಲ.

ಜ್ಞಾನದ ಮಿತಿಯ ಅರಿವಿದ್ದರೆ ಒಳ್ಳೆಯದು…!

ಮಹರ್ಷಿಗಳೇ, ನಮ್ಮ ಸಂಸಾರದಲ್ಲಿ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಜಗಳ. ಅದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಬದುಕುವ ಆಸೆ ಉಳಿದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.

Image