ನಕಲಿ ಪನೀರ್ ಗುರುತು ಪತ್ತೆ ಹೇಗೆ?

ಇಂದು ಪನೀರ್ ನ ಉಪಯೋಗ ಖಾದ್ಯ ಪದಾರ್ಥಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಆಗುತ್ತಿದೆ. ಹಾಲಿನಿಂದ ತಯಾರಿಸಿದ ಶುದ್ಧ ಪನೀರ್ ಎಷ್ಟು ಆರೋಗ್ಯಕ್ಕೆ ಉತ್ತಮವೋ ಅದೇ ರೀತಿ ಸಿಂಥೆಟಿಕ್ (ರಾಸಾಯನಿಕ ಮಿಶ್ರಿತ ಕಲಬೆರಕೆ) ಪನೀರ್ ಆರೋಗ್ಯಕ್ಕೆ ಹಾಳು. ಪನೀರ್ ನಲ್ಲಿ ಹೆಚ್ಚುತ್ತಿರುವ ಕಲಬೆರಕೆಯ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

Image

ನೀಲಿ ಮತ್ತು ಸೇಬು

ಪುಸ್ತಕದ ಲೇಖಕ/ಕವಿಯ ಹೆಸರು
ಸುಧಾ ಆಡುಕಳ
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೫

“ಸುಧಾ ಆಡುಕಳ ಅವರ ಕತೆ, ಕವನ, ನಾಟಕ ಹಾಗು ಪತ್ರಗಳನ್ನು ಓದುತ್ತಲೇ ಬೆಳೆದ ನನಗೆ ಈ ಕಥಾ ಸಂಕಲನ ಅವರ ಬರಹ ಮತ್ತು ಬದುಕಿನ ಅನನ್ಯತೆಯ ಉತ್ತಮ ನಿದರ್ಶನ ಅಂತೆನಿಸಿದೆ. ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ವೈಜ್ಞಾನಿಕ ಮನೋಧರ್ಮದ ಕುರಿತಾದ ಅವರ ಬದ್ಧತೆ ಮತ್ತು ಬದುಕನ್ನು ರೂಪಕಗಳ ಮೂಲಕ ಹುಡುಕಹೊರಟಿರುವ ಕವಿಯ ಆದರ್ಶ ಬೇರೆಬೇರೆಯಾಗುವುದೇ ಇಲ್ಲ.

ಗೆಳೆತನದ ದಿನಾಚರಣೆಯ ಶುಭಾಶಯಗಳು

ಜುಲೈ ‌30 ಮತ್ತು ಆಗಸ್ಟ್ 3. ವಿಶ್ವ ಗೆಳೆತನದ ದಿನ ಜುಲೈ 30. ಆದರೆ ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರ ಆಚರಿಸಲಾಗುತ್ತದೆ. ಆ ಪ್ರಕಾರ ಈ ವರ್ಷ ಆಗಸ್ಟ್ 3 ನಿನ್ನೆ.

Image

ಸ್ಟೇಟಸ್ ಕತೆಗಳು (ಭಾಗ ೧೪೦೩) - ಪತ್ರ

ಉಸಿರು ನಿಲ್ಲಿಸಿದ್ದೇನೆ. ಬದುಕು ತುಂಬಾ ಕಷ್ಟವಾಗಿದೆ. ದಿನದ ದುಡಿಮೆಯಿಂದ ಬದುಕು ಮುಂದೆ ಸಾಗ್ತಾಯಿಲ್ಲ. ನೆಲವನ್ನ ನಂಬಿ ಬದುಕು ಸಾಗಿಸುತ್ತಿದ್ದ ನನಗೆ ಬಣ್ಣದ ಲೋಕ ಕೈ ಬೀಸಿ ಕರೆಯಿತು. ಹವ್ಯಾಸವಾಗ ಬೇಕಾಗಿರೋದು ಬದುಕಾಯಿತು ಚಟವಾಯಿತು. ಅದಿಲ್ಲದೆ ಉಸಿರಾಟವೇ ಕಷ್ಟ ಅನ್ನಿಸೊದ್ದಕ್ಕೆ ಪ್ರಾರಂಭವಾಯಿತು. ಬದುಕಿನ ರೀತಿ ನೀತಿ ಬದಲಾದವು. ನೋಡುಗರ ಕಣ್ಣು ಕುಕ್ಕುವುದಕ್ಕೆ ಶುರುವಾಯಿತು.

