ಒಂದು ಗಝಲ್
ಎಲ್ಲ ಮರೆತು ಸಾಗಿದೆಯೊ ನನ್ನ ನಲ್ಲ ಎಲ್ಲಿರುವೆ ಸಖ
- Read more about ಒಂದು ಗಝಲ್
- Log in or register to post comments
ಎಲ್ಲ ಮರೆತು ಸಾಗಿದೆಯೊ ನನ್ನ ನಲ್ಲ ಎಲ್ಲಿರುವೆ ಸಖ
ಇಸ್ಮಾಯಿಲ್ ಅಣ್ಣ ತಮ್ಮ ನಾಲ್ಕು ಮೊಮ್ಮಕ್ಕಳನ್ನು ಕರೆದುಕೊಂಡು ಆ ಗಣಪತಿ ಮಂಟಪದ ಹತ್ತಿರ ಬಂದಿದ್ರು. ಬಂದವರೇ ಮಕ್ಕಳ ಬಳಿ ಕೈಮುಗಿಯುವುದಕ್ಕೆ ಹೇಳಿದರು ಮಕ್ಕಳು ಮುಖ ಮುಖ ನೋಡ್ತಿದ್ದಾಗ ಇಸ್ಮಾಯಿಲ್ ಅಣ್ಣ ಎಚ್ಚರಿಕೆಯ ಮಾತನಾಡಿದರು, ಮಕ್ಕಳೇ ದೇವರು ಎಲ್ಲರೂ ಒಬ್ಬರೇ ಕೈಮುಗಿದು ಪ್ರಾರ್ಥಿಸಬೇಕು. ಖಂಡಿತಾ ಆತ ಒಳ್ಳೇದು ಮಾಡುತ್ತಾನೆ. ಮಕ್ಕಳಿಗೆ ಇದು ಅಷ್ಟು ಸಮಂಜಸ ಅನ್ನಿಸಲಿಲ್ಲ.
ಮೂಲಂಗಿಯನ್ನು ಆಹಾರದಲ್ಲಿ ಬಳಸಿಕೊಳ್ಳಲು ಬಹುತೇಕ ಮಂದಿ ಇಷ್ಟ ಪಡುವುದಿಲ್ಲ. ಅದಕ್ಕೆ ಕಾರಣ ಅದರಿಂದ ಹೊರ ಹೊಮ್ಮುವ ವಾಸನೆ. ಮೂಲಂಗಿಗೆ ಒಂದು ರೀತಿಯ ವಾಸನೆ ಇದೆ. ಇದು ಬಹುತೇಕರಿಗೆ ಒಗ್ಗುವುದಿಲ್ಲ. ಆದರೆ ದೈನಂದಿನ ಆಹಾರದಲ್ಲಿ ಮೂಲಂಗಿಯನ್ನು ಬಳಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಕೃತಿ ನಮಗೆ ನೀಡಿರುವ ಪ್ರಮುಖ ಆಹಾರ ಪದಾರ್ಥಗಳಲ್ಲಿ ಮೂಲಂಗಿಯೂ ಒಂದು.
ಮೂಲ ಕೃತಿ ಮತ್ತು ಅನುವಾದ ಅಥವಾ ಭಾಷಾಂತರ, ಮೂಲ ಸಿನಿಮಾ ಅಥವಾ ರಿಮೇಕ್ ಸಿನಿಮಾ ಇವುಗಳಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಯಾವುದು ಅತಿ ಹೆಚ್ಚು ಕ್ರಿಯಾತ್ಮಕತೆಯನ್ನು ಹೊಂದಿರುತ್ತದೆ ಎಂಬ ಚರ್ಚೆಯ ಸುತ್ತ ಇನ್ನೊಂದಿಷ್ಟು ಅಭಿಪ್ರಾಯಗಳು.
ಇಂದು ಬದುಕಿನಲ್ಲಿ ಯಾವುದು ಮಹತ್ವ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಎಲ್ಲರೂ ಮಾಡುವುದು ಯಾವುದಕ್ಕಾಗಿ..? ಒಂದು ಸುಂದರ ಜೀವನ ಕಟ್ಟಿಕೊಳ್ಳಬೇಕು ಅಂತ ಅಲ್ಲವೇ. ಹಬ್ಬ ಹರಿದಿನ ಮಾಡುತ್ತೇವೆ. ಹೊಸ ಬಟ್ಟೆ ಬರೆ ಧರಿಸುತ್ತೇವೆ. ವಿಶೇಷ ತಿನಿಸು ಮಾಡುತ್ತೇವೆ, ಸಂಗ್ರಹ ಮಾಡುತ್ತೇವೆ. ಮನೆ ಕಟ್ಟುತ್ತೇವೆ ಇವೆಲ್ಲ ಮಾಡುವುದು ಯಾವುದಕ್ಕೆ..? ಬದುಕುವುದಕ್ಕಾಗಿ. ಇಂತಹ ಬದುಕು ಎಲ್ಲರಿಗೂ ದೊರೆತಿದೆ.
