ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 38

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 38

356) ಹಾಡು : tere dar pe sanam chale ayye (film: phir teri Kahani yaad aayee )

ನನ್ನ ಅನುವಾದ: 

ನಿನ್ನ ಬಾಗಿಲಿಗೆ 

ಬಂದೆ ನಾನು 

ಬರಲಿಲ್ಲ ನೀನು ಎಂದು 

ಬಂದೆ ನಾನು

357)  ಹಾಡು- Mere Dil Ka Pata Tumhein Kisne Diya

film: jaanam 

ನನ್ನ ಅನುವಾದ:

ಗಂ- ನನ್ನ ಹೃದಯದ ವಿಳಾಸವ

ಯಾರು  ನಿಂಗೆ ಕೊಟ್ಟರು ? 

ಏನು ನನ್ನಂತೆ ನೀ

ಒಬ್ಬಂಟಿ ಇದ್ದೆಯಾ

ನಲ್ಲೆ ನಲ್ಲೆ ಓ ನಲ್ಲೆ

ನನ್ನ ನಲ್ಲೆ 

 

ಹೆ - ನಿನ್ನ ಹೃದಯದ ವಿಳಾಸವ 

ನಂಗೆ ಹೃದಯ ಕೊಟ್ಟಿತು

ಹೌದು ನಿನ್ನ oತೆಯೇ ನಾ ಇದ್ದೆ ಒಬ್ಬಂಟಿ

ನಲ್ಲ ನಲ್ಲ ಓ ನಲ್ಲ

ನನ್ನ ನಲ್ಲ

358)   ಹಾಡು:  Baadalon mein chup raha hai chand kyun

ನನ್ನ ಅನುವಾದ:

ಚಂದ್ರನೇಕೆ ಮೋಡದಲ್ಲಿ ಮರೆ ಆದನು 

ಅದಕೆ ನಿನ್ನ ಮೊಗವೆ ಕಾರಣ

 

ಮುಂದವಾಯಿತೇಕೆ ಬೆಳುದಿಂಗಳು

ಅದಕೆ ನಿನ್ನ ಚೆಲುವೇ ಕಾರಣ

359) ಹಾಡು:ಇಸ ಪ್ಯಾರ್ ಕೋ ಕ್ಯಾ ನಾಮ್ ದೂಂ

ನನ್ನ ಅನುವಾದ:

ಈ ಪ್ರೀತಿಗೆ ಏನೆನ್ನಲಿ

360) ಹಾಡು: Shairana si hai zindagi ki faza

ನನ್ನ ಅನುವಾದ:

ಕಾವ್ಯಮಯವಾಗಿದೆ ಬದುಕು ಇದೀಗ

ಈ ಬದುಕನ್ನು ಈಗ ಆನಂದಿಸಿ

 

ಆಗಿರುವೆ ಕವಿತೆ ನಾ ನಿನ್ನೆದುರಿಗೆ

ಖುಷಿಯಿಂದ ನೀನು ನನ್ನನ್ನು ಹಾಡು

361)ಹಾಡು : Aapke kareeb hum rehte hai

ನನ್ನ ಅನುವಾದ: 

ನಿನ್ನ ಸನಿಯ ಇರುತೇನೆ

ನೀ ನನ್ನ ಭಾಗ್ಯ ಅಂತೇನೆ

ನಿನ ಪಡೆಯೊ ಕನಸು ನಂದೇನೆ

ನನ ಜೀವ ಭಾವ ನಿನಗಾಗೇ

ಜೀವದ ಆಣೆ 

ನಿಜ ಹೇಳುವೆನು.

