ನಾವೆಲ್ಲರೂ ಒಂದೆ…
ಕವನ
ಭಾಷೆ ಬೇರೆಯಾದರೇನು
ವೇಷ ಬೇರೆಯಾದರೇನು
ರಾಜ್ಯ ಹಲವು ಆದರೇನು
ಪಂಥ ಹಲವು ಆದರೇನು
ನಾವು ಒಂದೆ ಎನ್ನಿ ನಮ್ಮದೆನುವ ಎನ್ನಿ
ದೇಶವೊಂದೆ ಎನ್ನಿ ತತ್ವ ಒಂದೆ ಎನ್ನಿ
ಪಕ್ಷಿ ಹಲವು ಆದರೇನು
ಜೀವ ಹಲವು ಆದರೇನು
ನದಿಯು ಹಲವು ಆದರೇನು
ಖಂಡ ಹಲವು ಆದರೇನು
ರಚನೆ ಒಂದೆ ಎನ್ನಿ ಆತ್ಮ ಒಂದೆ ಎನ್ನಿ
ನೀರು ಒಂದೆ ಎನ್ನಿ ಭೂಮಿ ಒಂದೆ ಎನ್ನಿ
ಹೂವು ಹಲವು ಆದರೇನು
ನವಿಲು ಹಲವು ಆದರೇನು
ಸಂಘ ಹಲವು ಆದರೇನು
ಜಾತಿ ಹಲವು ಆದರೇನು
ಮಧುವು ಒಂದೆ ಎನ್ನಿ ನಾಟ್ಯ ಒಂದೆ ಎನ್ನಿ
ಶಿಸ್ತು ಒಂದೆ ಎನ್ನಿ ನೀತಿ ಒಂದೆ ಎನ್ನಿ
ದ್ವೇಷ ಹಲವು ಆದರೇನು
ಮೌನ ಹಲವು ಆದರೇನು
ಮೋಸ ಹಲವು ಆದರೇನು
ರೋಷ ಹಲವು ಆದರೇನು
ಸತ್ಯ ಒಂದೆ ಎನ್ನಿ ಶಾಂತಿ ಒಂದೆ ಎನ್ನಿ
ತ್ಯಾಗ ಒಂದೆ ಎನ್ನಿ ಪ್ರೇಮ ಒಂದೆ ಎನ್ನಿ
(೧೯೮೪ ರಲ್ಲಿ ಬರೆದ ದೇಶ ಭಕ್ತಿ ಗೀತೆ)
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
