ಬಚ್ಚಿಟ್ಟುಕೊಂಡಿದೆ ಪ್ರೀತಿ, ಸ್ನೇಹ, ವಿಶ್ವಾಸ, ಆತ್ಮಸಾಕ್ಷಿಯ ಮರೆಯಲ್ಲಿ...

ಅವಿತುಕೊಂಡಿದೆ ಕರುಣೆ ಮಾನವೀಯತೆ ಸಮಾನತೆ, ಆತ್ಮವಂಚಕ ಮನಸ್ಸಿನಲ್ಲಿ… ಅಡಗಿ ಕುಳಿತಿದೆ ತ್ಯಾಗ ನಿಸ್ವಾರ್ಥ ಕ್ಷಮಾಗುಣ, ಆತ್ಮಭ್ರಷ್ಟ ಮನದಾಳದಲ್ಲಿ.. ಕಣ್ಮರೆಯಾಗಿದೆ ಸಭ್ಯತೆ  ಒಳ್ಳೆಯತನ  ಸೇವಾ ಮನೋಭಾವ, ಆತ್ಮವಿಮರ್ಶೆಯ ಗೂಡಿನಿಂದ.. ಓಡಿ ಹೋಗಿದೆ ಧ್ಯೆರ್ಯ ಛಲ ಸ್ವಾಭಿಮಾನ, ಮನಸ್ಸಿನಾಳದಿಂದ.....

Image

ಸ್ಟೇಟಸ್ ಕತೆಗಳು (ಭಾಗ ೧೧೪೯)- ಚಲನಚಿತ್ರ

ನಿನ್ನ ಮೇಲೆ ಚಲನಚಿತ್ರಗಳೇ ತಯಾರಾಗ್ತಾ ಇವೆ. ನಿನಗದು ಅರ್ಥವಾಗ್ತಾ ಇಲ್ಲ. ನೀನು ಇದೊಂದು ಜೀವನ ಯಾತ್ರೆ, ನನ್ನ ಜೀವನವನ್ನು ನಾನು ಸಾಗಿಸಿದರೆ ಸಾಕು. ಹೀಗಂದುಕೊಂಡು ಬದುಕಬಹುದು, ಆದರೆ ನಿನ್ನ ಸುತ್ತ ಮುತ್ತ ಇರುವವರೆಲ್ಲ  ಅವರ ಜೀವನದ ಚಲನಚಿತ್ರದಲ್ಲಿ ನಿನಗೆ ವಿವಿಧ ರೀತಿಯ ಪಾತ್ರಗಳನ್ನು ಸೃಷ್ಟಿಸುತ್ತಾರೆ.

Image

ಸೇಂಟ್ ಮೇರಿಸ್ ದ್ವೀಪಕ್ಕೊಂದು ರೋಚಕ ಪಯಣ !

ಮನೋಹರವಾಗಿ ಮಲಗಿಕೊಂಡಿರುವ ಅರಬ್ಬಿ ಸಮುದ್ರ ನಡುವೆ ಶಿಲಾಮಯ ನಡುಗಡ್ಡೆ ಇದು ಉಡುಪಿ ಜಿಲ್ಲೆಯಲ್ಲಿರುವ ಸೇಂಟ್ ಮೇರಿಸ್ ದ್ವೀಪ. ಪ್ರವಾಸಿಗಳ ಭೇಟಿ ಹೆಚ್ಚುತ್ತಿರುವಂತೆ ಈಗ ಈ ದ್ವೀಪ ಹೊಸ ರೂಪ ಪಡೆದುಕೊಳ್ಳುತ್ತಿದೆ.

Image

ಉದ್ದ ಗರಿಗಳ ಬಾಲದಂಡೆ ಹಕ್ಕಿ

ನಿಮ್ಮಲ್ಲಿ ಹಲವರು ಸಿಂಡ್ರೆಲ್ಲಾ ಎಂಬ ಕಾರ್ಟೂನ್‌ ನೋಡಿರಬಹುದು. ಆಕೆ ತನಗಿಂತಲೂ ಉದ್ದವಾದ ಗೌನ್‌ ಧರಿಸಿ ಡ್ಯಾನ್ಸ್‌ ಮಾಡುವುದನ್ನು ನೋಡಿರಬಹುದು. ಹಕ್ಕಿ ಪ್ರಪಂಚದಲ್ಲೂ ಹೀಗೆ ಉದ್ದವಾದ ಗರಿಗಳು ಇರುವ ಹಲವಾರು ಹಕ್ಕಿಗಳಿವೆ. 

