‘ಸಂಪದ’ ನಗೆಬುಗ್ಗೆ - ಭಾಗ ೧೩೫

‘ಸಂಪದ’ ನಗೆಬುಗ್ಗೆ - ಭಾಗ ೧೩೫

ಸೀನ್ ಸೀನು

ಭಾನುವಾರ ರಜೆ ದಿನವಾದ್ದರಿಂದ ಬೇಸರ ಕಳೆಯಲು ಸಿನಿಮಾ ನೋಡುತ್ತಾ ಕುಳಿತಳು ಶ್ರೀಮತಿ. ಆ ಸಿನಿಮಾ ಆಕೆಗೆ ಅಷ್ಟಾಗಿ ರುಚಿಸಲಿಲ್ಲ. ಅದೇ ಸಮಯಕ್ಕೆ ಪಕ್ಕದ ಮನೆಯ ಸೂರಿ ಆಕೆಯೊಡನೆ ಸಿನಿಮಾ ನೋಡುತ್ತಾ ಕುಳಿತ. ಒಳ್ಳೆ ಸೀನ್ (scene) ಇದ್ದರೆ ಸಿನಿಮಾ ಚೆನ್ನಾಗಿ ಓಡುತ್ತದೆ. (Success Full running) ಎಂದಳು ಶ್ರೀಮತಿ. ಆಕೆಯ ಮಾತನ್ನು ಕೇಳಿಸಿಕೊಂಡ ಸೂರಿ, ಅಕ್ಕ ನೀನು ಸೀನುವುದಕ್ಕೂ (ಅಕ್ಷಿ) ಸಿನೆಮಾ (Success full running) ಸಂಬಂಧವೇನು? ಎಂದಾಗ ಶ್ರೀಮತಿಗೆ ನಿಜಕ್ಕೂ ಸೀನು (ಅಕ್ಷಿ) ಬಂದಿತ್ತು!

***

ಬಿಸಿಬಿಸಿಯಾಗಿದೆ ತೊಗೊಳ್ಳಿ!

ಶ್ರೀಮತಿಯ ಸೊಸೆ ಆಕಾಂಕ್ಷ ಎಲ್ಲಾ ಕೆಲಸಗಳನ್ನು ಸರಾಗವಾಗಿ ನಿಭಾಯಿಸಬಲ್ಲ ಚತುರೆ. ಶ್ರೀಮತಿಯ ಅತ್ತೆ ತೀರಿಹೋದ ಸಂದರ್ಭ ಹನ್ನೆರಡನೆಯ ದಿನದ ಶುದ್ದೀಕರಣಕ್ಕೆಂದು ಪಂಚಗವ್ಯಕ್ಕಾಗಿ ಹಸುವಿನ ಸೆಗಣಿ ಬೇಕಾಗಿತ್ತು. ಅದೂ ಈ ಬೆಂಗಳೂರಿನಲ್ಲಿ ಸಿಗುವುದು ದುರ್ಲಭ. ಅಂತಹದರಲ್ಲಿ ಆಕಾಂಕ್ಷ ಹುಡುಕಾಡಿ ತೆಗೆದುಕೊಂಡು ಬಂದವಳೇ 'ಅಮ್ಮಾ, ಬಿಸಿಬಿಸಿಯಾಗಿ ಫ್ರೆಶ್ ಆಗಿದೆ ತೊಗೊಳ್ಳಿ' ಎನ್ನುತ್ತಾ ಒಂದು ಡಬ್ಬಿಯ ತುಂಬಾ ಸೆಗಣಿಯನ್ನು ಶ್ರೀಮತಿಯ ಕೈಯಲ್ಲಿಟ್ಟಳು!.

ತಿಂಡಿ ಮಾಡಿದಾಗ ಯಾವಾಗೂ 'ಬಿಸಿಬಿಸಿಯಾಗಿದೆ ತಿಂದುಬಿಡಿ ಅಮ್ಮ' ಅನ್ನುವುದು ಅವಳ ರೂಢಿ. ಅವಳು ಹೇಳಿದ ಪರಿಗೆ ನೆರೆದಿದ್ದ ನೆಂಟರೆಲ್ಲಾ ಜೋರಾಗಿ ಬಿದ್ದುಬಿದ್ದು ನಕ್ಕರು. ನನಗೂ ನಗೆ ತಡೆಯಲಾಗಲಿಲ್ಲ. ಪರಿಸ್ಥಿತಿ ಅರಿವಾಗಿ ಮೊದಲೇ ಕೆಂಪಗಿದ್ದ ಆಕಾಂಕ್ಷ ಇನ್ನೂ ನಾಚಿ ಕೆಂಪಾದಳು!

***

ನಿದ್ರೆ ಮಾತ್ರೆ

ಸೂರಿ: ಅಣ್ಣ, ಒಂದು ಬಾಟಲ್ ನಿದ್ದೆ ಮಾತ್ರೆ ಕೊಡಿ.

