ಹೆಣ್ಣು ಮಕ್ಕಳಿಗೆ ಮೂಗು ಚುಚ್ಚುವುದರಿಂದ ಲಾಭವಿದೆಯೇ?

ಮೂಗು ಚುಚ್ಚಿಸಿಕೊಳ್ಳುವುದು ಹಳೆಯ ಸಂಪ್ರದಾಯ ಎಂದು ಭಾವಿಸುವ ಇಂದಿನ ಜನಾಂಗದ ಹೆಣ್ಣು ಮಕ್ಕಳಿಗೆ ತಿಳಿದಿಲ್ಲ, ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಂತಹ ಅನೇಕ ಸಂಪ್ರದಾಯಗಳ ಹಿಂದೆ ವಿವಿಧ ಕಾರಣಗಳಿರುತ್ತವೆ. ಅದರಲ್ಲಿಯೂ ನಮ್ಮವರು ಅನುಸರಿಸಿಕೊಂಡು ಬಂದಂತಹ ಸಂಪ್ರದಾಯ ಮತ್ತು ಸಂಸ್ಕೃತಿ ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತದೆ.

Image

ಮೈಸೂರಿನಲ್ಲಿ ಡ್ರಗ್ಸ್ ಘಟಕ: ಅಪಾಯದ ಕರೆಘಂಟೆ

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆಯ ಜಾಲ ಪತ್ತೆಯಾಗಿರುವುದು ಕಳವಳಕಾರಿ ಮತ್ತು ಆತಂಕದ ವಿಷಯ. ಇದುವರೆಗೆ ರಾಜ್ಯದಲ್ಲಿ ಮಾದಕ ವಸ್ತು ವಿತರಣೆ ಅಂದರೆ ಡ್ರಗ್ಸ್ ಪೆಡ್ಡಿಂಗ್ ಜಾಲ ಸಕ್ರಿಯವಾಗಿರುವುದರ ಬಗ್ಗೆ ಮಾಹಿತಿ ಇತ್ತು.

Image

ಸುಪ್ರಭಾತ

ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಒಂದಷ್ಟು ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಕೆಲವೊಮ್ಮೆ ಶ್ರೀಮಂತಿಕೆ ಹೆಚ್ಚಾಗಬಹುದು, ಕೆಲವೊಮ್ಮೆ ಬಡತನವೂ ಹೆಚ್ಚಾಗಬಹುದು. ಮತ್ತೆ ಕೆಲವೊಮ್ಮೆ ಸಾಲಗಾರರು ಆಗಬಹುದು.

Image

ಚಡಪಡಿಕೆ

ಹಿಡಿಸಿದ ನಗೆಯೊಂದು 
ಎಳೆಮಗುವಾಗಿ
ಮನದಲ್ಲಿ ಮನೆ ಮಾಡಿ 
ಮೂರ್ತಿಯಾಗಿಬಿಟ್ಟಿದೆ;
ನೆನಪೇ ಪೂಜೆಯಾಗಿ,
ಕವಿತೆ ಹಣತೆಗಳ ಬೆಳಗಿ 
ಆರಾಧಿಸುತ್ತಿದ್ದೇನೆ
ದಿನಂಪ್ರತಿ;

ದೀರ್ಘ ಮೌನಗಳ
ಸುಳಿವಿನಲ್ಲಿ
ಒಮ್ಮೊಮ್ಮೆ ಸಿಲುಕಿ, 
ಚಡಪಡಿಸಿದ್ದೇನೆ 
ಮಾತ ಹೊಳೆ ಹರಿಸಲು;

ಮಾತಿಗೆ ಬರಗಾಲ ಬಡಿದು
ಕ್ಲಿಕ್ಕಿಸಿಕೊಂಡ
ಫೋಟೋಗಳ ಜಡಿ ಮಳೆ 
ಆಗಾಗ
ಹಣಿಯುತ್ತದೆ;
ಮತ್ತೆ
ಗರಿಗೆದರುತ್ತದೆ ಮನಸ್ಸು
ನೋಡುವ ತವಕದಲ್ಲಿ 
ಮಾತಾಗುವ ಹಂಬಲದಲಿ 
ಹಿಡಿಸಿದಾ ನಗುವ 
ಮುಡಿಯುವುದಕ್ಕಾಗಿ, 
ಜೊತೆಗೂಡಿ ನಡೆಯುವುದಕ್ಕಾಗಿ. 

