ಸ್ಟೇಟಸ್ ಕತೆಗಳು (ಭಾಗ ೧೪೦೬) - ಕಷ್ಟ ನೀಡು

ದೇವರ ಮುಂದೆ ನಿಂತವ ಕೈಮುಗಿದು ಬೇಡಿಕೊಳ್ಳುತ್ತಿದ್ದಾನೆ. ಭಗವಂತ ಹೀಗೆ ನೋವು ಕಷ್ಟಗಳನ್ನ ನೀಡ್ತಾ ಇರು. ಎಲ್ಲವನ್ನ ಮಾಯಗೊಳಿಸಿ ಸಂಪೂರ್ಣ ಸುಖವನ್ನಂತು ನೀಡಬೇಡ. ಸಂಪೂರ್ಣ ಸುಖವನ್ನ ನೀಡಿ ಬಿಟ್ಟರೆ ನಾನಂತೂ ಸೋಮಾರಿಯಾಗಿ ಬಿಡ್ತೇನೆ. ಬದುಕುವುದಕ್ಕೆ ಉತ್ಸಾಹವೇ ಕಳೆದುಕೊಂಡು ಬಿಡುತ್ತೇನೆ. ಅದಲ್ಲದೆ ನಿನ್ನನ್ನ ತುಂಬಾ ನಂಬಿಕೊಂಡವ ಒಂದು ದಿನವೂ ನಿನ್ನನ್ನು ಸ್ಮರಣೆ ಮಾಡದೆ ಬದುಕು ಸಾಧ್ಯವಾಗುವುದಿಲ್ಲ.

Image

ನಿಷ್ಪಾಪಿ ಸಸ್ಯಗಳು (ಭಾಗ ೧೧೨) - ಹಾಲೆ ಮರ

ಎಡೆಬಿಡದೆ ಆಶಾಢ ಮಾಸದ ಮಳೆ 'ಧೋ' ಎಂದು ಸುರಿಯುತ್ತಿದೆ. ತುಳುವರಿಗೆ ಆಟಿ! ಆಟಿ ತಿಂಗಳಲ್ಲಿ ಬರುವ ಅಮವಾಸ್ಯೆಯು ಬಹಳ ವಿಶೇಷ ! ತುಳುನಾಡಿನುದ್ದಗಲಕ್ಕೂ ಒಂದು ವಿಶೇಷ ಪರ್ವ ದಿನ. ಈ ವಿಶೇಷತೆಗೆ ಕಾರಣವಾದುದೇನೆಂದರೆ ಅದೊಂದು ಮರ! 

Image

ಕಡಲೆಕಾಯಿ ಉಂಡೆ

Image

ಬಾಣಲೆಯಲ್ಲಿ ಬೆಲ್ಲ ಹಾಕಿ ಸ್ವಲ್ಪ ನೀರು. ಹಾಕಿ ಸಣ್ಣ ಉರಿಯಲ್ಲಿಡಿ. ಬೆಲ್ಲ ಕರಗಿ ಉಂಡೆ ಪಾಕದ ಹದಕ್ಕೆ ಬಂದ ಕೂಡಲೇ, ಎರಡು ಚಮಚ ತುಪ್ಪ ಸೇರಿಸಿ ಉರಿ ಆರಿಸಿ, ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಅಗಲವಾದ ತಟ್ಟೆಗೆ ವರ್ಗಾಯಿಸಿ.

ಬೇಕಿರುವ ಸಾಮಗ್ರಿ

ಹುರಿದು ಸಿಪ್ಪೆ ಬಿಡಿಸಿದ ಕಡಲೆಕಾಯಿಬೀಜ-1 ಕಪ್, ಒಣಕೊಬ್ಬರಿ ತುರಿ-1 ಚಮಚ, ಹುರಿಗಡಲೆ-1 ಚಮಚ, ಬೆಲ್ಲ-1/2 ಕಪ್.

ನೋ ಎಕ್ಸ್ಯೂಸ್ PLEASE

ಪುಸ್ತಕದ ಲೇಖಕ/ಕವಿಯ ಹೆಸರು
ದೀಪಾ ಹೀರೇಗುತ್ತಿ
ಪ್ರಕಾಶಕರು
ಸಾವಣ್ಣ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೫

“ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ ನಿರುತ್ಸಾಹಿ ವಾತಾವರಣದಲ್ಲೂ ಹೇಗೆ ಮನಸ್ಸನ್ನು ಸ್ವಸ್ಥವಾಗಿರಿಸಿಕೊಂಡು ಯಾವ ವಯಸ್ಸಿನಲ್ಲಾದರೂ ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತ ಹೋಗಬಹುದು ಎಂಬುದಕ್ಕೊಂದು ಸ್ಫೂರ್ತಿಯುತ ಉದಾಹರಣೆ ಈ ಪುಸ್ತಕ.

ಸ್ಟೇಟಸ್ ಕತೆಗಳು (ಭಾಗ ೧೪೦೫) - ಕಮಲಕ್ಕ

ಅವರ ಸಾಮಾಜಿಕ ಮಾಧ್ಯದಲ್ಲಿ‌ ದಿನವೂ ಪ್ರಾಣಿಗಳ ಜೊತೆಗಿನ ಅವಿನಾಭಾವ ಸಂಬಂಧದ ವೀಡಿಯೋ ಓಡಾಡುತ್ತೆ. ಕಷ್ಟದಲ್ಲಿ ಇರುವ ಪ್ರಾಣಿಗಳನ್ನ ಉಳಿಸುವ ಪೋಟೋ ಮತ್ತೆ ಮತ್ತೆ ಕಾಣ ಸಿಗುತ್ತೆ. ಸದಾ ಸುದ್ದಿಯಲ್ಲಿ ಇರುವವರನ್ನ ಗೌರವಿಸುವ ದೊಡ್ಡವರು ಹುಡುಕಿ ಬರ್ತಾರೆ. ಅದೇ ಬೀದಿಯ ಕೊನೆಯ ಸಾಲಿನ ಕಮಲಕ್ಕನ ಮನೆಯಲ್ಲಿ ಇರೋದು ಒಬ್ಬರಾದರೂ ಅಡುಗೆ ಕೋಣೆಯಲ್ಲಿ ಬೆಂಕಿ ಉರಿಯೋದು ನಿಲ್ಲುವುದಿಲ್ಲ.

Image

ಕನೆಕ್ಟ್ ಆಗುವುದರಿಂದ…

ಕನೆಕ್ಟ್‌ ಆಗುವುದು ಕಾರ್ಯಸಾಧನೆಗೆ ಸಹಕಾರಿಯೆಂಬ ನನ್ನ ಲೇಖನವನ್ನು ಮುಂದುವರಿಸಿ, ಕನೆಕ್ಟ್‌ ಆಗುವುದರಿಂದ ಆಗುವ ಪ್ರಯೋಜನಗಳನ್ನು ಮತ್ತಷ್ಟು ವಿಸ್ತರಿಸುವ ಯೋಚನೆಯ ಫಲವೇ ಈ ಲೇಖನ.

Image