ಮೆಡಿಕಲ್ ಶಾಪ್ ನವ: ಡಾಕ್ಟರ್ ಚೀಟಿ ಇದ್ರೆ ಮಾತ್ರ ಕೊಡಬಹುದು.

ಸೂರಿ: ಡಾಕ್ಟರ್ ಚೀಟಿ ಇಲ್ಲ. ಆದ್ರೆ ನನ್ನ ಮದುವೆ ಕಾರ್ಡ್ ಇದೆ. ತೋರಿಸ್ಲಾ?

ಮೆಡಿಕಲ್ ಶಾಪ್ ನವ: ದೊಡ್ಡ ಬಾಟಲ್ ಕೊಡ್ಲಾ ಅಥವಾ ಚಿಕ್ಕದು ಕೊಡ್ಲಾ?!

***

ಪುಸ್ತಕ

ಶ್ರೀಮತಿ: ನಾನಿಲ್ಲಿ ಪುಸ್ತಕ ಇಟ್ಟಿದ್ದೆ, ಸಿಗ್ತಾ ಇಲ್ಲ.

ಸೂರಿ: ಯಾವ ಪುಸ್ತಕ?

ಶ್ರೀಮತಿ: ನೂರು ವರ್ಷಗಳ ಕಾಲ ಬದುಕುವುದು ಹೇಗೆ? ಎನ್ನುವ ಪುಸ್ತಕವದು.

ಸೂರಿ: ಅದಾ… ನಾನೇ ಸುಟ್ಟು ಹಾಕಿದೆ.

ಶ್ರೀಮತಿ: ಏಕೆ?

ಸೂರಿ: ನಿನ್ನ ಅಮ್ಮ ಓದಿದ್ರೆ ಕಷ್ಟ ಅಂತ !

***

ತಮ್ಮ ಮಾತಾಡುತ್ತಿಲ್ಲ !

ಶ್ರೀಮತಿ: ನಾನು ಆಸ್ಪತ್ರೆಯಲ್ಲಿ ಇದ್ದೇನೆ. ಆಮೇಲೆ ಕಾಲ್ ಮಾಡುತ್ತೇನೆ. ಸರಿನಾ?

ಸೂರಿ: ಯಾಕೆ ಏನಾಯಿತು?

ಶ್ರೀಮತಿ: ನನ್ನ ತಮ್ಮ ಮಾತನಾಡುತ್ತಿಲ್ಲ. ನಡೆಯುತ್ತಿಲ್ಲ ಅದಕ್ಕೆ.

ಸೂರಿ: ಅಯ್ಯೋ ಏನಾಯಿತು? ಯಾಕೆ ಹಾಗೆ ಆಗಿದೆ. ಏನಾಯಿತು ನಿನ್ನ ತಮ್ಮನಿಗೆ?

ಶ್ರೀಮತಿ: ಇವಾಗ ತಾನೆ ಹುಟ್ಟಿದ್ದಾನೆ. ಹುಟ್ಟಿ ಇನ್ನೂ ಮೂರು ಗಂಟೆ ಆಗಿಲ್ಲ.!

***

ಸುಧಾರಣೆ

ಟೀಚರ್: ಸೂರಿ, ತುಂಬಾ ಖುಷಿಯಾಗ್ತಿದೆ ನನಗೆ. ನಿನ್ನ ಬರವಣಿಗೆಯ ರೀತಿಯಲ್ಲಿ ತುಂಬಾ ಸುಧಾರಣೆಯಾಗಿದೆ.

ಸೂರಿ: ಧನ್ಯವಾದಗಳು ಟೀಚರ್

ಟೀಚರ್: ಈಗ ಏನಿಲ್ಲ ಅಂದರೂ ನೀನು ಮಾಡುತ್ತಿರುವ ಅಕ್ಷರ ತಪ್ಪುಗಳು ಎಷ್ಟು ಅಂತಾದ್ರೂ ಗೊತ್ತಾಗ್ತಿದೆ!

***

ಮೋಸ

ಶ್ರೀಮತಿ: ಏನಾಗಿದೇರೀ ನಿಮಗೆ? ರಾತ್ರಿ ಮೂಗಿನ ತನಕ ಕುಡಿದು ಚರಂಡಿಗೆ ಬಿದ್ದುಬಿಟ್ಟಿದ್ರಿ !

ಸೂರಿ: ನನ್ನ ಗೆಳೆಯರೆಲ್ಲ ಮೋಸಗಾರರು ಕಣೇ. ನಾವಿದ್ದವರು ನಾಲ್ವರು. ನಮ್ಮೆದುರು ಒಂದು ಬಾಟ್ಲಿ, ಆ ಮೂವರು ಖದೀಮರಿಗೂ ಕುಡಿತ ಅಂದ್ರೆ ಗೊತ್ತಿಲ್ಲ. ಏನು ಮಾಡ್ಲಿ ಹೇಳು.

***

ಚಿತ್ರ ಕೃಪೆ: ಅಂತರ್ಜಾಲ ತಾಣ