ಅವಳೆಂದರೆ..

ಅವಳೆಂದರೆ..

ಕವನ

ಅವಳೆಂದರೆ 

ಮಳೆ;

ಸುರಿದೂ ಸುರಿದೂ 

ಹಸಿರಾದದ್ದು ನೆನಪು..

 

ವೈಶಾಖದ ಧಗೆಯಂಥ 

ವಿರಹವನ್ನು 

ಸಹಿಸಲಾಗದವನಿಗೆ 

ಒಲಿದ ಶ್ರಾವಣ..

 

ಮುಂಗುರುಳನ್ನು ಎಣಿಸಲು 

ಪೂರ್ವತಯಾರಿಗಾಗಿ 

ತಾರೆಗಳೆಣಿಸೋ ಚಟುವಟಿಕೆಯೇ 

ಅವನ ದಿನಚರಿ..

 

ಮಳೆಯೆಂದರೆ 

ಅವಳ ಮನಸು 

ಚಂಚಲ;

ವಾತಾವರಣದ ಜೂಜಾಟ..

 

ಪ್ರೀತಿಯೆಂದರೆ 

ಮಳೆಗೆ ನೆನೆದ ತನು;

ಹೆಚ್ಚಾದರೆ 

ವಿಪರೀತ ಶೀತ ಕೆಮ್ಮು..

-’ಮೌನರಾಗ’ ಶಮೀರ್ ನಂದಿಬೆಟ್ಟ (ಸನಂ.)

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್