ಸ್ಟೇಟಸ್ ಕತೆಗಳು (ಭಾಗ ೯೧೧)- ಒಳಿತು

ನಮ್ಮನೆ ರೇಡಿಯೋದಲ್ಲಿ ಪ್ರತಿದಿನ ಕೇಳಿ ಬರ್ತಾ ಇದ್ದ ಹಾಡು ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು. ಪ್ರತಿದಿನವೂ ಅದನ್ನೇ ಕೇಳ್ತಾ ಇದ್ದವನಿಗೆ ಮನಸ್ಸಿನಲ್ಲಿ ಒಂದು ಧೈರ್ಯ. ಮನಸ್ಸಿನ ಎಲ್ಲಾ ಆಸೆಗಳನ್ನು ಭಗವಂತ ಈಡೇರಿಸುತ್ತಾನೆ, ಸ್ವಚ್ಛ ಮನಸ್ಸಿನಲ್ಲಿ ಕೇಳುವ ಭಕ್ತಿಯೊಂದಿದ್ದರೆ ಸಾಕು.

Image

ನಿಷ್ಪಾಪಿ ಸಸ್ಯಗಳು (ಭಾಗ ೪೧) - ಜಯಂತಿ ಗಿಡ

ಕಳೆದ ವಾರ ಪರಿಚಯಿಸಿದ ಹಾಡೇ ಬಳ್ಳಿಯನ್ನು ಎಲ್ಲಾದರೂ ಕಂಡಿರಾ? ನಮ್ಮ ಶಾಲೆಯ ಮೂರನೇ ತರಗತಿಯ ಸಹೀಮ್ ಮನೆ ಸಮೀಪವೇ ಇದ್ದ ಹಾಡೇಬಳ್ಳಿಯ ಕಾಯಿಯ ಗೊಂಚಲನ್ನೇ ನನಗೆ ತಂದಿದ್ದ. ಎಲೆಗಳನ್ನು ಹಿಚುಕಿ ರಸವನ್ನು ತಲೆಗೆ ಹಾಕಿಕೊಂಡು ಖುಷಿಪಟ್ಟನೆಂದು ಅವನಮ್ಮ ಫೋನ್ ಮಾಡಿ ಸಂತಸ ವ್ಯಕ್ತಪಡಿಸಿದರು. 

Image

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೫) - ಪಂಜೆ ಮಂಗೇಶರಾವ್

ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ೧೮೭೪ ಫೆಬ್ರುವರಿ ೨೨ ರಂದು ಜನಿಸಿದರು. ತಾಯಿ ಸೀತಮ್ಮ. ತಂದೆ ರಾಮಪಯ್ಯ. ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮಂಗಳೂರಿನಲ್ಲಿ ಇಂಟರ್‌ ಮೀಡಿಯೇಟ್‌ ಶಿಕ್ಷಣ ಪಡೆದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಹರಟೇಮಲ್ಲ, ರಾಮಪಂ, ಕವಿಶಿಷ್ಯ ಮುಂತಾದ ಹೆಸರುಗಳಲ್ಲಿ ಬರಹಗಳನ್ನು ರಚಿಸಿದ್ದರು.

Image

ಜರ್ನಿ ಆಫ್ ಜ್ಯೋತಿ

ಪುಸ್ತಕದ ಲೇಖಕ/ಕವಿಯ ಹೆಸರು
ಜ್ಯೋತಿ ಶಾಂತರಾಜು
ಪ್ರಕಾಶಕರು
ಅಮೃತ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

‘ಜರ್ನಿ ಆಫ್ ಜ್ಯೋತಿ’ ಜ್ಯೋತಿ ಎಸ್ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯ ಕುರಿತು ಎಚ್.ಎಸ್.

ನನ್ನ ದೇವರಲ್ಲಿ ಒಂದು ಆತ್ಮೀಯ ಪ್ರೀತಿ ಪೂರ್ವಕ ಕಳಕಳಿಯ ಮನವಿ...

