ಸಾವಿರ ಹಾಡಿನ ಒಬ್ಬ ಸರ್ದಾರ !
ಕೋವಿಡ್ ಸಮಯದಲ್ಲಿ ಆಸಕ್ತಿ ಇದ್ದವರು ಹಾಡು ಹಾಡಲು ತುಂಬಾ ಆಪ್ ಗಳು ಸಂಸ್ಥೆಗಳು ತಂತ್ರಜ್ಞಾನಗಳು ಬೆಳಕಿಗೆ ಬಂದವು.
ಅದರಲ್ಲಿ ಸ್ಟಾರ್ ಮೇಕರ್ ಎಂಬ ಆ್ಯಪ್ ಕೂಡ ಒಂದು. ಅಲ್ಲಿ ಚೆನ್ನಾಗಿ ಹಾಡುವ ಅನೇಕ ಗಾಯಕಿಯರನ್ನು ಪತ್ತೆ ಮಾಡಿಕೊಂಡು ಅವರ ಜೊತೆ ಸುಮಾರು ಆರುನೂರು ಯುಗಳ ಗೀತೆಗಳನ್ನು ನಾನು ಹಾಡಿದ್ದೇನೆ. ಮತ್ತು ಸುಮಾರು 400 ಹಾಡುಗಳನ್ನು ಬೇರೆ ಭಾಷೆಯಿಂದ -ಬಹುತೇಕ ಹಿಂದಿ- ಅನುವಾದ ಮಾಡಿ ಹಾಡಿದ್ದೇನೆ. ಇವುಗಳಲ್ಲಿ ಸುಮಾರು 40 ಪೂರ್ತಿಯಾಗಿ ಅನುವಾದ ಆಗಿವೆ. ಇನ್ನು ಸುಮಾರು 40 ಅರ್ಧ ಅನುವಾದ , ಉಳಿದವು ಕೆಲವೇ ಸಾಲು ಅನುವಾದ ಆಗಿವೆ.
ಈ ಸಾವಿರ ಹಾಡುಗಳನ್ನು ನಾನು ನನ್ನ ಮೊಬೈಲ್ಗೆ ಡೌನ್ಲೋಡ್ ಮಾಡಿಕೊಂಡಿದ್ದೇನೆ . ನಾನು ತಕ್ಕಮಟ್ಟಿಗೆ ಚೆನ್ನಾಗಿ ಹಾಡುತ್ತೀನಿ ಅಂತ ಈ ಸಮಯದಲ್ಲಿ ಹೇಳಬೇಕು.
ಹಾಗಾಗಿ ನಾನು ಸಾವಿರ ಹಾಡಿನ ಒಬ್ಬ ಸರ್ದಾರ ಆಗಿದ್ದೇನೆ!
Rating