ಕೃಷಿರಂಗದ ನವಯುಗದ ಗಮನಾರ್ಹ ಬೆಳವಣಿಗೆಗಳು (ಭಾಗ 2)

ಮಹಾರಾಷ್ಟ್ರದಲ್ಲಿ 600 ರೈತ ಕುಟುಂಬಗಳ ಬದುಕು ಬದಲಾಯಿಸಿದ ಅಗ್ರಿ ಟೂರಿಸಮ್
ಪಾಂಡುರಂಗ ತಾವರೆ (52) ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯ ಶಾಂಗವಿಯ ರೈತನ ಮಗ. 2005ರಲ್ಲಿ ಅವರು ಸ್ಥಾಪಿಸಿದ ಕಂಪೆನಿ: ಅಗ್ರಿ ಟೂರಿಸಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್. ಇಪ್ಪತ್ತು ವರುಷ ಪ್ರವಾಸೋದ್ಯಮದಲ್ಲಿ ಕೆಲಸ ಮಾಡಿದ ಪಾಂಡುರಂಗ ಅನಂತರ ಪತ್ನಿ ವೈಶಾಲಿಯೊಂದಿಗೆ ತಾವರೆ ಹಳ್ಳಿಗೆ ಮರಳಿದರು.

Image

‘ಲಾಸ್ಟ್ ಬೆಂಚ್’ ವಿದ್ಯಾರ್ಥಿಗಳೇ, ನೀವು ದಡ್ಡರಲ್ಲ !

ಹೌದು, ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಕೊನೆಯ ಬೆಂಚ್ ನಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಎಲ್ಲರೂ ದಡ್ಡರಾಗಿರುವುದಿಲ್ಲ. ಅವರು ತಾವು ಲಾಸ್ಟ್ ಬೆಂಚ್ ಎನ್ನುವ ಕೀಳಿರಿಮೆಯನ್ನು ಬೆಳೆಸಿಕೊಳ್ಳಬೇಕಾಗಿಯೂ ಇಲ್ಲ. ಏಕೆಂದರೆ ನಾನೂ ಲಾಸ್ಟ್ ಬೆಂಚ್ ವಿದ್ಯಾರ್ಥಿಯೇ. ನಾನು ಕೊನೆ ಬೆಂಚ್ ಅನ್ನು ಅಲಂಕರಿಸಿದ ಕಾರಣ ನಾನು ದಡ್ಡ ಎಂದಲ್ಲ, ನನ್ನ ಎತ್ತರವೇ ಇದಕ್ಕೆ ಕಾರಣ.

Image

ಕೀಟನಾಶಕ ಬಳಕೆ ಜ್ಞಾನ ರೈತರನ್ನು ತಲುಪಲಿ

ನಾಡಿಗೆ ಅನ್ನ- ಆಹಾರ ನೀಡುವ, ಆಹಾರ ಭದ್ರತೆ ಕೊಡುಗೆ ನೀಡುವ ರೈತ ಹಾಗೂ ಅವರ ಮಕ್ಕಳು ತಮ್ಮದೇ ಗದ್ದೆಯಲ್ಲಿ ಬೆಳೆದ ತರಕಾರಿ ಸೇವಿಸಿ ಮೃತಪಟ್ಟ ರಾಯಚೂರು ಜಿಲ್ಲೆಯ ಕಟ್ಟೋಣಿ ತಿಮ್ಮಾಪುರದ ಘಟನೆ ದುರಂತವೇ ಸರಿ. ಇದು ಎಚ್ಚರಿಕೆಯ ಗಂಟೆಯಲ್ಲದೆ, ಕಣ್ಣೆರೆಸುವ ಘಟನೆಯೂ ಹೌದು.

Image

ಮುದ್ದು ಬಾಲ್ಯ

ದೊಡ್ಡವರ ದಡ್ಡತನ - ಬುದ್ದಿ ಇರುವವರ ಕಳ್ಳತನ - ಓದಿದವರ ಭ್ರಷ್ಟತನ - ಅಧಿಕಾರಕ್ಕೇರಿದವರ ಅಸಭ್ಯತನ - ನಮ್ಮ ಮೂರ್ಖತನಗಳಿಗೆ ಮಕ್ಕಳು ಪಾಠವಾಗಬಹುದೇ?

