ಸ್ಟೇಟಸ್ ಕತೆಗಳು (ಭಾಗ ೧೪೧೪) - ಜಿರಳೆ

ಸ್ಟೇಟಸ್ ಕತೆಗಳು (ಭಾಗ ೧೪೧೪) - ಜಿರಳೆ

ಈ ಪ್ರಶ್ನೆಯನ್ನು ಇವತ್ತು ನಮ್ಮ ಮನೆಯಲ್ಲಿ ಓಡಾಡುತ್ತಿದ್ದ ಒಂದೇ ಒಂದು ಜಿರಳೆ ನನ್ನ ಮುಂದೆ ಬಂದು ಕೇಳಿಬಿಡ್ತು. ನನಗೆ ಅದಕ್ಕೆ ಉತ್ತರ ಕೊಡುವಷ್ಟು ವ್ಯವಧಾನವೂ ಇರಲಿಲ್ಲ ಹಾಗಾಗಿ ಅದರ ಪ್ರಶ್ನೆಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ, ಅಲ್ಲ ಸರ್, ನಾವು ನಿಮಗೇನು ತೊಂದರೆ ಮಾಡಿದ್ದೇವೆ, ಮನೆಯ ಯಾವುದೋ ಒಂದು ಮೂಲೆಯಲ್ಲಿ ಬದುಕಿ ಬಿಡುತ್ತೇವೆ. ನಮ್ಮನ್ನು ಸಾಯಿಸುವುದಕ್ಕಿಂತಲೇ ಏನೇನು ಉಪಕರಣಗಳನ್ನು ಬಳಸ್ತೀರಿ ಅದನ್ನ ಜಾಹೀರಾತು ಬೇರೆ ಕೊಡುತ್ತೀರಿ ನಮ್ಮನ್ನು ಸಾಯಿಸುವುದೇ ಅದ್ಭುತವಾದ ಸಾಧನೆ ಅಂದುಕೊಂಡಿದ್ದೀರಿ. ಮತ್ತೆ ನೀವು ಪ್ರಾಣಿದಯೆ ಇದ್ದವರು ಯಾರಿಗೂ ನೋವನ್ನ ಮಾಡದವರು ಅಂತ ಭಾಷಣವು ಮಾಡುತ್ತೀರಿ. ನಮ್ಮನ್ನು ಸಾಯಿಸೋದು ನಿಮ್ಮ ಪ್ರಕಾರ ಸರಿ. ನಿಮ್ಮ ಮನೆಯ ಮುಂದೆ ಓಡಾಡುವ ಚಿಟ್ಟೆಯನ್ನು ನೋಯಿಸಿದರೂ, ನಾಯಿಗೆ ತೊಂದರೆ ಮಾಡಿದರು ಅದು ತಪ್ಪು. ಅದಕ್ಕೆಂದಲೇ ತಪ್ಪನ್ನ ತಿದ್ದಿ ಹೇಳುವುದಕ್ಕೆ ಒಂದಷ್ಟು ಜನ ಇರ್ತಾರೆ.ನಮ್ಮ ಸಾವಿನ ಬಗ್ಗೆ ನಿಮಗೆ ಯಾರಿಗೂ ಯೋಚನೆ ಇಲ್ಲ. ನಾವು ಈ ಭೂಮಿಯಲ್ಲಿ ಬದುಕಿದ್ದೇವೆ ಅಂದಮೇಲೆ ಬದುಕುವ ಅವಕಾಶ ನಮಗೂ ಇದೆ .ಹೀಗೆ ನಮ್ಮನ್ನ ಸಾಯಿಸ್ತಾ ಹೋದ್ರೆ ಮುಂದೊಂದು ದಿನ ನಿಮಗೂ ಅದರ ತೊಂದರೆ ಅರಿವಾಗಬಹುದು. ನನ್ನ ಪ್ರಶ್ನೆಗೆ ಉತ್ತರ ಕೊಡಿ ನಾವೇನು ತಪ್ಪು ಮಾಡಿದ್ದೇವೆ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