ಪ್ರೌಢಶಾಲೆಗಳಲ್ಲಿ ಲೈಂಗಿಕ ಶಿಕ್ಷಣ

ಕರ್ನಾಟಕದಲ್ಲಿ ಎಂಟರಿಂದ ಹನ್ನೆರಡನೆಯ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆಯೇ ? ಅದು ಅನಿವಾರ್ಯವೇ ? ಅಥವಾ ಅದನ್ನು ನಿರ್ಲಕ್ಷಿಸಬಹುದೇ ? ಸಂಪ್ರದಾಯವಾದಿಗಳಿಗೆ ಬೇಸರವಾಗಬಹುದೇ ? ಇತ್ತೀಚೆಗೆ ಮಾನವೀಯ ಮೌಲ್ಯಗಳ ನೈತಿಕ ಶಿಕ್ಷಣ ಮತ್ತು ಲೈಂಗಿಕ ಶಿಕ್ಷಣ ಪಠ್ಯದಲ್ಲಿ ಕಡ್ಡಾಯಗೊಳಿಸುವ ಬಗ್ಗೆ ಚರ್ಚೆ, ಸಂವಾದಗಳು, ಪ್ರಕ್ರಿಯೆಗಳು ಪ್ರಾರಂಭವಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೨೭೨) - ಭಗವಂತ

ಅವನು ಎತ್ತರಕ್ಕೇರಿದ ಕಾರಣ ನಾವೆಲ್ಲರೂ ಅವನ ದೃಷ್ಟಿಗೆ ಬಿದ್ದಿದ್ದೇವೆ. ಗದ್ದೆ, ಕಾಡುಗಳಿಂದಲೇ ತುಂಬಿದ್ದ ಆ ಊರಿಗೆ ಜನರ ಸಂಚಾರ ಬರಬೇಕಿತ್ತು. ಭಗವಂತನಿಗೆ ಆ ಊರಲ್ಲಿ ಜನರ‌ ನಡುವೆ ಬದಕಬೇಕೆನ್ನುವ ಆಸೆ. ಹಾಗಾಗಿ ಜನರನ್ನ ತನ್ನ ಬಳಿಗೆ ಕರೆಸಿಕೊಳ್ಳಲು ಆರಂಭ ಮಾಡಿದ.

Image

ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಹೀಗೆ ಮಾಡಿ…!

ರಾಜ್ಯಾದ್ಯಂತ ಸೆಖೆಯು ತೀವ್ರವಾಗಿ ಏರುತ್ತಿದೆ. ಒಂದೆರಡು ಜಿಲ್ಲೆಗಳಲ್ಲಿ ಮಳೆಯಾದರೂ, ಈ ಅಕಾಲಿಕ ಮಳೆಯಿಂದ ತಾತ್ಕಾಲಿಕವಾಗಿ ಸೆಖೆಯಿಂದ ಆರಾಮ ದೊರೆತರೂ ಬೇಸಿಗೆಯಲ್ಲಿ ಫಲ ನೀಡುವ ಫಸಲಿಗೆ ತೊಂದರೆಯಾಗುವುದಂತೂ ದಿಟ. ಮಾವು, ಹಲಸು ಮುಂತಾದ ಹಣ್ಣುಗಳ ಕೊರತೆ ಈ ವರ್ಷವೂ ಕಾಡಲಿದೆ ಎನ್ನುವುದು ಬೆಳೆಗಾರರ ಅಭಿಮತ.

Image

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಸರಕಾರ ತಕ್ಷಣ ಕ್ರಮ ಕೈಗೊಳ್ಳಲಿ

ರಾಜ್ಯದ ಸರಕಾರಿ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಭಾರೀ ಕೊರತೆ ಇರುವುದು ಬಹಳ ದೊಡ್ಡ ವಿಪರ್ಯಾಸ. ಈ ಎರಡು ಪ್ರಮುಖ ವಿಷಯಗಳ ಸಹಿತ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ೫೦ ಸಾವಿರ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಇವೆ. ಪ್ರಾಥಮಿಕ ತರಗತಿಗಳಲ್ಲಿ ಗಣಿತ, ವಿಜ್ಞಾನ ಸಹಿತ ಎಲ್ಲ ವಿಷಯಗಳ ಬೋಧನೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬಹುಮುಖ್ಯ.