Image

ಮತ್ತೆ ಬಂದಿದೆ ಭಾರತೀಯ ಪಂಚಾಂಗ ಕ್ಯಾಲೆಂಡರ್

ವರ್ಷಾಂತ್ಯ ಬರುತ್ತಿದ್ದಂತೆ ಹೊಸ ವರ್ಷದ ಕ್ಯಾಲೆಂಡರ್ ಗಳು ಮಾರುಕಟ್ಟೆಗೆ ಬರಲು ಪ್ರಾರಂಭವಾಗುತ್ತವೆ. ಕಳೆದ ಎರಡು ವರ್ಷಗಳಿಂದ ಪಂಚಾಂಗ ರೀತಿಯ ಕ್ಯಾಲೆಂಡರ್ ತಯಾರಿಸುತ್ತಿರುವ ಉಡುಪಿಯ ಕೇಶವ ಕೃಷ್ಣ ಮೆಹೆಂದಳೆ ಈ ವರ್ಷವೂ ಇನ್ನಷ್ಟು ಆಕರ್ಷಕ ರೀತಿಯಲ್ಲಿ ೨೦೨೫ರ ಕ್ಯಾಲೆಂಡರ್ ತಯಾರು ಮಾಡಿದ್ದಾರೆ. ಕಳೆದ ವರ್ಷ ಹಲವಾರು ಮಂದಿ ಭಾರತೀಯ ಪಂಚಾಂಗ ಕ್ಯಾಲೆಂಡರ್ ಕೊಂಡು ಸಹಕರಿಸಿದ್ದಾರೆ.

Image

ನಿಧಿ - ಕಥೆಗಳ ಕುಡಿಕೆ

ಪುಸ್ತಕದ ಲೇಖಕ/ಕವಿಯ ಹೆಸರು
ಕೌಶಿಕ್ ರತ್ನ
ಪ್ರಕಾಶಕರು
ರತ್ನ ಪುಸ್ತಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೨೦.೦೦, ಮುದ್ರಣ: ೨೦೨೪

ಉದಯೋನ್ಮುಖ ಚಿತ್ರ ನಿರ್ದೇಶಕ, ಕತೆಗಾರ ಕೌಶಿಕ್ ರತ್ನ ಅವರ ನೂತನ ಕಥಾ ಸಂಕಲನ ‘ನಿಧಿ’. ಈ ಕೃತಿಗೆ ಅವರು ಬರೆದ ಲೇಖಕರ ಮಾತುಗಳ ಆಯ್ದ ಭಾಗ ಇಲ್ಲಿದೆ…

ಮಾದಕ ವಸ್ತು ವ್ಯಸನ ಮತ್ತು ದುಷ್ಪರಿಣಾಮ

ಗಾಂಜಾ, ಅಫೀಮು, ಕೊಕೇನ್, ಬ್ರೌನ್ ಶುಗರ್ ಮುಂತಾದವುಗಳನ್ನು ಮಾದಕ ವಸ್ತುಗಳೆಂದು ಪರಿಗಣಿಸಲಾಗುತ್ತದೆ, ಸಿಗರೇಟು ಮಧ್ಯಪಾನ ಮುಂತಾದವುಗಳನ್ನು ದುಶ್ಚಟಗಳು ಎಂದು ಕರೆಯಲಾಗುತ್ತದೆ, ಪೆಪ್ಸಿ, ಕೋಕ್, ಫಾಂಟಾಗಳನ್ನು ಅನಾರೋಗ್ಯಕಾರಿ ಪಾನೀಯಗಳು ಎಂದು ಹೇಳಲಾಗುತ್ತದೆ, ಎಳನೀರು, ಕಬ್ಬಿನ ಹಾಲು, ರಾಗಿ ಗಂಜಿ ಮುಂತಾದವುಗಳನ್ನು ಆರೋಗ್ಯವಂತ ಪಾನೀಯಗಳು ಎಂದು ಪರಿಗಣಿಸಲಾಗುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೪೮)- ನಾಯಿಮಾತು

ನನ್ನ ನೋವು ನಿಮಗೆ ಯಾರಿಗೂ ಕೇಳ್ತಾ ಇಲ್ಲ. ನಾನು ನಿಮ್ಮ ಮನೆಯಲ್ಲಿ ಸಾಕುತ್ತಿರುವ ನಾಯಿ ಇರಬಹುದು, ಆದರೆ ನನಗೂ ಮನಸ್ಸಿದೆ ಭಾವನೆಗಳಿದೆ ಅದನ್ನ ಅರ್ಥ ಮಾಡಿಕೋಬೇಕಲ್ವಾ ನೀವು? ಆದರೆ ನೀವು ನಿಮ್ಮ ಸ್ವಾರ್ಥಕ್ಕೆ ನನ್ನ ಬಳಸಿಕೊಳ್ಳುತ್ತಿದ್ದೀರಾ? ಸುತ್ತ ಗೋಡೆ ಕಟ್ಟಿ ಪಂಜರದ ಹಾಗೆ ಮನೆ ಒಂದನ್ನು ಕಟ್ಟಿ ಅದರೊಳಗೆ ನನ್ನನ್ನ ಇರಿಸಿದ್ದೀರಿ .

Image