POK ಕಾಣದ ರೇಖೆಯ ಕಥನ

ಪುಸ್ತಕದ ಲೇಖಕ/ಕವಿಯ ಹೆಸರು
ಗೋಪಾಲಕೃಷ್ಣ ಕುಂಟಿನಿ
ಪ್ರಕಾಶಕರು
ಸಾವಣ್ಣ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೫

“ಪ್ರಧಾನಿ ನೆಹರೂ ಆಗ ಮಾಡಿದ ಎರಡು ತಪ್ಪುಗಳು ಐತಿಹಾಸಿಕ ಪ್ರಮಾದಕ್ಕೆ ಕಾರಣವಾದವು. ಝೀಲಂ ನದಿಯನ್ನು ದಾಟಿ ಮುಂದೆ ಹೋಗದಂತೆ ನೆಹರೂ ಮಿಲಿಟರಿಗೆ ಆದೇಶಿಸಿದರು. ನುಸುಳುಕೋರರನ್ನು ಹೊಡೆದು ಓಡಿಸುವ ಬದಲು ವಿಶ್ವಸಂಸ್ಥೆಯನ್ನು ಮಧ್ಯಸ್ಥಿಕೆಗೆ ಕರೆದರು. ಸಂಚುಕೋರರು ತೋಡಿದ ಹಳ್ಳಕ್ಕೆ ನೆಹರೂ ಬಿದ್ದರು, ದೇಶವೂ ಬಿತ್ತು. ಯಾವತ್ತೂ LoC is not a legally recognised border.

ಜೀವನಮಟ್ಟ ಸುಧಾರಣೆಯ ಆಯ್ಕೆಗಳು

ನಾವು ನಮ್ಮ ಜೀವನದ ಸಾಕಷ್ಟು ಸಮಯವನ್ನು ಯಾವ ಸ್ಥಳದಲ್ಲಿ, ಯಾವ ಪ್ರದೇಶದಲ್ಲಿ, ಯಾವ ವ್ಯಕ್ತಿಗಳೊಂದಿಗೆ, ಯಾವ ಭಾವದೊಂದಿಗೆ ಹೆಚ್ಚು ಹೆಚ್ಚು ಕಳೆಯುತ್ತೇವೆಯೋ ಅದರ ಪ್ರಭಾವ ನಮ್ಮ ಬದುಕಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಬಹುತೇಕ ಅನಿವಾರ್ಯವಾಗಿ ಸಹಜವಾಗಿಯೇ, ಅನುಕೂಲಕ್ಕೆ ತಕ್ಕಂತೆ ನಡೆಯುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೯೧) - ಅವರಿವರಿಗೆ

ಆಗಸದೆತ್ತರದಲ್ಲಿ ಬಣ್ಣ ಬಣ್ಣದ ಬಲೂನುಗಳು ಹಾರುತ್ತಿವೆ. ನೋಡುವ ಕಣ್ಣುಗಳಿಗೆ ಅದೊಂದು ಅದ್ಭುತ ವಿನ್ಯಾಸ, ರಸದೌತಣ. ಎಲ್ಲವೂ ಮುಗಿಲೆತ್ತರಕ್ಕೆ ಚೆಲ್ಲಾಪಿಲ್ಲಿಯಾಗಿ ಹಾರಾಡುವಾಗ  ಆಕಾಶದ ಸೌಂದರ್ಯ ಹೆಚ್ಚಾಗಿದೆ. ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದಾರೆ. ಅವುಗಳನ್ನು ತಮ್ಮ ಮೊಬೈಲ್ನೊಳಗೆ ಚಿತ್ರೀಕರಿಸಿಕೊಂಡು ಎಲ್ಲ ಕಡೆ ಹಂಚಿ ಸಂಭ್ರಮ ಪಡುತ್ತಿದ್ದಾರೆ.

Image

ಕೃಷಿರಂಗದ ನವಯುಗದ ಗಮನಾರ್ಹ ಬೆಳವಣಿಗೆಗಳು (ಭಾಗ 1)

ಕೃಷಿರಂಗದಲ್ಲಿ  ಡ್ರೋನ್ ಬಳಕೆಗೆ ವಿಪುಲ ಅವಕಾಶ
ಬೆಳೆಗಳಿಗೆ ಪೋಷಕಾಂಶಗಳು ಮತ್ತು ಪೀಡೆನಾಶಕಗಳನ್ನು ಸಿಂಪಡಿಸಲು ಡ್ರೋನ್ ಸೇವೆ ಭಾರತದಲ್ಲಿ ಹಲವೆಡೆ ಶುರುವಾಗಿದೆ. ಇದರಿಂದಾಗಿ ಕೃಷಿಕರಿಗೆ ಸಮಯ ಮತ್ತು ವೆಚ್ಚದಲ್ಲಿ ಭಾರೀ ಉಳಿತಾಯ.

ಜನವರಿ 2022ರಲ್ಲಿ ಚಿತ್ರದುರ್ಗದ ಸಿರಿಗೆರೆಯಲ್ಲಿ ರೈತ ಗುರುಶಾಂತಪ್ಪರ ನಾಲ್ಕು ಎಕ್ರೆ ಅಡಿಕೆ ತೋಟಕ್ಕೆ ಕೇವಲ ಎರಡು ಗಂಟೆಯಲ್ಲಿ ಡ್ರೋನ್‌ನಿಂದ ಪೀಡೆನಾಶಕ ಸಿಂಪರಣೆ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಯಾಕೆಂದರೆ ಕೆಲಸಗಾರರಿಂದ ಸಿಂಪರಣೆ ಮಾಡಿಸಲು ನಾಲ್ಕು ದಿನ ತಗಲುತ್ತಿತ್ತು ಮತ್ತು ಸಾವಿರಾರು ರೂಪಾಯಿ ವೆಚ್ಚವಾಗುತ್ತಿತ್ತು. ಡ್ರೋನ್ ಸಿಂಪರಣೆಗೆ ತಗಲಿದ ವೆಚ್ಚ ರೂ.1,350 ಮಾತ್ರ!

Image

ವಿವೇಚನೆಯಿಂದ ಒಳಿತು

ನಿಂದನಾತ್ಮಕ, ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಆರೋಪದ ಮೇಲೆ ರಾಜ್ಯದಲ್ಲಿ ಎರಡೂವರೆ ವರ್ಷದಲ್ಲಿ (೨೦೨೩-೨೫ ಜೂನ್‌ವರೆಗೆ) ೧,೪೧೪ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ಗಮನ ಇಟ್ಟಿದ್ದು, ಸ್ವಯಂಪ್ರೇರಿತ ಪ್ರಕರಣವನ್ನೂ ದಾಖಲಿಸುತ್ತಿದೆ.

Image