ಸ್ಟೇಟಸ್ ಕತೆಗಳು (ಭಾಗ ೧೧೫೯)- ಸರಿ ತಪ್ಪು

ತಪ್ಪುಗಳ‌ ಮೂಟೆಗಳನ್ನ ಹೊತ್ತುಕೊಂಡವ ನೀನು. ಬೇರೆಯವರ ಭಾರದ ಬಗ್ಗೆ ಯೋಚನೆ ಯಾಕೆ? ನಿನ್ನ ಕಾರ್ಯಕ್ಕೆ ಸಮಯ ಮಾಡಿಕೊಂಡು ಜೊತೆಯಾದವರು ಹಲವರು, ಅವರ ನಿಜದ ಸ್ಥಿತಿ ನಿನಗೆ ಗೊತ್ತಿಲ್ಲ. ನಿನಗೆ ಅವರಿಂದ ಉಪಯೋಗವೂ ಆಗಿದೆ ಆದರೆ ಅವರಿಗೆ ನಿನ್ನಿಂದ ದೊರಕಿರುವುದು ಏನು? ನಿನಗೀಗ ಅವರ ಅಗತ್ಯಕ್ಕೆ‌ನೀಡಲು ಸಮಯವೂ ನಿನ್ನಲ್ಲಿಲ್ಲ. ನೀನೀಗ‌ ಪರಿಸ್ಥಿತಿಗಳನ್ನ ದೂರುತ್ತಿದ್ದೀಯಾ? ಇದು‌ ಸರಿಯಾ?

Image

ನನ್ನ ಹಕ್ಕು

ಸಂವಿಧಾನವನ್ನು ದೇವರಂತೆ ಪೂಜಿಸುವ ದೇಶ ನಮ್ಮದು. ಬಡವನೆ ಇರಲಿ, ಶ್ರೀಮಂತನೆ ಆಗಿರಲಿ ತನ್ನ ಹಕ್ಕನ್ನು ತಾನು ಚಲಾಯಿಸುವ ಸ್ವತಂತ್ರ ಇರುವ ಸಮಾಜ ನಮ್ಮದಾಗಿದೆ. ಹೀಗಿರುವಾಗ ಇದೆ ವಿಚಾರಕ್ಕೆ ಸಂಬಂಧ ಪಡುವಂತಹ ಘಟನೆ ಒಂದು ತರಗತಿಯಲ್ಲಿ ನಡೆಯಿತು. 

Image

ಕರಿಬೇವು ಬೇಸಾಯದ ತಾಂತ್ರಿಕತೆ

ಕರಿಬೇವಿನ ಎಲೆಗಳನ್ನು ವಿಶೇಷವಾಗಿ ಭಾರತೀಯ ಅಡುಗೆಗಳಲ್ಲಿ ವಾಸನೆ ಮತ್ತು ರುಚಿಗಾಗಿ ಉಪಯೋಗಿಸುತ್ತಾರೆ. ಗಂಧಕಯುಕ್ತ ಎಣ್ಣೆಯ ಅಂಶವು ಇದರ ಸುವಾಸನೆಗೆ ಕಾರಣ. ಎಲೆಗಳಲ್ಲಿ ಹೇರಳವಾಗಿ ಪೋಷಕಾಂಶಗಳಾದ `ಎ’ ಅನ್ನಾಂಗ, ಕಬ್ಬಿಣ ಮತ್ತು ಸುಣ್ಣದ ಅಂಶಗಳಿವೆ. ಕರಿಬೇವನ್ನು ಆಯರ್ವೇದ ಮತ್ತು ಯುನಾನಿ ಔಷಧಿ ತಯಾರಿಕೆಯಲ್ಲಿ ಸಹ ಬಳಕೆ ಮಾಡುತ್ತಾರೆ.

Image

ಸರ್ವೆ ನಂಬರ್ - 97

ಪುಸ್ತಕದ ಲೇಖಕ/ಕವಿಯ ಹೆಸರು
ಅನಿಲ್ ಗುನ್ನಾಪೂರ
ಪ್ರಕಾಶಕರು
ಬೀಟಲ್ ಬುಕ್ ಹೌಸ್, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦, ಮುದ್ರಣ: ೨೦೨೪

ಅನಿಲ್ ಗುನ್ನಾಪೂರ ಅವರ ನೂತನ ಕಥಾ ಸಂಕಲನ ಸರ್ವೆ ನಂಬರ್ ೯೭. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ.ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ…

ಕರ್ನಾಟಕ ದಲಿತ ಚಳವಳಿ ಐವತ್ತು ವರ್ಷಗಳು...

