ಸಾವಿರ ಹಾಡಿನ ಒಬ್ಬ ಸರ್ದಾರ !

ಕೋವಿಡ್ ಸಮಯದಲ್ಲಿ ಆಸಕ್ತಿ ಇದ್ದವರು ಹಾಡು ಹಾಡಲು ತುಂಬಾ ಆಪ್ ಗಳು ಸಂಸ್ಥೆಗಳು ತಂತ್ರಜ್ಞಾನಗಳು ಬೆಳಕಿಗೆ ಬಂದವು.

ಅದರಲ್ಲಿ ಸ್ಟಾರ್  ಮೇಕರ್ ಎಂಬ ಆ್ಯಪ್ ಕೂಡ ಒಂದು. ಅಲ್ಲಿ ಚೆನ್ನಾಗಿ ಹಾಡುವ ಅನೇಕ ಗಾಯಕಿಯರನ್ನು ಪತ್ತೆ ಮಾಡಿಕೊಂಡು ಅವರ ಜೊತೆ ಸುಮಾರು ಆರುನೂರು ಯುಗಳ ಗೀತೆಗಳನ್ನು ನಾನು ಹಾಡಿದ್ದೇನೆ. ಮತ್ತು ಸುಮಾರು 400 ಹಾಡುಗಳನ್ನು ಬೇರೆ ಭಾಷೆಯಿಂದ -ಬಹುತೇಕ ಹಿಂದಿ- ಅನುವಾದ ಮಾಡಿ ಹಾಡಿದ್ದೇನೆ. ಇವುಗಳಲ್ಲಿ ಸುಮಾರು 40 ಪೂರ್ತಿಯಾಗಿ ಅನುವಾದ ಆಗಿವೆ.  ಇನ್ನು ಸುಮಾರು 40 ಅರ್ಧ ಅನುವಾದ , ಉಳಿದವು ಕೆಲವೇ ಸಾಲು ಅನುವಾದ ಆಗಿವೆ.

ಈ  ಸಾವಿರ ಹಾಡುಗಳನ್ನು ನಾನು ನನ್ನ ಮೊಬೈಲ್ಗೆ ಡೌನ್ಲೋಡ್ ಮಾಡಿಕೊಂಡಿದ್ದೇನೆ . ನಾನು ತಕ್ಕಮಟ್ಟಿಗೆ ಚೆನ್ನಾಗಿ ಹಾಡುತ್ತೀನಿ ಅಂತ ಈ ಸಮಯದಲ್ಲಿ ಹೇಳಬೇಕು.

ನಾವು ತೊಡಗಿಕೊಂಡಿರುವ ಅಗತ್ಯ ಹಾಗೂ ಅನಗತ್ಯ ವಿಷಯಗಳು

ನಾವು ಅನಗತ್ಯ ಸಂಗತಿಗಳ ನಡುವೆ ಕಳೆದು ಹೋಗಿದ್ದೇವೆನೋ ಅನಿಸುತ್ತದೆ. ಮಾಡಬೇಕಾಗುವ ಮಾಡದೆ ತಿಳಿಬೇಕಾದ್ದನ್ನು ತಿಳಿಯದೆ ಸಂಬಂಧವಿಲ್ಲದ ರಾಜಕೀಯ ಮನೋರಂಜನೆ ಧಾರ್ಮಿಕ ವಿಷಯಗಳಲ್ಲಿ ನಮ್ಮನ್ನೇ ಕಳೆದುಕೊಂಡಿದ್ದೇವೆ.ಅನಿಸುತ್ತದೆ.

ಇಲ್ಲಿ ಕೆಲವು ಇತ್ತೀಚಿನ ಉದಾಹರಣೆಗಳಿವೆ. 

ಕರಿಮೆಣಸಿನ ಪರಾಗಸ್ಪರ್ಶ ಮತ್ತು ವಾತಾವರಣ

ಮುಂಗಾರು ಮಳೆ ಪ್ರಾರಂಭದಲ್ಲಿ ಕರಿ ಮೆಣಸು ಹೂ ಕರೆ ಬಿಡುವ ಸಮಯ. ಮೊದಲ ಮಳೆ ಸಿಂಚನವಾದ ಕೂಡಲೇ ಬಳ್ಳಿ ಚಿಗುರಲು ಪ್ರಾರಂಭವಾಗುತ್ತದೆ. ಕೆಲವು ಸ್ವಲ್ಪ ತಡವಾಗುತ್ತದೆ. ಮತ್ತೆ ಕೆಲವು ಮೇ ತಿಂಗಳ ಕೊನೆಗೇ ಹೂ ಕರೆ  ಬಿಡಲು ಪ್ರಾರಂಭವಾಗುತ್ತದೆ. ಇದು ಬಳ್ಳಿಯ ಆರೋಗ್ಯ ಮತ್ತು ತಳಿಯ ಮೇಲೆ ಅವಲಂಭಿತವಾಗಿದೆ. 