ಯಾರೋ ಬಂದರು
ಹಬ್ಬಗಳನ್ನು ಆಚರಿಸುವಾಗ ಮತ್ತು ಸಮಾರಂಭಗಳಲ್ಲಿ ಎಲೆಗಳಿಂದ ತೋರಣ ಕಟ್ಟುವುದು ಹಾಗೂ ಕಂಬಗಳಿಗೆ ಎಲೆಗಳನ್ನು ಸುತ್ತಿ ಅಲಂಕರಿಸುವುದನ್ನು ನಾವು ಕಂಡಿದ್ದೇವೆ. ಪ್ರಕೃತಿಯ ಅದ್ಭುತ ಕೊಡುಗೆಗಳಾದ ಎಲೆಗಳು ತಮ್ಮ ಪತ್ರಹರಿತ್ತಿನ ಮೂಲಕ ದ್ಯುತಿ ಸಂಶ್ಲೇಷಣೆ ನಡೆಸಿ, ಸಸ್ಯಗಳ ಆಹಾರ ಉತ್ಪಾದನೆಗೆ ಮೂಲವಾಗಿವೆ. ಆ ಮೂಲಕ ಭೂಮಿಯ ಎಲ್ಲ ಜೀವರಾಶಿಗಳ ಉಳಿವಿಗೆ ಕಾರಣವಾಗಿವೆ.
ದೋಸೆ ತವೆಯನ್ನು ಹದವಾಗಿ ಬಿಸಿ ಮಾಡಿ. ಬ್ರೆಡ್ ಹಾಳೆಯ ಎರಡೂ ಬದಿಗಳಿಗೆ ಬೆಣ್ಣೆ ಸವರಿ ಬಿಸಿ ತವೆಯ ಮೇಲೆ ಮಂದ ಉರಿಯಲ್ಲಿ ಎರಡೂ ಬದಿ ಕೆಂಪಗೆ ಕಾಯಿಸಿರಿ. ಗರಿಗರಿಯಾಗಬೇಕು. ತಣಿದ ಮೇಲೆ ಹಾಳೆಯನ್ನು ಆರು ತುಂಡುಗಳನ್ನಾಗಿ ಮಾಡಿರಿ. ಬೇಯಿಸಿದ ಚನಾ ಮತ್ತು ಬಟಾಟೆಯನ್ನು ಕೈಯಿಂದ ತುಸು ಮಸೆದು ಬದಿಗಿಡಿ. ಮೊಸರಿಗೆ ಸ್ವಲ್ಪ ಉಪ್ಪು ಮತ್ತು ಸಕ್ಕರೆ ಬೆರೆಸಿ ಬದಿಗಿಡಿ.
ಬ್ರೆಡ್ ಹಾಳೆಗಳು ೪, ಬೇಯಿಸಿದ ಬಿಳಿ ಕಡಲೆ, ಬೇಯಿಸಿ ಪುಡಿಮಾಡಿದ ಬಟಾಟೆ, ಮೊಸರು ತಲಾ ಮುಕ್ಕಾಲು ಕಪ್, ಹೆಚ್ಚಿದ ನೀರುಳ್ಳಿ ೪ ಚಮಚ, ಹೆಚ್ಚಿದ ಹಸುರುಮೆಣಸಿನಕಾಯಿ ೧, ಹೆಚ್ಚಿದ ಕೊತ್ತಂಬರಿಸೊಪ್ಪು ೨ ಚಮಚ, ಕೊತ್ತಂಬರಿಸೊಪ್ಪು ಚಟ್ನಿ ೪ ಚಮಚ, ಸಿಹಿ-ಹುಳಿ ಚಟ್ನಿ ೪ ಚಮಚ, ಕೆಂಪುಮೆಣಸಿನಪುಡಿ, ಜೀರಿಗೆಪುಡಿ, ಚಾಟ್ ಮಸಾಲಾಪುಡಿ, ಲಿಂಬೇರಸ ತಲಾ ೨ ಚಮಚ., ಶಾವಿಗೆ (ಸೇವ್) ಮುಕ್ಕಾಲು ಕಪ್, ಬೆಣ್ಣೆ ೪ ಚಮಚ., ಸಕ್ಕರೆ ೧ ಚಮಚ, ಉಪ್ಪು ರುಚಿಗೆ.
ವಾಯುಮಾಲಿನ್ಯದ ಕಾರಣದಿಂದಾಗಿ ಭಾರತೀಯರ ಸರಾಸರಿ ಆಯಸ್ಸು ೩.೫ ವರ್ಷದಷ್ಟು ಕಡಿಮೆಯಾಗುತ್ತಿದೆ ಎಂದು ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದ ವಾಯುಗುಣಮಟ್ಟ ಸೂಚ್ಯಂಕ ಅಂದಾಜಿಸಿರುವುದು ಭಾರತಕ್ಕೆ ನಿಜಕ್ಕೂ ಎಚ್ಚರಿಕೆಯ ಗಂಟೆ. ಇದೇ ವಿವಿಯ ಅಂದಾಜಿನ ಪ್ರಕಾರ, 'ದೆಹಲಿಯಲ್ಲಿಜನರ ಸರಾಸರಿ ಆಯಸ್ಸು ೮.೨ ವರ್ಷದಷ್ಟು ಕಡಿಮೆಯಾಗುತ್ತಿದೆ.