ಅವಲಕ್ಕಿ ಬರ್ಫಿ

Image

ಅವಲಕ್ಕಿಯನ್ನು ಸಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಹಾಲು, ಬೆಲ್ಲದ ಪುಡಿ ಹಾಕಿ ನಂತರ ಅವಲಕ್ಕಿ ಪುಡಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ.

ಬೇಕಿರುವ ಸಾಮಗ್ರಿ

ಅವಲಕ್ಕಿ-1 ಬಟ್ಟಲು, ಬೆಲ್ಲ-1 ಬಟ್ಟಲು, ಹಾಲು ಅಥವಾ ಕಾಯಿಹಾಲು-2 ಬಟ್ಟಲು, ತುಪ್ಪ-4 ಚಮಚ, ಏಲಕ್ಕಿ ಪುಡಿ-ಚಿಟಿಕೆ, ಬಾದಾಮಿ, ಗೋಡಂಬಿ ತುಂಡುಗಳು ಮತ್ತು ದ್ರಾಕ್ಷಿ

ಸ್ಟೇಟಸ್ ಕತೆಗಳು (ಭಾಗ ೧೪೧೦) - ದೇವಾ

ಅಮ್ಮ, ದೇವರೇ ಯಾಕೆ ಈ ಪೇಟೆ ನಡುವೆ ಬಂದುಬಿಟ್ಟಿದ್ದಾನೆ? ಅವರಿಗೆ ಈ ಗದ್ದಲದ ನಡುವೆ ಇರುವುದಕ್ಕಿಂತ ಶಾಂತವಾದ ಕಾಡಿನ ನಡುವೆ ನೆಮ್ಮದಿಯಾಗಿರಬಹುದು, ಊರಿನ ಮಧ್ಯದಲ್ಲಿದ್ದ ಪುಟ್ಟ ದೇವರ ಗುಡಿಯನ್ನು ನೋಡಿ ಮಗು ಅಮ್ಮನಲ್ಲಿ ಕೇಳಿತು. ದೇವಸ್ಥಾನದ ಸುತ್ತ ಒಂದಷ್ಟು ಮರ ಗಿಡಗಳನ್ನು ಬಿಟ್ಟರೆ ಉಳಿದ ಕಡೆ ಎಲ್ಲವೂ ಕಾಂಕ್ರೀಟ್ರೀಕರಣವಾಗಿದೆ.

Image

ಸೋರೆಕಾಯಿಯನ್ನು ಯಾರು ತಿಂದರೆ ಹಿತವಲ್ಲ?

ಆರೋಗ್ಯವೇ ಭಾಗ್ಯ ಎಂಬ ನಾನ್ನುಡಿಯನ್ನು ನೀವು ಕೇಳಿದ್ದೀರಿ ಅಲ್ಲವೇ? ಆರೋಗ್ಯ ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ಪ್ರತಿನಿತ್ಯ ನಾವು ಸೇವಿಸುವ ಆಹಾರದ ಬಗ್ಗೆ ನಮಗೆ ಅರಿವಿರಬೇಕು. ಕೆಲವು ಆರೋಗ್ಯ ಸಮಸ್ಯೆ ಇರುವವರು ಎಲ್ಲಾ ಬಗೆಯ ಆಹಾರಗಳ ಸೇವನೆ ಮಾಡುವುದು ಒಳ್ಳೆಯದಲ್ಲ. ಅದರಲ್ಲಿಯೂ ಸೋರೆಕಾಯಿ.

Image

ಓಯಸಿಸ್

ಪುಸ್ತಕದ ಲೇಖಕ/ಕವಿಯ ಹೆಸರು
ಗಿರೀಶ ಶ್ರೀಪಾದ ಮೇವುಂಡಿ
ಪ್ರಕಾಶಕರು
ಸಾವಣ್ಣ ಪ್ರಕಾಶನ, ಜಯನಗರ, ಬೆಂಗಳೂರುವಣ್ಣ
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ ೨೦೨೫

ಲೇಖಕರಾದ ಗಿರೀಶ ಶ್ರೀಪಾದ ಮೇವುಂಡಿ ಇವರು ‘ಓಯಸಿಸ್’ ಎನ್ನುವ ಬದುಕು-ಭಾವನೆ-ಯಶಸ್ಸು ಬಿಂಬಿಸುವ ೨೩ ಸ್ಫೂರ್ತಿಯ ಚಿಲುಮೆಗಳನ್ನು ಒಳಗೊಂಡ ಕೃತಿಯನ್ನು ಪ್ರಕಟಿಸಿದ್ದಾರೆ.

ಧ್ಯಾನಸ್ಥ ಬದುಕು

ಬಾಹ್ಯ ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನ. ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ  ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ...