ಇದು ಭಾಗಶಃ ಸರಿಯಷ್ಟೇ. ಏಕೆಂದರೆ ದಲಿತ ಚಳುವಳಿಗೆ ಶತಶತಮಾನಗಳ ಇತಿಹಾಸವಿದೆ. ಅದು ಮಾನಸಿಕವಾಗಿ, ದೈಹಿಕವಾಗಿ, ಅಸಹಾಯಕವಾಗಿ ಆಕ್ರೋಶವಾಗಿ, ಮೌನವಾಗಿ ಬೇರೆ ಬೇರೆ ರೂಪ ಪಡೆಯುತ್ತಾ ಸದಾ ಕಾಲ ಚಲಿಸುತ್ತಾ, ಆಂತರ್ಯದ ತುಮುಲಗಳು ವ್ಯಕ್ತವಾಗುತ್ತಲೇ ಇದೆ.

Image

ಸಬ್ಬಸಿಗೆ ಸೊಪ್ಪಿನ ತಾಲಿಪಟ್ಟು

Image

ಗೋಧಿ ಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿದ ಸಬ್ಬಸಿಗೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪನ್ನು ಹಾಕಿ, ಚೆನ್ನಾಗಿ ನಾದಿ. ಕಲಸಿದ ಹಿಟ್ಟು ಒಂದು ಗಂಟೆ ನೆನೆದ ನಂತರ ರೊಟ್ಟಿ ಲಟ್ಟಿಸಿ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದ್ರೆ ರುಚಿಯಾದ ಸಬ್ಬಸಿಗೆ ಸೊಪ್ಪು ತಾಲಿಪಟ್ಟು ತಯಾರು.

ಬೇಕಿರುವ ಸಾಮಗ್ರಿ

ಗೋಧಿ ಹಿಟ್ಟು ೧ ಕಪ್, ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು - ೨ ಕಪ್, ಕೊತ್ತಂಬರಿ ಸೊಪ್ಪು - ಅರ್ಧ್ಗ ಕಪ್, ಜೀರಿಗೆ ಹುಡಿ - ೧ ಚಮಚ, ಚಿಟಿಕೆ ಇಂಗು, ಹಸಿ ಮೆಣಸಿನಕಾಯಿ ಪೇಸ್ಟ್ - ೨ ಚಮಚ, ಎಣ್ಣೆ - ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು.

ಅಂತರಿಕ್ಷದಲ್ಲಿ ಮಿನುಗುತ್ತಿದೆ ಸುನಿತಾ ಹೆಸರಿನ ಬಡಗಚುಕ್ಕಿ!

"ಸಿತಾರೋಂ ಕೆ ಆಗೆ ಜಹಾಂ ಔರ್ ಭಿ ಹೈ...!"- ಸರ್ ಮೊಹಮ್ಮದ್ ಇಕ್ಬಾಲ್,ವಿದ್ವಾಂಸರು ಮತ್ತು ಕವಿಗಳು.

Image

ಶೌಚದ ಫಲಗಳು

ಈ ಹಿಂದೆ ಶೌಚದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಶೌಚದ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಒಳಗೆ, ಹೊರಗೆ, ಇಂದ್ರಿಯಗಳಲ್ಲಿ ಸ್ವಚ್ಛತೆ ಇಡುವುದು ಶೌಚ್ಯ. ಚೆನ್ನಾಗಿರುವುದನ್ನು ನೋಡುವುದು, ಚೆನ್ನಾಗಿರುವುದನ್ನು ಕೇಳುವುದು, ಚೆನ್ನಾಗಿರುವುದನ್ನು ಮುಟ್ಟುವುದು, ಚೆನ್ನಾಗಿರುವುದನ್ನು ಮೂಸುವುದು , ಚೆನ್ನಾಗಿರುವುದನ್ನು ರುಚಿಸುವುದು ಮತ್ತು ಚೆನ್ನಾಗಿರುವುದನ್ನು ಸ್ಪರ್ಶಿಸುವುದು.

Image