ಸ್ಟೇಟಸ್ ಕತೆಗಳು (ಭಾಗ ೧೧೫೧)- ಪರಿಸ್ಥಿತಿ

ಕನಸು ಕಂಡದ್ದು ಅಪ್ಪ ಆ ಕನಸಿಗಾಗಿ ತನ್ನೂರನ್ನು ಬಿಟ್ಟು ಪರಿಚಯವಿಲ್ಲದ ಊರಿನಲ್ಲಿ ಹೊಸತರಹದ ಶಿಕ್ಷಣವನ್ನು ಪಡೆಯುತ್ತಿದ್ದಳಾಕೆ. ಆಕೆಯ ಪರಿಶ್ರಮ ಅಭ್ಯಾಸಕ್ಕೆ ಖಂಡಿತಾ ಶಿಕ್ಷಣದ ಮುಂದಿನ ದಾರಿಗಳ ಬಗ್ಗೆ ಯೋಚಿಸುತ್ತಿರುವಾಗಲೇ ಮನೆಯಲ್ಲಿ ತಂದೆಯ ಆರೋಗ್ಯ ಕೈ ಕೊಟ್ಟಿತು. ಆರೋಗ್ಯದಲ್ಲಿ ಏರುಪೇರಾಗಿ ಸಾವು ಬದುಕಿನ ನಡುವೆ ಹೋರಾಡಿ ಆರೋಗ್ಯವನ್ನು ಮತ್ತೆ ಧರಿಸಿ ಅಪ್ಪ ಮನೆಗೆ ಬಂದರು.

Image

ನಕ್ಸಲ್ - ಗಾಂಧಿ - ಅಂಬೇಡ್ಕರ್ - ನಾವು ಮತ್ತು ವಿಕ್ರಂ ಗೌಡ ಎನ್ ಕೌಂಟರ್...

"ಗುರಿ ಅಥವಾ ಉದ್ದೇಶ ಎಷ್ಟು ಮುಖ್ಯವೋ ಆ ಗುರಿಯನ್ನು ತಲುಪುವ ಮಾರ್ಗವೂ ಸಹ ಅಷ್ಟೇ ಮುಖ್ಯ. ಅದನ್ನು ತಲುಪಲು ಸತ್ಯ, ಅಹಿಂಸೆ, ಸರಳತೆ, ನೈತಿಕತೆ ಮತ್ತು ಕಾನೂನಿನ ವ್ಯವಸ್ಥೆಗೆ ಗೌರವ ನೀಡಬೇಕು. ಯಾವುದೇ ಹಿಂಸೆ, ಕೋಪ, ವಂಚನೆ, ದ್ರೋಹ ಎಂಬ ಸಾಧನಗಳು ಒಳ್ಳೆಯದಲ್ಲ ಮತ್ತು ಅಪಾಯಕಾರಿ " ಎಂಬ ಅರ್ಥದ ಮಾತುಗಳನ್ನು ಮಹಾತ್ಮ ಗಾಂಧಿಯವರು ಹೇಳಿದ್ದಾರೆ.

Image

ಕ್ಯಾಪ್ಸಿಕಮ್ ಬಾತ್

Image

ಪಾತ್ರೆಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು, ಅರಿಶಿನ, ಸಾಸಿವೆ ಹಾಕಿ ಚಟ್‌ಪಟ್ ಎಂದಮೇಲೆ, ಹೆಚ್ಚಿದ ಕ್ಯಾಪ್ಸಿಕಮ್, ಬೇಯಿಸಿದ ಹಸಿರು ಬಟಾಣಿ ಅಥವಾ ಶೆಂಗಾ, ಈರುಳ್ಳಿ, ಹಾಕಿ ಚೆನ್ನಾಗಿ ಹುರಿದ ಮೇಲೆ ಬಾತ್ ಪೌಡರ್ ಹಾಕಿ, ಉಪ್ಪು, ಹುಣಸೆ ರಸ ಚಿಟಕಿ ಸಕ್ಕರೆ ಹಾಕಿ ಕೈಯ್ಯಾಡಿಸಿ ಅದಕ್ಕೆ ಉದುರಾದ ಅನ್ನ ಹಾಕಿ ಕಲಸಿದರೆ ಕ್ಯಾಪ್ಸಿಕಮ್ ಬಾತ್ ಸಿದ್ದ.

ಬೇಕಿರುವ ಸಾಮಗ್ರಿ

ಉದುರಾದ ಅನ್ನ, ಕ್ಯಾಪ್ಸಿಕಮ್, ಹಸಿರು ಬಟಾಣಿ ಅಥವಾ ಶೆಂಗಾ, ಈರುಳ್ಳಿ, ಹುಣಸೇ ಹಣ್ಣು, ಕರಿಬೇವು, ಉದ್ದಿನ ಬೇಳೆ, ಉಪ್ಪು, ಚಿಟಕಿ ಸಕ್ಕರೆ, ಎಣ್ಣೆ, ತುಪ್ಪ, ಬಾತ್ ಪೌಡರ್.