362) ಹಾಡು - ಆಜ ಮೇರೆ ಪಾಸ ರಹನಾ

ಚಿತ್ರ :  ಸನಮ್ ತೇರೇ ಹೈ ಹಮ್

ನನ್ನ ಅನುವಾದ: 

ಈವತ್ತು ಇರು ನನ್ನ ಸನಿಹ

ಹೇಳುವದಿದೆ ಕೇಳುವದೂ ಇದೆ

ಈ ರಾತ್ರಿ ಇದೆ ನಿನ್ನ ಸಾಂಗತ್ಯ 

ಏನದ್ಭುತ

363) ಹಾಡು - sathire gam nahi karna

ಚಿತ್ರ - ಇಕರಾರ

ನನ್ನ ಅನುವಾದ:

ಗೆಳತೀ ಪಡದಿರು ದುಃಖ

ಆದರೂ ಏನೇ 

ಬಿಡದಿರು ನಿಟ್ಟುಸಿರು

364) ಹಾಡು: ತುಂ ಯಾವ ನ ಆಯಾ ಕರೋ

ನನ್ನ ಅನುವಾದ:

ನೀ ನೆನಪಿಗೆ  ಬಾರದಿರು

ನೆನಪಾಗೋ ಮೊದಲೇನೇ ನೀ ಬಂದು ಸೇರು

365)  ಹಾಡು - आप को देख कर...

ನನ್ನ ಅನುವಾದ:

ನಿನ್ನನು ನೋಡಿ

ನಿನ್ನನು ನೋಡಿ ನನಗೆ ಹೀಗನಿಸಿತು

ನಂಗೆ ಹೊಸ ಜೀವನ ಸಿಕ್ಕಾಯಿತು

ಓ ನಲ್ಲೆಯೇ ದೇವನ ಏನ್ ಬೇಡಲಿ

ನಂಗೆ ಲೋಕದ ಎಲ್ಲ ಸುಖ ಸಿಕ್ಕಿತು.

ನಿನ್ನನು ನೋಡಿ...

366)ಹಾಡು - 

कितना प्यार तुम्हें करते हैं

ನನ್ನ ಅನುವಾದ: 

 ಎಷ್ಟೊಂದು ಪ್ರೀತಿ ಮಾಡುವೆ ನಿನ್ನ 

ಎಂಬುದು ತಿಳಿಯಿತು ನನಗಿಂದು

ಬದುಕುವುದಿಲ್ಲ ಇಲ್ಲದೆ ನೀನು

ಎಂಬುದು ತಿಳಿಯಿತು ನನಗಿಂದು

367) ಹಾಡು: चेहरा क्या देखते हो?

ನನ್ನ ಅನುವಾದ: 

ಮುಖವನ್ನು ಏನು ನೀ ನೋಡುವಿ

ಎದೆಯಲ್ಲಿ ಇಳಿದು ನೋಡಲ್ಲ 

368) ಹಾಡು:  Yunhi Tum Mujhse Baat Karti Ho

ನನ್ನ ಅನುವಾದ -

ಸುಮ್ಮನೇ ನನ್ನ ಜತೆಗೆ ಮಾತಾಡುವಿಯೋ?

ಇದೆಯೇ ನಿಂಗೆ ಪ್ರೇಮದಾ ವಿಚಾರಾ?

369 ) ಹಾಡು - Jiske Sapne Hame Roj Aate Rahe

ನನ್ನ ಅನುವಾದ:

ಯಾರ ಕನಸು   ಪ್ರತಿರಾತ್ರಿ 

ನಂಗೆ ಬೀಳುವುದೋ

ನಿದ್ದೆ ಕೆಡಿಸುವುದೋ

ಇದ ನೀ ಹೇಳು ನಂಗೆ

ಇದ ನೀ ಹೇಳು ನಂಗೆ

ಅದು ನೀನೆ ಅಲ್ಲವೇ 

ನೀನೆ ಅಲ್ಲವೇ

ನೀನೆ ಅಲ್ಲವೇ

370) ಹಾಡು: ರಬ ನೆ ಬನಾಯಾ ತುಜೆ ಮೇರೆ ಲಿಯೆ

ನನ್ನ ಅನುವಾದ

ಬ್ರಹ್ಮ ಮಾಡಿದ ನಿನ್ನ ನನಗಾಗಿಯೇ

ನನ್ನ ನಿನಗಾಗಿಯೇ

( ಸದ್ಯಕ್ಕೆ ಕಡೆಯ ಕಂತು)

Rating
Average: 4 (2 votes)