ಒಂದು ಗಝಲ್
ಕವನ
ಹೊಟ್ಟೆ ಹಸಿವಿಗೆ ಸೋತವರ ಬದುಕು ಸರಿಯಾಗಲೇ ಇಲ್ಲ
ಬಟ್ಟೆ ತೊಡಲು ಗತಿಯಿಲ್ಲದೆ ಜೀವನ ಗರಿಯಾಗಲೇ ಇಲ್ಲ
ಹುಟ್ಟು ದೌಲತ್ತಿನ ಹಾಸಿಗೆಯಲ್ಲಿ ಮಲಗಿದವರು ಎಲ್ಲಿದ್ದಾರೊ
ದಟ್ಟ ಹೊಗೆಯಲ್ಲಿ ಎಳೆವ ತೋಳಿಗಿಂದು ಅರಿವಾಗಲೇ ಇಲ್ಲ
ಹಟ್ಟಿ ಬಿಟ್ಟಿರುವ ಜನರಿಗಿಂದು ಚಿಂತನೆಯು ಇರುವುದೇ ಹೇಳು
ಕಟ್ಟಿ ಹೊತ್ತಿರುವ ಕನಸದು ಮನೆಯೊಳಗೆ ಮರಿಯಾಗಲೇ ಇಲ್ಲ
ನೆಟ್ಟ ಮನಸಿನಲ್ಲಿಯಿಂದು ಭಯದ ಗುಂಡಿಗೆಯೇ ಕಂಡರೆ ಹೇಗೆ
ಕುಟ್ಟಿ ಪುಡಿಯ ಮಾಡಲಿಂದು ತನುವದುವು ಉರಿಯಾಗಲೇ ಇಲ್ಲ
ಮಟ್ಟ ಹಾಕಬೇಕಯ್ಯ ಉಳ್ಳವರಿಗೆ ಅಂಬಲಿಯನು ತಿನಿಸಿ ಈಶಾ
ಸುಟ್ಟು ಕ್ರೌರ್ಯವ, ಬಾಳ ಬೇಕೆಂಬುವುದು ಗುರಿಯಾಗಲೇ ಇಲ್ಲ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
