ಅಪ್ಪ - ಮಗ

ಅಪ್ಪ - ಮಗ

ಕವನ

ಎರಡು ಪೀಳಿಗೆಗಳು

ಸಮಾನಾಂತರ ರೇಖೆಗಳು

ಕೂಡುವುದೇ ಇಲ್ಲ ಎಂದೂ

ಒಮ್ಮತವಿಲ್ಲ ವಿಚಾರಗಳಲಿ

 

ಸದಾ ವಾಗ್ವಿಳಾಸದ ಝರಿ

ಹರಿಹರಿದು ತಾರಾಮಾರಾ

ಕಾವೇರುತ್ತದೆ ಒಮ್ಮೊಮ್ಮೆ

ಎಷ್ಟೇ ಗುದ್ದಾಡಿದರೂ

 

ಕರುಳ ಸೆಳೆತ ದೊಡ್ಡದು

ಅದರ ಎಳೆ ಎಳೆಗಳು

ಕಬ್ಬಿಣಕ್ಕಿಂತ ಬಲು ಗಟ್ಟಿ

ಕುಟ್ಟಿ ಪುಡಿಮಾಡಲಳವಲ್ಲ

 

ಮರುದಿನ ಹಿಂದಿನ ದಿನದ ವಕ್ರ

ಮುಖಗಳು ಮಮತೆಯ ಮಾಂತ್ರಿಕ

ಸ್ಪರ್ಶದಿಂದ ಹಸನ್ಮುಖಗಳಾಗಿ

ಪ್ರೀತಿಯ ಬಂದನದಲ್ಲಿ ಒಂದಾಗುವವು

-ಗಿರಿಜಾ ರಾಜ್ ಎಲ್.

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್