Image

ಸಂಗ್ರಹ

ಇಂದು ಸಂಗ್ರಹದ ಬಗ್ಗೆ ತಿಳಿದುಕೊಳ್ಳೋಣ. ಒಂದೂರಿನಲ್ಲಿ ಒಬ್ಬ ಭಿಕ್ಷುಕನಂತೆ ಬದುಕಿದ್ದನು. ಆತ ನಿಜವಾದ ಬಿಕ್ಷುಕನಲ್ಲ. ಸಾಮಾನ್ಯರಂತೆ ಬದುಕುವ ಎಲ್ಲವೂ ಇತ್ತು. ಆತನ ಜಮೀನಿನಲ್ಲಿ ಎಷ್ಟೇ ಬೆಳೆಯಲಿ ಸಾಕಾಯ್ತು ಅಂತ ಒಮ್ಮೆಯೂ ಹೇಳಲಿಲ್ಲ. ಮನೆಯಲ್ಲಿ ಅಡುಗೆ ಮಾಡುವುದು ಕೂಡ ಕಡಿಮೆ. ಬೇರೆಯವರ ಮನೆಗೆ ಹೋಗುತ್ತಿದ್ದನು. ಕಾಫಿ ಕೊಡಿ , ಚಹಾ ಕೊಡಿ ಅನ್ನುತ್ತಿದ್ದನು.

Image

ವಿಷ ಕುಡಿದು ಸಾವಿನಮನೆ ಮುಟ್ಟಿದ್ದ ರೈತ ಬದುಕಿದ ಪ್ರಕರಣ

ಕಷ್ಟ ಬಂದಾಗಲೆಲ್ಲ ಸಾಂತ್ವನಕ್ಕಾಗಿ ಅವನು ಹನುಮಂತನ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸುತ್ತಿದ್ದ. ಇವತ್ತೂ ಅಲ್ಲಿಗೆ ಬಂದು, ಅವನು ದೇವಸ್ಥಾನದ ಗಂಟೆ ಬಾರಿಸಿದ. ಹಣೆಗೆ ಕುಂಕುಮ ಹಚ್ಚಿಕೊಂಡ. ಕೈಗಳನ್ನು ಮುಗಿದು, ಹನುಮಂತನಿಗೆ ತನ್ನ ಕೊನೆಯ ಪ್ರಾರ್ಥನೆ ಸಲ್ಲಿಸಲು ತಲೆ ಬಾಗಿಸುತ್ತಲೇ ಅವನು ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದ.

ಬದುಕಿನ ಬೆಳಕೇ ಆರಿ ಹೋದಂತೆ ಅವನನ್ನು ಕತ್ತಲೆ ಆವರಿಸಿತು. ಕೆಲವು ಕ್ಷಣ ಅವನ ಕಣ್ಣು ರೆಪ್ಪೆಗಳು ಅಲುಗಾಡಿದವು. ಭ್ರಮಾಲೋಕದಲ್ಲಿ ವಿಹರಿಸಿದಂತೆ ಅವನ ತಲೆ ಹಗುರಾಯಿತು. ಪರ್ವತದಂತಹ ಅವನ ಚಿಂತೆಗಳೆಲ್ಲ ಕರಗಿ ಹೋದವು. ಎಚ್ಚರವಾಗಿರಬೇಕೆಂಬ ಹಂಬಲದ ಜೊತೆ ಗುದ್ದಾಡುತ್ತಿದ್ದ ಅವನ ಮೆದುಳು ತಣ್ಣಗಾಯಿತು.

Image

ಅಷ್ಟು ಸುಲಭವಲ್ಲ ಪ್ರೀತಿಗೆ ಪ್ರತಿ ವಂದನೆ ಹೇಳುವುದು...

ಜನುಮದಿನದ ಶುಭ ಹಾರೈಕೆಗೆ ಪ್ರತಿ ವಂದನೆ. ( ಆಗಸ್ಟ್ 7 ) ಅಷ್ಟು ಸುಲಭವಲ್ಲ ಪ್ರೀತಿಗೆ ಪ್ರತಿ ವಂದನೆ ಹೇಳುವುದು. ಯಾರಾದರೂ ನಮ್ಮನ್ನು ಟೀಕಿಸಿದರೆ, ನಿಂದಿಸಿದರೆ, ಹೊಡೆದರೆ ನಾವು ಅದಕ್ಕೆ ಒಂದಷ್ಟು ನಮ್ಮ ಮಿತಿಯಲ್ಲಿ ಅದೇ ರೀತಿ ಪ್ರತಿಕ್ರಿಯಿಸಬಹುದು ಅಥವಾ ನಿರ್ಲಕ್ಷಿಸಬಹುದು. ಆದರೆ ಪ್ರೀತಿ ಅಭಿಮಾನದ ನುಡಿಗಳಿಗೆ ಪ್ರತಿ ವಂದನೆ ತುಂಬಾ ಕಷ್ಟ.

Image