ಈ ಪಯಣ ನೂತನ

ಪುಸ್ತಕದ ಲೇಖಕ/ಕವಿಯ ಹೆಸರು
RJ ನಯನಾ ಶೆಟ್ಟಿ
ಪ್ರಕಾಶಕರು
ವಿನಯ ಪ್ರಕಾಶನ, ಮಣ್ಣಗುಡ್ಡ, ಮಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೫

ವೃತ್ತಿಯಲ್ಲಿ ರೇಡಿಯೋ ಜಾಕಿ (RJ) ಆಗಿರುವ ನಯನಾ ಶೆಟ್ಟಿಯವರ ಚೊಚ್ಚಲ ಕೃತಿ ‘ಈ ಪಯಣ ನೂತನ’. ಈ ಕೃತಿಯ ಮೂಲಕ ನಯನಾ ಶೆಟ್ಟಿ ನಮ್ಮನ್ನೆಲ್ಲಾ ‘ನಗುವ ನಾಳೆಗಳ ಕಡೆಗೆ’ ಕರೆದೊಯ್ಯುವ ಸಾಹಸ ಮಾಡಿದ್ದಾರೆ. ಬಿಡಿ ಬಿಡಿ ಬರಹಗಳನ್ನು ಲಹರಿ ರೂಪದಲ್ಲಿ ಬರೆದು ಓದುಗರನ್ನು ಸೆಳೆಯುವ ಪ್ರಯತ್ನ ಶ್ಲಾಘನೀಯ. ಈ ಕೃತಿಗೆ ಮುನ್ನುಡಿಯನ್ನು ಬರೆದು ಶುಭ ಹಾರೈಸಿದ್ದಾರೆ ಪತ್ರಕರ್ತ, ಅಂಕಣಕಾರ ‘ಜೋಗಿ’.

ಭಾರತದ ಸ್ವಾತಂತ್ರ್ಯ

ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಕೆಲವೇ ಗಂಟೆಗಳ ಮುನ್ನ ಒಂದು ಆತ್ಮಾವಲೋಕನ ಮತ್ತು ಪ್ರತಿಜ್ಞಾ ವಿಧಿ. ಉಕ್ಕಿ ಹರಿಯುವ ದೇಶಪ್ರೇಮ. ಎಲ್ಲೆಲ್ಲೂ ರಾಷ್ಟ್ರಗೀತೆ - ರಾಷ್ಟ್ರಧ್ವಜ. ಜೈ ಭಾರತ್ ಘೋಷಣೆ, ತುಂಬಾ ಸಂತೋಷ, ಆದರೆ, ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ.

Image

ಸ್ಟೇಟಸ್ ಕತೆಗಳು (ಭಾಗ ೧೪೧೨) - ಅಳು ಯಾಕೆ?

ಇದು ಸ್ವಲ್ಪ ಓವರ್ ಆಗಿಲ್ವಾ? ರಸ್ತೆ ಬದಿಯಲ್ಲಿದ್ದ ಒಂದು ಮರವನ್ನ ಕಡಿದುರುಳಿಸಿದ್ದಕ್ಕೆ ಆ ವ್ಯಕ್ತಿ ಕಣ್ಣೀರುಳಿಸುತ್ತಿದ್ದಾನೆ, ಮರವನ್ನ ಕಡಿದವರಿಗೆ ಶಾಪ ಹಾಕುತ್ತಿದ್ದಾನೆ, ಇಷ್ಟೆಲ್ಲ ಮಾಡುವ ಅವಶ್ಯಕತೆ ಏನಿದೆ.

Image

ಕಿಚ್ಚು

ಬಹು ಅರ್ಥದಲ್ಲಿ “ಕಿಚ್ಚು” ಪದವನ್ನು ಬಳಸುತ್ತೇವೆ. ಬೆಂಕಿಯ ಕಿಡಿ ಎಂಬಲ್ಲಿ ಅಗ್ನಿಯೆಂಬ ಅರ್ಥವಾದರೆ ಹೊಟ್ಟೆ ಕಿಚ್ಚು ಎಂದಾಗ ಮತ್ಸರ ಎಂದು ತಿಳಿಯುತ್ತೇವೆ. ಅಗ್ನಿ, ಉರಿ, ಬೆಂಕಿ, ಹಠ, ಅತೃಪ್ತಿ, ಅಸಮಾಧಾನ, ಅಸೂಯೆ, ಮತ್ಸರ ಹೀಗೆ ನಾನಾ ಸಂದರ್ಭಗಳಲ್ಲಿ ಅರ್ಥ ವ್ಯತ್ಯಾಸವಾಗುತ್ತದೆ. ಕಿಚ್ಚು ಅಪಾಯಕಾರಿಯೇ ಉಪಕಾರಿಯೇ ಎಂಬ ಪ್ರಶ್ನೆಗೆ ಉತ್ತರವೂ ದ್ವಂದ್ವವೇ.