ನನ್ನ ದೇವರೆಂದರೆ ಅದರಲ್ಲಿ ಅಲ್ಲಾ, ರಾಮ, ಕೃಷ್ಣ, ಹರಿ, ಶಿವ, ಜೀಸಸ್, ಮಾರಮ್ಮ, ಕಾಟೇರಮ್ಮ ಎಲ್ಲರೂ ಸೇರಿಕೊಂಡಿರುತ್ತಾರೆ. ಹಾಗೆಯೇ ನನ್ನ ಧರ್ಮದ ಬೃಹತ್ ಗ್ರಂಥಗಳಾದ ಭಗವದ್ಗೀತೆ, ವೇದ ಉಪನಿಷತ್ತುಗಳು, ಕುರಾನ್, ಬೈಬಲ್ ಮುಂತಾದ ಎಲ್ಲಾ ಪವಿತ್ರ ಗ್ರಂಥಗಳ ಅನುಯಾಯಿಗಳಿಗೂ ಇದರ ಒಂದು ಪ್ರತಿಯನ್ನು ಲಗತ್ತಿಸಿದ್ದೇನೆ. ಭಾರತದಲ್ಲಿ 2024 ರ ಲೋಕಸಭಾ ಚುನಾವಣೆ ನಡೆಯುತ್ತಿದೆ.

Image

ಸ್ಟೇಟಸ್ ಕತೆಗಳು (ಭಾಗ ೯೧೦)- ಅನಿಸಿಕೆ

ಆ ಮಗುವಿಗೆ ಏನೊಂದೂ ತಿಳಿತಾ ಇಲ್ಲ. ಪ್ರತಿದಿನ ಅಮ್ಮ ನನ್ನನ್ನ ಇಲ್ಲಿಗೆ ಕರೆದುಕೊಂಡು ಬರುತ್ತಾರೆ, ಒಂದು ಸಣ್ಣ ಬುಟ್ಟಿಯೊಳಗೆ ನನ್ನ ಕೂರಿಸಿ ಅವರೇನೋ ಕೆಲಸ ಮಾಡ್ತಾ ಇರುತ್ತಾರೆ. ಬಂದವರೆಲ್ಲ ಅಮ್ಮನ ಮುಂದೆ ಇಟ್ಟಿರುವ ಬೇರೆ ಬೇರೆ ತರಹದ ವಸ್ತುಗಳನ್ನ ತೆಗೆದುಕೊಂಡು ಹೋಗುತ್ತಾರೆ. ಅದರಿಂದ ಯಾವುದನ್ನಾದರೂ ಕೊಯ್ಯಬಹುದು, ಕತ್ತರಿಸಬಹುದು.

Image

ವಿಶಾಲ ಮನಸ್ಸು

ವಿಶಾಲವಾದ ಭೂಮಿಯಿರುವವನು ಶ್ರೀಮಂತ. ಹಿಂದೆ ಸಾಮ್ರಾಟರಾದವರನ್ನು ಸಾಮ್ರಾಜ್ಯದ ವಿಸ್ತಾರದ ಆಧಾರದ ಮೇಲೆ ಚಕ್ರವರ್ತಿಯೆಂದು ಅಭಿಷೇಕಿಸುತ್ತಿದ್ದರು. ಸಿರಿವಂತಿಕೆ, ಅರಸೊತ್ತಿಗೆ ಮುಂತಾದುವು ಹಣಬಲ, ಭುಜಬಲ, ಸ್ಥಾನ ಬಲ ಮತ್ತು ಅಧಿಕಾರಬಲಗಳ ಮೇಲೆ ಅಂಕಿತಗೊಳಿಸಲ್ಪಡುತ್ತಿತ್ತು. ರಾವಣನು ಲಂಕೆಯ ಅಧಿಪತಿ, ವೀರಪ್ಪನ್ ಕಾಡಿನ ವೀರ, ಅಂಗುಲಿಮಾಲ ಗಂಡೆದೆಯನ್ನೂ ನಡುಗಿಸುತ್ತಿದ್ದ ದರೋಡೆಕೋರ.

Image