Image

"ಅರಿವೆಂಬುದು ಬಿಡುಗಡೆ"

ಕರ್ನಾಟಕ ಲೇಖಕಿಯರ ಸಂಘ  ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಆಶಯ ನುಡಿ. ಅರಿವು ಮತ್ತು ಬಿಡುಗಡೆ ಕನ್ನಡ ಭಾಷೆಯ ಶಬ್ದಕೋಶದ ಎರಡು ಅತ್ಯುತ್ತಮ ಭಾವಾರ್ಥದ ಪದಗಳು.

Image

ಅತೀತಭವ

ಪುಸ್ತಕದ ಲೇಖಕ/ಕವಿಯ ಹೆಸರು
ಅಶ್ವಿನಿ ಸುನಿಲ್
ಪ್ರಕಾಶಕರು
ಸಾಹಿತ್ಯಲೋಕ ಪಬ್ಲಿಕೇಶನ್ಸ್, ಬೆಂಗಳೂರು
ಪುಸ್ತಕದ ಬೆಲೆ
₹135.00, ಮುದ್ರಣ - 2024

ಈ ವರ್ಷ ಓದಿದ ಮೊದಲ ಕಥಾಸಂಕಲನ ಅಶ್ವಿನಿ ಸುನಿಲ್ ಅವರ 'ಅತೀತಭವ'. ಕಳೆದವರ್ಷ ನಿತ್ಯೋತ್ಸವ ಅಭಿಯಾನದಲ್ಲಿ ವೀಣಾಮೇಡಂ ಅವರಿಂದ ಬಹುಮಾನವಾಗಿ ದೊರೆತ ಕೃತಿಯಿದು.

ಸ್ಟೇಟಸ್ ಕತೆಗಳು (ಭಾಗ ೧೨೭೧) - ಸಾಯುತ್ತದೆ

ಜೀವನವನ್ನ ದಾಟಿಸಬೇಕಿತ್ತು. ಬದುಕು ಅವರೊಂದು ಕೊಂಡಂತೆ ಎಂದು ಕೂಡ ಆಗಲೇ ಇಲ್ಲ. ಬೇರೆ ಬೇರೆ ಕೆಲಸಗಳನ್ನ ಮುಗಿಸ್ತಾ ಮುಗಿಸ್ತಾ ಯಾವ ಕೆಲಸವೂ ಕೈ ಹಿಡಿಲೇ ಇಲ್ಲ. ಜೀವನದ ದಡ ತಲುಪುವುದಕ್ಕೆ ಮತ್ತೆ ಪರದಾಟವೇ ಆಗ್ತಾ ಹೋಯ್ತು. ಕೊನೆಗೆ ಕಷ್ಟಪಟ್ಟು ಸಾಲಸೋಲ ಮಾಡಿ ಮೂರು ಚಕ್ರದ ಗಾಡಿ ಜೀವನ ಅನ್ನೋ ಮೂರು ಅಕ್ಷರವನ್ನು ಬದಲಾಯಿಸಿತು. ಮೊದಮೊದಲು ಚಕ್ರ ತಿರುಗಿದ ಹಾಗೆ ಜೀವನವೇನೂ ತಿರುಗುತ್ತಾ ಇರಲಿಲ್ಲ.

Image

ಒಕ್ಕಣ್ಣಾದರೆ ರಕ್ಷಣೆ ಇಕ್ಕಣ್ಣಾದರೆ ಬೇಟೆ

ಎರಡು ಕಣ್ಣುಗಳಿರುವ ಕಾಗೆ ಒಕ್ಕಣ್ಣನಾಗುವುದಾದರೂ ಹೇಗೆ? ಕಾಗೆಗಳ ಕಣ್ಣು ಮತ್ತು ಮನುಷ್ಯರ ಕಣ್ಣಿನ ನಡುವಿರುವ ಮೂಲಭೂತ ವ್ಯತ್ಯಾಸವನ್ನು ಗಮನಿಸಿ. ಮನುಷ್ಯರ ಕಣ್ಣುಗಳು ಮುಖದ ಮುಂಭಾಗದಲ್ಲಿದ್ದರೆ ಕಾಗೆಯ ಕಣ್ಣುಗಳು ತಲೆ ಬುರುಡೆಯ ಇಕ್ಕೆಲಗಳಲ್ಲಿವೆ. ಆದ್ದರಿಂದ ಬಹುಪಾಲು ತನ್ನ ಸುತ್ತಲಿನ ವಸ್ತುಗಳನ್ನು ಗಮನಿಸುವಾಗ ಕಾಗೆ ಒಂದು ಬಾರಿಗೆ ಒಂದೇ ಕಣ್ಣನ್ನು ಬಳಸುತ್ತದೆ.

Image