ಪೌಡರ್ ಮಾಡುವದು: ಕಡ್ಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸು, ಚಕ್ಕೆ, ಲವಂಗ, ಧನಿಯಾ, ಎಳ್ಳು, ಹಾಕಿ ಹುರಿದು ಪುಡಿ ಮಾಡಿಕೊಳ್ಳುವುದು.

ಸ್ಟೇಟಸ್ ಕತೆಗಳು (ಭಾಗ ೧೧೫೦)- ವಾಸ್ತವ

ಕಳೆದುಕೊಳ್ಳುವ ಭಯ ಕಾಡುವುದ್ದಕ್ಕೆ ಪ್ರಾರಂಭವಾದಾಗ ನಿನ್ನ ಜೊತೆಗಿದ್ದ ಜೀವವನ್ನ ಹೆಚ್ಚು ಪ್ರೀತಿಸುವುದಕ್ಕ ಆರಂಭ ಮಾಡುತ್ತೀಯಾ? ನನಗೆ ಈ ಮಾತು ಅಷ್ಟು ಸುಲಭಕ್ಕೆ ಅರ್ಥ ಆಗ್ತಾ ಇರ್ಲಿಲ್ಲ. ಎಲ್ಲಿಂದಲೋ ದಾರಿ ಕಾಣದ ಬೆಕ್ಕೊಂದು ಮನೆಗೆ ಬಂದು ನಮ್ಮ ಜೊತೆಗೆ ಆತ್ಮೀಯ ಸ್ನೇಹಿತನಾಯ್ತು. ನಾವು ಕೊಟ್ಟ ಪ್ರೀತಿಗೆ ತಿರುಗಿ ಹೆಚ್ಚೇ ಪ್ರೀತಿಯನ್ನು ನೀಡುವುದಕ್ಕೆ ಆರಂಭ ಮಾಡಿತು.

Image

ನಮ್ಮ ನೆಲದ ಶ್ರೇಷ್ಠ ದಾರ್ಶನಿಕ ಕವಿ - ಕನಕದಾಸರು

"ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ" ಎನ್ನುವ ಭರವಸೆಯ ನುಡಿಗಳನ್ನು ಆಡಿದ ಕನಕದಾಸರು ಮನುಷ್ಯ ಬದುಕಿನಲ್ಲಿ ಸಮಸ್ಯೆಗಳು ಬರುವುದು ಸಹಜ. ಯಾವುದಕ್ಕೂ ಆತಂಕಪಡುವ ಅಗತ್ಯವಿಲ್ಲ. ಪ್ರತಿ ಸಮಸ್ಯೆಗೂ ಉತ್ತರ ಇದ್ದೇ ಇರುತ್ತದೆ. ಸಂರ್ಕೀಣಮಯ ಬದುಕಿನಲ್ಲಿ ತಾಳ್ಮೆ ತುಂಬಾ ಮುಖ್ಯ . ಪ್ರತಿ ಕ್ಷಣದ ಸಂತಸವನ್ನು ಮನುಷ್ಯಜೀವಿ ಅನುಭವಿಸಬೇಕು.

Image

87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೊ. ರು. ಚನ್ನಬಸಪ್ಪ ಆಯ್ಕೆ

ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಗೊ. ರು. ಚನ್ನಬಸಪ್ಪ(ಗೊ.ರು.ಚ.) ಅವರನ್ನು ಆಯ್ಕೆ ಮಾಡಲಾಗಿದೆ.

Image

ಅದಾನಿ ಕಂಪೆನಿ ಲಂಚ ಆರೋಪ ಬಗ್ಗೆ ದೇಶದಲ್ಲೂ ತನಿಖೆಯಾಗಲಿ

ಖಾದ್ಯ ತೈಲದಿಂದ ಬಂದರು ನಿರ್ವಹಣೆಯವರೆಗೆ ಹಲವು ಉದ್ದಿಮೆಗಳನ್ನು ನಡೆಸುತ್ತಿರುವ ದೇಶದ ಶೀಮಂತ ಉದ್ಯಮಿ ಗೌತಮ್ ಅದಾನಿ ಅವರಿಗೆ ೨೨ ತಿಂಗಳ ಅವಧಿಯಲ್ಲಿ ಮತ್ತೊಂದು ಸಂಕಷ್ಟ ಎದುರಾಗಿರುವುದು ಭಾರತೀಯ ಉದ್ಯಮ ವಲಯ ಹಾಗೂ ರಾಜಕೀಯ ರಂಗದಲ್ಲಿ ಸಹಜವಾಗಿಯೇ ಚರ್ಚೆಗೆ ಕಾರಣವಾಗಿದೆ. ಹಿಂಡನ್ ಬರ್ಗ್ ಸಂಕಷ್ಟದಿಂದ ಹೊರಬಂದ ಅದಾನಿ ಅವರು ದೇಶದ ಐದು ರಾಜ್ಯಗಳ ಸರ್ಕಾರಿ ಅಧಿಕಾರಿಗಳಿಗೆ ೨೧೦೦ ಕೋಟಿ ರೂ.

Image