Image

ಸ್ಟೇಟಸ್ ಕತೆಗಳು (ಭಾಗ ೧೩೯೨) - ವಿಳಾಸ

ಪತ್ರ ಬರೆದಾಗಿದೆ, ಎಲ್ಲವನ್ನೂ ಸವಿವರವಾಗಿ ಅಲ್ಲಿ ದಾಖಲಿಸಿದ್ದೇನೆ. ಎಲ್ಲಾ ವಿಷಯಗಳು ನಾನು ಮೇಲೆ ಬರೆದ ವಿಳಾಸಕ್ಕೆ ತಲುಪಲೇಬೇಕು. ಮಾನವೀಯತೆ ನಿಲಯ, ಮಾನವೀಯತೆಯ ಎರಡನೇ ತಿರುವು, ಮಾನವೀಯತೆ ಗಲ್ಲಿ, ಮಾನವೀಯತೆ ತಾಲೂಕು ಜಿಲ್ಲೆ ಹೀಗೆ ಪತ್ರದ ಹೊರಗಡೆ ವಿಳಾಸವನ್ನು ದಾಖಲಿಸಿದ್ದೇನೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೧೧೦) - ನಾಗಲಿಂಗ ಪುಷ್ಪ ಮರ

ವರ್ಷ ಋತುವಿನ ಶಾಲಾದಿನಗಳು ಬಿರುಸಿನಿಂದ ಸಾಗುತ್ತಿದ್ದಂತೆ ನಮ್ಮ ನಿಷ್ಪಾಪಿ ಸಸ್ಯಗಳ ಮೆರವಣಿಗೆಯೂ ಸಾಗಿದೆ.. ನಾವು ಈ ವರೆಗೆ ಕೆಲವು ಸಣ್ಣ ಪುಟ್ಟ ಮೂಲಿಕೆ, ಪೊದರು, ಬಳ್ಳಿಗಳ ಬಗ್ಗೆ ಅರಿತುಕೊಂಡಂತೆ ಇಂದು ಹೂವಾಗುವ, ಹೂವಿನಿಂದಲೇ ಆಕರ್ಷಿಸಲ್ಪಡುವ ಮಧ್ಯಮ ಗಾತ್ರ ಬೆಳೆಯಬಲ್ಲ ನಾಗಲಿಂಗ ಪುಷ್ಪ, ಫಿರಂಗಿ ಮರ ಅಥವಾ ಉಂಡೆಮರದ ಬಗ್ಗೆ ತಿಳಿಯೋಣ.

Image

ದೂರದ ಬೆಟ್ಟ

ನಿಯತ್ತು ಸತ್ತು ಕಾಲವೇ ಕೆಟ್ಟು ಹೋಯಿತು. ಸತ್ಯ ಪಾತಾಳಕ್ಕೆ ತುಳಿಯಲ್ಪಟ್ಟಿತು. ಸುಳ್ಳು ವಿಜೃಂಭಿಸಿತು. ಬಾಳೆಲ್ಲ ಕಾರೆ ಮುಳ್ಳು ಚುಚ್ಚಿದಂತಾಗಲು ಆರಂಭಿಸಿತು. ಅನ್ಯಾಯ ಅಕ್ರಮಗಳು ತಲೆಯೆತ್ತಿತು. ನ್ಯಾಯ ಮಾರ್ಗದಲಿ ನಡೆದವನಿಗೆ ಮತ್ತೂ ಕಷ್ಟವಾಯಿತು.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 38

356) ಹಾಡು : tere dar pe sanam chale ayye (film: phir teri Kahani yaad aayee )

ನನ್ನ ಅನುವಾದ: 

ನಿನ್ನ ಬಾಗಿಲಿಗೆ 

ಬಂದೆ ನಾನು 

ಬರಲಿಲ್ಲ ನೀನು ಎಂದು 

ಬಂದೆ ನಾನು

357)  ಹಾಡು- Mere Dil Ka Pata Tumhein Kisne Diya

film: jaanam 

ನನ್ನ ಅನುವಾದ:

ಗಂ- ನನ್ನ ಹೃದಯದ ವಿಳಾಸವ

ಯಾರು  ನಿಂಗೆ ಕೊಟ್ಟರು ? 

ಏನು ನನ್ನಂತೆ ನೀ

ಒಬ್ಬಂಟಿ ಇದ್ದೆಯಾ

ನಲ್ಲೆ ನಲ್ಲೆ ಓ ನಲ್ಲೆ

ನನ್ನ ನಲ್ಲೆ 

 

ಹೆ - ನಿನ್ನ ಹೃದಯದ ವಿಳಾಸವ 

ನಂಗೆ ಹೃದಯ ಕೊಟ್ಟಿತು

ಹೌದು ನಿನ್ನ oತೆಯೇ ನಾ ಇದ್ದೆ ಒಬ್ಬಂಟಿ

ನಲ್ಲ ನಲ್ಲ ಓ ನಲ್ಲ

ನನ್ನ ನಲ್ಲ