Image

ಗೆಲುವಿನ ದುಃಖ ಮತ್ತು ಸೋಲಿನ ಸುಖ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಉದಯ ಕುಮಾರ ಇರ್ವತ್ತೂರು
ಪ್ರಕಾಶಕರು
ಆಕೃತಿ ಆಶಯ ಪಬ್ಲಿಕೇಷನ್ಸ್, ಮಂಗಳೂರು
ಪುಸ್ತಕದ ಬೆಲೆ
ರೂ. 250/-

ತಮ್ಮ ವೃತ್ತಿ ಜೀವನದ ಅನುಭವಗಳನ್ನು ದಾಖಲಿಸುವವರು ತೀರಾ ವಿರಳ. ಇದರಿಂದಾಗಿ, ಸಾವಿರಾರು ಸಮರ್ಥ ಅಧಿಕಾರಿಗಳ ಹಾಗೂ ಉನ್ನತ ಹುದ್ದೆಗಳಲ್ಲಿ ಅಪಾರ ಅನುಭವ ಗಳಿಸಿದವರ ಜೀವನಾನುಭವದ ಪಾಠಗಳು ಮುಂದಿನ ತಲೆಮಾರಿನವರಿಗೆ ಸಿಗದಂತಾಗಿದೆ. ಇದಕ್ಕೆ ಅಪವಾದವೆಂಬಂತೆ, ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಪ್ರಿನ್ಸಿಪಾಲರಾಗಿ, ಹಲವಾರು ಸವಾಲುಗಳಿದ್ದರೂ ಅವನ್ನೆಲ್ಲ ಎದುರಿಸಿ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಡಾ.ಉದಯ ಕುಮಾರ್ ಇರ್ವತ್ತೂರು ತಮ್ಮ ಅಮೂಲ್ಯ ಅನುಭವಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಮಶ್ರೂಮ್ ಟೋಸ್ಟ್

Image

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನೀರುಳ್ಳಿಯನ್ನು ಚೆನ್ನಾಗಿ ಬಾಡಿಸಿಕೊಳ್ಳಿ. ಬಳಿಕ ಮೆಣಸಿನ ಹುಡಿ, ಕೊತ್ತಂಬರಿ ಹುಡಿ ಹಾಗೂ ಅರಸಿನ ಹುಡಿ ಸೇರಿಸಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಕೈಯಾಡಿಸಿ. ಹುಣಸೆ ರಸ ಸೇರಿಸಿ ಎರಡು ನಿಮಿಷ ಹುರಿಯಿರಿ. ಬೇಯಿಸಿದ ಮಶ್ರೂಮ್ ಸೇರಿಸಿ ಸಣ್ಣ ಉರಿಯಲ್ಲಿ ಐದು ನಿಮಿಷ ಕುದಿಸಿ.

ಬೇಕಿರುವ ಸಾಮಗ್ರಿ

ಬ್ರೆಡ್ ಹಾಳೆಗಳು ೩, ಸಣ್ಣಗೆ ಹೆಚ್ಚಿದ ನೀರುಳ್ಳಿ ಅರ್ಧ ಕಪ್, ಬೇಯಿಸಿದ ಬಟನ್ ಮಶ್ರೂಮ್ (ಅಣಬೆ) ೧ ಕಪ್, ಮೆಣಸಿನ ಹುಡಿ ೨ ಚಮಚ, ಕೊತ್ತಂಬರಿ ಹುಡಿ ೧ ಚಮಚ, ಅರಸಿನ ಹುಡಿ ೧ ಚಿಟಿಕೆ, ಹುಣಸೆ ರಸ ೧ ಚಮಚ, ಎಣ್ಣೆ ೩ ಚಮಚ, ತುರಿದ ಮೊಝರಲ್ಲಾ ಚೀಸ್ ೨, ರುಚಿಗೆ ತಕ್ಕಷ್ಟು ಉಪ್ಪು