ಕನ್ನಡ ಪತ್ರಿಕಾ ಲೋಕ (ಭಾಗ ೨೨೧) - ನ್ಯೂ ಇಂಡಿಯಾ ಸಮಾಚಾರ

ದೆಹಲಿಯ ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿಕೇಷನ್ ಪ್ರಕಾಶನದ ಕನ್ನಡ ಪಾಕ್ಷಿಕ
ನವದೆಹಲಿಯ ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿಕೇಷನ್ ಭಾರತದ ೧೩ ಭಾಷೆಗಳಲ್ಲಿ ‘ನ್ಯೂ ಇಂಡಿಯಾ ಸಮಾಚಾರ’ ಎನ್ನುವ ಪತ್ರಿಕೆಯನ್ನು ಪ್ರಕಟಿಸುತ್ತಾರೆ. ಆ ಹದಿಮೂರು ಭಾಷೆಗಳಲ್ಲಿ ಕನ್ನಡವೂ ಒಂದು. ಇದು ಕೇಂದ್ರ ಸರಕಾರದ ಮಾಹಿತಿಗಳನ್ನು ಬಿತ್ತರಿಸುವ ಪತ್ರಿಕೆ. ಪ್ರೆಸ್ ಇನ್ ಫಾರ್ಮೇಶನ್ ಬ್ಯೂರೋ, ನವದೆಹಲಿಯ ಪ್ರಧಾನ ಮಹಾ ನಿರ್ದೇಶಕರಾದ ಮನೀಶ್ ದೇಸಾಯಿಯವರು ಇದರ ಸಂಪಾದಕರು. ಸಂತೋಷ್ ಕುಮಾರ್ ಅವರು ಹಿರಿಯ ಸಲಹಾ ಸಂಪಾದಕರಾಗಿಯೂ, ಪವನ್ ಕುಮಾರ್ ಅವರು ಹಿರಿಯ ಸಹಾಯಕ ಸಲಹಾ ಸಂಪಾದಕರಾಗಿಯೂ, ಅಖಿಲೇಶ್ ಕುಮಾರ್ ಮತ್ತು ಚಂದನ್ ಕುಮಾರ್ ಚೌಧರಿ ಇವರು ಸಹಾಯಕ ಸಲಹಾ ಸಂಪಾದಕರಾಗಿಯೂ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯಲ್ಲಿ (ಅಕ್ಟೋಬರ್ ೧೬-೩೧, ೨೦೨೩, ಸಂಪುಟ ೪, ಸಂಚಿಕೆ ೮) ‘ನಾರಿಶಕ್ತಿಗೆ ನಮಿಸಿದ ಹೊಸ ಸಂಸತ್ತು’ ಎನ್ನುವ ಮುಖಪುಟ ಲೇಖನವಿದೆ. ಇದರ ಜೊತೆಗೆ ಯುವ ಜನರ ಕನಸುಗಳನ್ನು ನನಸು ಮಾಡುವ ಮಾಧ್ಯಮವಾಗಿ ಪರಿವರ್ತನೆಯಾದ ರೋಜ್ ಗಾರ್ ಮೇಳ, ೧೧ ರಾಜ್ಯಗಳು ಏಕಕಾಲಕ್ಕೆ ವಂದೇಭಾರತ್ ಸಂಪರ್ಕ, ಮಾಜಿ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್, ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಪಡೆಯಲಿರುವ ವಾರಣಾಸಿ ಎನ್ನುವ ಲೇಖನಗಳಿವೆ. ಸುಧಾ, ತರಂಗ ಗಾತ್ರದ ೪೪ ಪುಟಗಳನ್ನು ಹೊಂದಿರುವ ಈ ಪತ್ರಿಕೆಯ ಎಲ್ಲಾ ಪುಟಗಳು ವರ್ಣಮಯವಾಗಿವೆ.
ನ್ಯೂ ಇಂಡಿಯಾ ಸಮಾಚಾರ ಪತ್ರಿಕೆಯು ನವಹೆಹಲಿಯ ಜೆ ಕೆ ಆಫ್ ಸೆಟ್ ಗ್ರಾಫಿಕ್ಸ್ ಪ್ರೈ ಲಿ. ಇಲ್ಲಿ ,ಮುದ್ರಿತವಾಗುತ್ತಿದ್ದು, ಧೀರೇಂದ್ರ ಓಝಾ ಇವರು ಪ್ರಕಾಶಕ ಮತ್ತು ಮುದ್ರಕರಾಗಿದ್ದಾರೆ. ಪತ್ರಿಕೆಯು ಉಚಿತ ವಿತರಣೆಗೆ ಮಾತ್ರ ಲಭ್ಯವಿದ್ದು, ಚಂದಾ ಹಣ ತುಂಬುವ ಸೌಲಭ್ಯವಿಲ್ಲ.