Image

ಸ್ಟೇಟಸ್ ಕತೆಗಳು (ಭಾಗ ೧೪೩೦) - ದೀಪ

ದೀಪಕ್ಕೆ ಬೇಸರವಾಗಿತ್ತು. ವೇದಿಕೆ ಮುಂದೆ ಕಾರ್ಯಕ್ರಮಗಳಲ್ಲಿ ದೇವರ ಮುಂದೆ ಎಲ್ಲ ಕಡೆ ಹಚ್ಚುವಾಗ ಕೈ ಅಡ್ಡ ಹಿಡಿದು ಜಗತ್ತು ಮತ್ತು ಮುಂದಿರುವವರು ನನ್ನನ್ನು ನೋಡದ ಹಾಗೆ ತಡೆ ಮಾಡುವುದು ಯಾರಿಗೂ ತೋರಿಸಬಾರದೆನ್ನುವ ಅಹಂಕಾರ ಏಕೆ? ಈ ಮೋಸವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನನಗೆ ಇದರಿಂದ ಮುಕ್ತಿ ಬೇಕು, ನನ್ನ ಪ್ರಖರವಾದ ಬೆಳಕು ಜಗತ್ತಿಗೆ ಕಾಣಬೇಕು.

Image

ರಾಜತಾಂತ್ರಿಕ ಗೆಲುವು

ಎರಡು ತಿಂಗಳ ಹಿಂದಷ್ಟೆ ಕ್ವಿಂಗ್‌ ವೋದಲ್ಲಿ ನಡೆದ ಶಾಂಫ್ಟ್ ಸಹಕಾರ ಸಂಘಟನೆ(ಎಸ್‌ಸಿಓ)ಯ ರಕ್ಷಣಾ ಸಚಿವರ ಮಟ್ಟದ ಸಭೆಯು ಪಹಲ್ಗಾಮ್ ನರಮೇಧವನ್ನು ಖಂಡಿಸಲು ನಿರಾಕರಿಸಿತ್ತು. ಪಾಕಿಸ್ತಾನವನ್ನು ಮೆಚ್ಚಿಸುವ ಸಲುವಾಗಿ ಚೀನಾವು ಪಹಲ್ಗಾಮ್ ಉಲ್ಲೇಖವಿಲ್ಲದೆ ನಿರ್ಣಯ ರೂಪಿಸಿತ್ತು.

Image

ಆಕಾಶಬುಟ್ಟಿ

ಪುಸ್ತಕದ ಲೇಖಕ/ಕವಿಯ ಹೆಸರು
ನಟರಾಜ್ ಅರಳಸುರಳಿ
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೨೨೦.೦೦, ಮುದ್ರಣ: ೨೦೨೫

ಆಕಾಶಬುಟ್ಟಿಯ ಲೇಖಕರಾದ ಪ್ರೊ. ನಟರಾಜ್ ಅರಳಸುರಳಿ, ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ ಅರಳಸುರಳಿಯ ನಿವಾಸಿ. ಮೂಲತಃ ವ್ಯಂಗ್ಯಚಿತ್ರಗಾರರಾಗಿರುವ ನಟರಾಜ್ ನಾಡಿನಾದ್ಯಂತ ವ್ಯಂಗ್ಯಚಿತ್ರಕಾರರಾಗಿ ಹೆಚ್ಚು ಜನ ಓದುಗರಿಗೆ ಪರಿಚಿತರಾದವರು. ಈವರೆಗೂ ಐದು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಕನ್ನಡದ ಪ್ರಸಿದ್ದ ವಾರ, ಮಾಸ ಪತ್ರಿಕೆಗಳೆಲ್ಲೆಲ್ಲಾ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ.

ಸರ್ಕಾರಿ (ತೆರಿಗೆ) ಹಣದ ದುಂದು ವೆಚ್ಚ

ಕೆಲವು ಸಾಮಾನ್ಯ ಉದಾಹರಣೆಗಳು- ಒಂದು ಆಶ್ಚರ್ಯಕರ ವಿಷಯ ಸಾಮಾನ್ಯ ಜನರ ಅರಿವಿಗೆ ಇನ್ನೂ ಬಂದಿಲ್ಲವೆನಿಸುತ್ತದೆ. ಸರ್ಕಾರ ಖರ್ಚು ಮಾಡುವ ವೆಚ್ಚದಲ್ಲಿ ಶೇಕಡಾ 20/30% ವ್ಯರ್ಥ ಅಥವಾ ದುಂದು ವೆಚ್ಚ ಆಗಿರುತ್ತದೆ. ದಯವಿಟ್ಟು ಗಮನಿಸಿ. ಇದರಲ್ಲಿ ಭ್ರಷ್ಟಾಚಾರ ಸೇರಿಲ್ಲ. ಅದು ಪ್ರತ್ಯೇಕ.

Image

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 1)

ಈ ಬಾರಿ ಜತೆಗೆ ಯಾರೂ ಇರಲಿಲ್ಲ. ಗಣೇಶ್ ಟ್ರಾವೆಲ್ಸ್ ನಲ್ಲಿ ಪ್ರಯಾಣಿಸಿ ಬಾದಾಮಿ ತಲುಪಿದಾಗ ನನ್ನ ಸಾಹಿತ್ಯದ ಅಭಿಮಾನಿ ಕಿರಿಯ ಸ್ನೇಹಿತ ಶಶಿಕಾಂತ ಗೌಡರ್ ನನಗಾಗಿ ಕಾಯುತ್ತಿದ್ದರು. ಅವರನ್ನು ಮೊದಲೇ ಸಂಪರ್ಕಿಸಿ ಉಳಕೊಳ್ಳುವ ಹೋಟೆಲ್ ಮತ್ತು ಸುತ್ತಾಟಕ್ಕೆ ಕಾರಿನ ವ್ಯವಸ್ಥೆಯನ್ನು ನಾನು ಮೊದಲೇ ಮಾಡಿಕೊಂಡಿದ್ದೆ.

Image