ಸ್ಟೇಟಸ್ ಕತೆಗಳು (ಭಾಗ ೧೩೯೨) - ವಿಳಾಸ

ಪತ್ರ ಬರೆದಾಗಿದೆ, ಎಲ್ಲವನ್ನೂ ಸವಿವರವಾಗಿ ಅಲ್ಲಿ ದಾಖಲಿಸಿದ್ದೇನೆ. ಎಲ್ಲಾ ವಿಷಯಗಳು ನಾನು ಮೇಲೆ ಬರೆದ ವಿಳಾಸಕ್ಕೆ ತಲುಪಲೇಬೇಕು. ಮಾನವೀಯತೆ ನಿಲಯ, ಮಾನವೀಯತೆಯ ಎರಡನೇ ತಿರುವು, ಮಾನವೀಯತೆ ಗಲ್ಲಿ, ಮಾನವೀಯತೆ ತಾಲೂಕು ಜಿಲ್ಲೆ ಹೀಗೆ ಪತ್ರದ ಹೊರಗಡೆ ವಿಳಾಸವನ್ನು ದಾಖಲಿಸಿದ್ದೇನೆ. ಆದರೆ ನಾನು ಬರೆದ ಪತ್ರ ಆ ವಿಳಾಸವನ್ನ ತಲುಪಿಯೇ ಇಲ್ಲವೇನೋ ಏಕೆಂದರೆ ನನಗೆ ಅಲ್ಲಿಂದ ಯಾವುದೇ ಮಾಹಿತಿ ಉತ್ತರ ರೂಪದಲ್ಲಿ ಸಿಗಲೇ ಇಲ್ಲ. ಆ ತರಹದ ವಿಳಾಸ ಇದೆ ಎಂದು ನಾನು ನಂಬಿದ್ದೇನೆ. ಎಲ್ಲ ವಿಳಾಸವು ಇರುವಾಗ ಮಾನವೀಯತೆಯ ವಿಳಾಸ ಸಿಗದಿರುವುದು ಯಾಕೆ ? ದಯವಿಟ್ಟು ನಿಮ್ಮಲ್ಲಿ ಯಾರಿಗಾದರೂ ಈ ವಿಳಾಸ ಗೊತ್ತಿದ್ರೆ ದಯವಿಟ್ಟು ಹೇಳಿ. ತುಂಬಾ ಮುಖ್ಯವಾದ ಮಾಹಿತಿಯನ್ನ ನಾನು ಅಲ್ಲಿಗೆ ತಲುಪಿಸಬೇಕಾಗಿದೆ. ತುಂಬಾ ಜರೂರಾಗಿ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