ಒಂದು ಗಝಲ್
ಕವನ
ಸವಿಯ ನೆನಪು ಹೀಗೆ, ಬಾಗಿ ಬಂತು
ಹಳೆಯ ಸಂಗ ಹಾಗೆ, ತೂಗಿ ಬಂತು
ಯಾರು? ಏನು ಮಾಡ ಬೇಕು ವಿಧಿಯ
ಹೊರೆಯ ದೂರ ಇಡುತ, ಬೀಗಿ ಬಂತು
ಪುರದ ಒಳಗೆ ನಡೆವ, ಸಂತೆ ಇದೆಯೆ
ಹೆಣ್ಣು ಮಗುವು ಇಲ್ಲೆ, ಸಾಗಿ ಬಂತು
ಬೀದಿ ಬಸವ ನೋಡು, ಅಲ್ಲೆ ಇರುವ
ಹಸಿವು ,ಉಸಿರ ಗಾಳಿ ತೇಗಿ ಬಂತು
ನಡೆಯ ಸದ್ದು ಕೇಳಿ, ಮೌನಿ ಈಶ
ಕಂಡು,ಮಸಣ ದಾರಿ ಹೋಗಿ ಬಂತು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
