ಸ್ಟೇಟಸ್ ಕತೆಗಳು (ಭಾಗ ೧೪೧೪) - ಜಿರಳೆ

ಈ ಪ್ರಶ್ನೆಯನ್ನು ಇವತ್ತು ನಮ್ಮ ಮನೆಯಲ್ಲಿ ಓಡಾಡುತ್ತಿದ್ದ ಒಂದೇ ಒಂದು ಜಿರಳೆ ನನ್ನ ಮುಂದೆ ಬಂದು ಕೇಳಿಬಿಡ್ತು. ನನಗೆ ಅದಕ್ಕೆ ಉತ್ತರ ಕೊಡುವಷ್ಟು ವ್ಯವಧಾನವೂ ಇರಲಿಲ್ಲ ಹಾಗಾಗಿ ಅದರ ಪ್ರಶ್ನೆಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ, ಅಲ್ಲ ಸರ್, ನಾವು ನಿಮಗೇನು ತೊಂದರೆ ಮಾಡಿದ್ದೇವೆ, ಮನೆಯ ಯಾವುದೋ ಒಂದು ಮೂಲೆಯಲ್ಲಿ ಬದುಕಿ ಬಿಡುತ್ತೇವೆ.

Image

ಇಂಪಾದ ದನಿಯ ಶಾಮ ಹಕ್ಕಿ

ಸುಮಾರು ಆರು ವರ್ಷಗಳ ಹಿಂದೆ ಬೇಸಗೆ ರಜೆಯಲ್ಲಿ ನಾನೊಮ್ಮೆ ಉತ್ತರಕನ್ನಡ ಜಿಲ್ಲೆಯ ಯೆಲ್ಲಾಪುರ ಸಮೀಪದ ಮಂಚಿಕೇರಿ ಎಂಬ ಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದ ಹಾಸಣಗಿ ಎಂಬ ಶಾಲೆಯಲ್ಲಿ ನಮ್ಮ ನಾಟಕದ ಗೆಳೆಯ ಅವಿನಾಶ ಮತ್ತು ಅವನ ಮಿತ್ರರು ಮಕ್ಕಳಿಗಾಗಿ ಬೇಸಗೆ ಶಿಬಿರವನ್ನು ನಡೆಸಿಕೊಡಲು ಹೋಗಿದ್ದರು.

Image

ಸ್ವಾತಂತ್ರ್ಯ ಹೋರಾಟದ ಪ್ರಮುಖ ಸ್ಥಳಗಳು

ಎಲ್ಲರಿಗೂ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯ ಕೋರುತ್ತಾ.. "ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಅಂದರೆ ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ದೊಡ್ಡದು. ನಾವು ಯಾರಿಗೆ ಋಣಿಯಾಗಿರಬೇಕು, ಯಾವುದರ ಪರವಾಗಿ ಕರ್ತವ್ಯ ಮಾಡಬೇಕು, ಹೇಗೆ ನಾವು ಬದುಕು ಸಾಗಿಸಬೇಕು ಎಂಬುದಕ್ಕೆ ಸ್ಪಷ್ಟ ಪರಿಕಲ್ಪನೆ ನಮ್ಮ ಈ ತಾಯಿ ನೆಲ ನೀಡಿದೆ.

Image

ಪರಸ್ಪರ - ವೈಚಾರಿಕ ಲೇಖನಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಹಾ. ಮ ಸತೀಶ ಬೆಂಗಳೂರು
ಪ್ರಕಾಶಕರು
ಸವಿ ಪ್ರಕಾಶನ, ಮೊಗರ್ನಾಡು
ಪುಸ್ತಕದ ಬೆಲೆ
ತಿಳಿಸಿಲ್ಲ. ಮುದ್ರಣ - ೧೯೯೯

ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ(ಹಾಲುಮಜಲು ಸತೀಶ) ಇವರ ಪುಸ್ತಕ ‘ಪರಸ್ಪರ’ ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆಯನ್ನು ನಾನು ಓದಿರುವೆನು. ಒಟ್ಟು ೨೭ ಲೇಖನಗಳು ಶ್ರೀ ಯುತರ ಕೈಯಿಂದ ಬರೆಯಲ್ಪಟ್ಟಿದೆ.

ಕೃಷ್ಣ ಮತ್ತು ಧರ್ಮ- (ಕೃಷ್ಣಾಷ್ಟಮಿ ದಿನದ ವಿಶೇಷ)

1) ಒಂದು ದಿನ ಕೃಷ್ಣನು ಬಲರಾಮನ  ಜೊತೆಗೆ ಒಂದು ಕಡೆ ಹೋಗಿದ್ದ. ಅಲ್ಲಿ ಒಂದು ಭಾರಿ ಕಲ್ಲನ್ನು ಎತ್ತಿಡಬೇಕಾಗಿತ್ತು. ಆಗ ಕೃಷ್ಣನು ಹೇಳಿದನು - ನಾನು ಪ್ರಯತ್ನ ಮಾಡುವೆ ನನ್ನ ಕೈಲಿ ಆಗದಿದ್ದರೆ ಅಣ್ಣ ನೀನು ಮಾಡುವಿ ಅಂತೆ.