-ಶಿವರಾಜ ಕಾಂಬಳೆ, ಮೂಡಲಗಿ

ಸ್ಟೇಟಸ್ ಕತೆಗಳು (ಭಾಗ ೧೩೯೭) - ದಾರ

ಅಪ್ಪ ನೇರವಾಗಿ ಕೈ ಹಿಡಿದುಕೊಂಡು ಊರಿನ‌ ದೇವಸ್ಥಾನದ ರಥದ ಬಳಿ‌ ಕರೆದುಕೊಂಡು ಬಂದಿದ್ದರು. ಹಾಗೆ ಬರುವುದಕ್ಕೆ ಕಾರಣವೂ ಇತ್ತು. ಒಂದಿಷ್ಟು ದಿನಗಳಿಂದ ಅಪ್ಪ ಹೇಳಿದ ಕೆಲಸವನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನಾನು ತಯಾರಿರ್ಲಿಲ್ಲ. ಅದಲ್ಲದೆ ನನ್ನೊಬ್ಬನಿಂದ ಇದು ಸಾಧ್ಯವಾಗುವುದಿಲ್ಲ ಅನ್ನೋದನ್ನ ಹಲವು ಬಾರಿ ಹೇಳಿದ್ದೆ ಕೂಡ.

Image

ಶಿಕ್ಷಕಿಯ ಗೆಲ್ಲಿಸಿದ ವಿದ್ಯಾರ್ಥಿ (ಭಾಗ 2)

ಹೀಗಿರಲು ಒಂದು ದಿನ ನನ್ನ ಗಣಿತದ ತರಗತಿಯ ಕೊನೆಯ ಐದು ನಿಮಿಷಗಳು ಮಕ್ಕಳಿಗೆ ಹೋಂ ವರ್ಕ್ ನೀಡುತ್ತಾ ಇದ್ದೆ, ಅವಾಗಲೇ ಹೇಳಿದೆ 'ಮಕ್ಕಳೇ ಇವತ್ತಿಂದ ಒಂದು ಬದಲಾವಣೆ ಮಾಡಿಕೊಳ್ಳುವ. ಸಾಮಾನ್ಯವಾಗಿ ಮರುದಿನ ಯಾರು ಹೋಂವರ್ಕ್ ಮಾಡ್ಲಿಲ್ಲ ಎಂದು ಕೇಳುತ್ತಿದ್ದೆ. ಆದರೆ ಇವತ್ತಿಂದ ನಾಳೆ, ಯಾರಿಗೆಲ್ಲ ಹೋಂವರ್ಕ್ ಮಾಡಿಕೊಂಡು ಬರಲಿಕ್ಕೆ ಸಾಧ್ಯವಿಲ್ಲ ಅನ್ನೋದನ್ನ ನೀವು ಇವತ್ತೇ ಹೇಳಿಬಿಡಿ.

Image

ಕುಂಡದ ಬೇರು

ಪುಸ್ತಕದ ಲೇಖಕ/ಕವಿಯ ಹೆಸರು
ಎಡೆಯೂರು ಪಲ್ಲವಿ
ಪ್ರಕಾಶಕರು
ಮಿಲಿಟರಿ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ: ೨೦೨೫

“ಹರಯದ ದಿನಗಳಲ್ಲಿ ಕವಿತೆಯ ಮೂಲಕ ಬರವಣಿಗೆ ಆರಂಭಿಸುವುದು ಮಾಮೂಲು. ನಂತರದ ದಿನಗಳಲ್ಲಿಯೂ ಕವಿತೆ ಕೈ ಹಿಡಿದರೆ ಬರವಣಿಗೆ ಮುಂದುವರೆಯುತ್ತದೆ, ಇಲ್ಲವಾದರೆ ಇಲ್ಲ. ಆದರೆ ಮಕ್ಕಳ ಸಾಹಿತ್ಯದ ಮೂಲಕ ಸಾಹಿತ್ಯ ಪ್ರವೇಶಿಸಿದ ಎಡೆಯೂರು ಪಲ್ಲವಿ ಅವರು 'ಭೂಮ್ತಾಯಿ ಅಜ್ಜಿ ಆದ್ಲಾ' ಮಕ್ಕಳ ಕತೆಗಳ ಸಂಕಲನ ಪ್ರಕಟಣೆಯ ಮೂಲಕ ತಾವು ಬೇರೆಯವರಿಗಿಂತ ಭಿನ್ನ ಎಂದು ಸಾಬೀತು ಪಡಿಸಿದ್ದರು.

ಪರಿವರ್ತನೆ ಎಲ್ಲಿಂದ ಪ್ರಾರಂಭಿಸೋಣ?

ಅವರ ಮೇಲೆ ಇವರು, ಇವರ ಮೇಲೆ ಅವರು. ಪರಿವರ್ತನೆ ಎಲ್ಲಿಂದ ಪ್ರಾರಂಭಿಸೋಣ. ದಯವಿಟ್ಟು ತಿಳಿಸಿ. ಪ್ರಯಾಣಿಕನೊಬ್ಬ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆ. ಅರ್ಧಗಂಟೆ ಲೇಟಾಗಿ ಬಂದ ಬಸ್ಸು ಎಂದಿನಂತೆ ನಿಲ್ದಾಣದಲ್ಲಿ ನಿಲ್ಲಿಸಿದೆ ಸುಮಾರು ದೂರ ಹೋಗಿ ನಿಲ್ಲುತ್ತದೆ.

Image