Image

ಜೇನುನೊಣಗಳ ಸಂರಕ್ಷಣೆ: ಒಂದು ಜಾಗತಿಕ ಜವಾಬ್ದಾರಿ

ಜೇನುನೊಣಗಳು ನಮ್ಮ ಭೂಮಿಯ ಪರಿಸರ ವ್ಯವಸ್ಥೆಯ ಜೀವನಾಡಿಯಾಗಿವೆ. ಇವುಗಳಿಲ್ಲದೆ ಮಾನವ ಕುಲವೇ ಅಸ್ತಿತ್ವವನ್ನು ಕಳೆದುಕೊಳ್ಳಬಹುದು ಎಂಬುದು ಆಲ್ಬರ್ಟ್ ಐನ್‌ಸ್ಟೀನ್‌ರಂತಹ ವಿಜ್ಞಾನಿಗಳ ಎಚ್ಚರಿಕೆಯ ಮಾತು. ಹೂವಿನಿಂದ ಹೂವಿಗೆ ಹಾರಾಡುವ ಈ ಪುಟ್ಟ ಕೀಟಗಳು ಕೇವಲ ಜೇನುತುಪ್ಪವನ್ನು ಸಂಗ್ರಹಿಸುವುದಷ್ಟೇ ಅಲ್ಲ, ಕೃಷಿ ಬೆಳೆಗಳ ಪರಾಗಸ್ಪರ್ಶಕ್ಕೆ ನಿರ್ಣಾಯಕ ಪಾತ್ರವಹಿಸುತ್ತವೆ.

Image

ಕ್ರೀಡಾ ಮಸೂದೆ ನಿರೀಕ್ಷಿತ ಸುಧಾರಣೆಗೆ ಕಾರಣವಾಗಲಿ

ಬಹುನಿರೀಕ್ಷಿತ ರಾಷ್ಟ್ರೀಯ ಕ್ರೀಡಾ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕೃತಗೊಳಿಸಲಾಗಿದ್ದು, ರಾಷ್ಟ್ರೀಯ ಉದ್ದೀಪನ ತಡೆ (ತಿದ್ದುಪಡಿ) ಮಸೂದೆಗೂ ಅನುಮೋದನೆ ಲಭಿಸಿದೆ. ರಾಷ್ಟ್ರೀಯ ಕ್ರೀಡಾ ಮಸೂದೆ ಹಲವು ದಶಕಗಳ ಕನಸು, ಇನ್ನಾದರೂ ಕಾನೂನಾಗಿ ಜಾರಿಗೆ ಬರಲಿರುವುದು ಒಂದು ಸ್ವಾಗತಾರ್ಹ ಉಪಕ್ರಮ.

Image

ರಾತ್ರಿ ಪಾಳಿ

ತುಂಬಾ ಗಂಭೀರ ವಿಷಯ. ದಯವಿಟ್ಟು ಸಾರ್ವಜನಿಕ ಚರ್ಚೆಗೆ ಒಳಪಡಿಸಿ. ರಾತ್ರಿ ಪಾಳಿ ( ನೈಟ್ ಶಿಫ್ಟ್ ) ಎಂಬ ಉದ್ಯೋಗಿಗಳ ಕೆಲಸದ ಅವಧಿಯು ಒಂದು ಯುವ ಪೀಳಿಗೆಯನ್ನೇ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮಸ್ಯೆಗಳಿಗೆ ಸಿಲುಕಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತುಂಬಾ ದುಷ್ಪರಿಣಾಮವನ್ನು ಬೀರುತ್ತಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೪೧೧) - ಯಾರು ಸರಿ?

ಹಾಗೆ ಬಸ್ಸಿಗೆ ಕಾಯುತ್ತಿದ್ದವನಿಗೆ ಎರಡು ಜನ ಅಣ್ಣತಮ್ಮಂದಿರ ವಾದ ಕಿವಿಗೆ ಬಿತ್ತು. ಅಣ್ಣ ಈ ಸಮಾಜದಲ್ಲಿ ನಾವು ಒಂದು ದಿನ ಮಿನುಗುವುದು ಯಾವಾಗ ? ನಾವು ಇದ್ದೇವೆ ನಾವೇನು ಸಾಧಿಸುತ್ತಿದ್ದೇವೆ, ನಮ್ಮ ಕುಟುಂಬ ಇದು ಅನ್ನೋದನ್ನ ಜಗತ್ತಿಗೆ ಪರಿಚಯಿಸುವುದು ಯಾವಾಗ?

Image

‘ಸು ಫ್ರಮ್ ಸೋ’ ನನ್ನ ‘ಭಾವ’ನೆ !

"ಸು ಫ್ರಂ ಸೋ" ಚಿತ್ರ ತುಳುನಾಡ ಮಧ್ಯಮ ವರ್ಗದ ಶೂದ್ರ ಜನಾಂಗದ ಮನೆ ಕಥೆ ಅಂತ ಚಲನ ಚಿತ್ರದ ಆರಂಭದಲ್ಲೇ ಅಲ್ಪ ಹೊತ್ತಿನಲ್ಲೇ ಗೊತ್ತಾಗಿ ಬಿಡುತ್ತದೆ! ತೀರಾ ಶಾಖಾಹಾರಿ ಕುಟುಂಬದಲ್ಲಿ ಜನಿಸಿದವರಿಗೋ, ಮಡಿವಂತರಿಗೋ ಅಥವಾ ಕುರಿತಾಗಿ ಬ್ರಾಹ್ಮಣ ಸಮುದಾಯದವರಿಗೋ ಒಂದಷ್ಟು ಗೊಂದಲವಾಗುವ ಸಾಧ್ಯತೆ ತುಂಬಾನೆ ಇದೆ!

Image