ಅವನ ಗೌರವವನ್ನೂ ಉಳಿಸಿದ ಹಾಗಾಯಿತು.  ತನ್ನ ಶಕ್ತಿ ಪ್ರದರ್ಶನವೂ ಆಯಿತು. ಮನುಷ್ಯನಾಗಿ ಹುಟ್ಟಿದ ಮೇಲೆ ಇತರ ಮನುಷ್ಯರಿಗೆ ಮಾರ್ಗದರ್ಶಿಯಾಗಿ ಇರಬೇಕು ಎಂದು ಅವನ ಅಭಿಪ್ರಾಯ.

2) ಇನ್ನೊಮ್ಮೆ ಅವನು ರಾಧೆಯ ಜೊತೆಗಿದ್ದಾಗ ಬಲರಾಮನ ಹೆಸರು ಬಂದಿತು. ತಕ್ಷಣವೇ ಅವನು ರಾಧೆಯಿಂದ ದೂರ ಸರಿದ. 'ಏನು, ನೀನು ಬಲರಾಮನಿಗೆ ಹೆದರುತ್ತೀಯಾ? ' ಎಂದು ರಾಧೆಯು ಕೇಳಿದಳು. ಆಗಲೂ ಅವನು ಈ ಉತ್ತರವನ್ನು ಹೇಳಿದನು - ಮನುಷ್ಯನಾಗಿ ಹುಟ್ಟಿದ ಮೇಲೆ ಇತರ ಮನುಷ್ಯರಿಗೆ ಮಾರ್ಗದರ್ಶಿಯಾಗಿ ಇರಬೇಕು

ಕನ್ನಡ ಪತ್ರಿಕಾ ಲೋಕ (ಭಾಗ ೨೨೧) - ನ್ಯೂ ಇಂಡಿಯಾ ಸಮಾಚಾರ

ದೆಹಲಿಯ ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿಕೇಷನ್ ಪ್ರಕಾಶನದ ಕನ್ನಡ ಪಾಕ್ಷಿಕ

Image

ಪ್ರಜಾಪ್ರಭುತ್ವ - ಸ್ವಾತಂತ್ರ್ಯ - ಸ್ವೇಚ್ಛೆ - ಗುಲಾಮಿತನ

ಈ ಪದಗಳ ನಿಜವಾದ ಅರ್ಥವನ್ನು, ಆಶಯವನ್ನು ಗ್ರಹಿಸಲು ಓದು, ಅಧ್ಯಯನ, ಚಿಂತನೆ, ಅನುಭವ, ಅನುಭಾವ, ಸಂವೇದನಾಶೀಲತೆ, ಕ್ರಿಯಾಶೀಲತೆ, ವಿಶಾಲತೆ, ಒಳ್ಳೆಯತನ, ಭೌಗೋಳಿಕ, ಕಾನೂನಾತ್ಮಕ ಮತ್ತು ಪ್ರಾಕೃತಿಕ ಮೌಲ್ಯಗಳ ಜ್ಞಾನ ಇರಬೇಕಾಗುತ್ತದೆ. ಇಲ್ಲದಿದ್ದರೆ ಎಲ್ಲವೂ ಒಂದು ಹುಚ್ಚರ ಸಂತೆಯಂತೆ ಭಾಸವಾಗುತ್ತದೆ.

Image

ಬಾಂಬೆ ಐಸ್ ಹಲ್ವಾ

Image

ಎರಡು ಚಮಚ ಹಾಲಿಗೆ ಹತ್ತು ಕೇಸರಿ ದಳ ಹಾಕಿ ಬೆರೆಸಿಟ್ಟುಕೊಳ್ಳಿ. ಒಂದು ಪ್ಯಾನ್‌ ಗೆ ಹಾಲು, ತುಪ್ಪ, ಮೈದಾಹಿಟ್ಟು ಹಾಕಿ ಚೆನ್ನಾಗಿ ಬೆರೆಸಿ ಒಲೆಯ ಮೇಲಿಟ್ಟು ಗಟ್ಟಿಯಾಗುವ ತನಕ ಕೈಯಾಡಿಸಿ. ನಂತರ ಕೇಸರಿ, ಹಾಲು ಹಾಕಿ ಕೈಯಾಡಿಸಿ.

ಬೇಕಿರುವ ಸಾಮಗ್ರಿ

ಸಕ್ಕರೆ-1 ಬಟ್ಟಲು, ಕರಗಿದ ತುಪ್ಪ-1/4 ಬಟ್ಟಲು, ಮೈದಾ-1/4 ಬಟ್ಟಲು, ಕೇಸರಿ ದಳ, ಬಾದಾಮಿ, ಗೋಡಂಬಿ ತುಂಡುಗಳು.