ಕನ್ನಡ ಪತ್ರಿಕಾ ಲೋಕ (ಭಾಗ ೨೧೮) - ಗೋಕುಲವಾಣಿ

ಮುಂಬಯಿಯ "ಗೋಕುಲವಾಣಿ"
ಮುಂಬಯಿಯ ಬಿ. ಎಸ್. ಕೆ. ಬಿ. ಅಸೋಸಿಯೇಶನ್ ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಗೋಕುಲವಾಣಿ". ಮುಂಬಯಿಯ ಸಾಯನ್ ನಲ್ಲಿ ೧೯೨೫ರಲ್ಲಿ ಸ್ಥಾಪನೆಗೊಂಡ (ಸ್ಥಾಪಕರು: ಡಾ. ಸುರೇಶ್ ರಾವ್) ಕನ್ನಡಿಗರ ಸಂಸ್ಥೆಯಾಗಿದೆ ಬಿ. ಎಸ್. ಕೆ. ಬಿ. ಅಸೋಸಿಯೇಶನ್. ಇದೇ ಸಂಸ್ಥೆಯು ೩೭ ವರ್ಷಗಳ ಹಿಂದೆ ಆರಂಭಿಸಿದ ಮಾಸಪತ್ರಿಕೆ "ಗೋಕುಲವಾಣಿ".
ಮುಂಬಯಿಯ ಮಾಟುಂಗ (ವೆಸ್ಟ್)ದ ಗೋಕುಲ್ ಮಾರ್ಗ್ ನ ಗೋಕುಲ್ ನಿಂದ ಪ್ರಕಾಶನಗೊಳ್ಳುವ ಪತ್ರಿಕೆಯ ಪ್ರಕಾಶಕರು ಮತ್ತು ಮುದ್ರಕರು ಹಾಗೂ ಬಿ ಎಸ್ ಕೆ ಬಿ ಅಸೋಸಿಯೇಶನಿನ ಗೌರವ ಕಾರ್ಯದರ್ಶಿಗಳು ಅನಂತ ಪದ್ಮನಾಭನ್ ಕೃಷ್ಣನ್ ಪೋತಿ (ಎ. ಪಿ. ಕೆ. ಪೋತಿ). ಡಾ | ವ್ಯಾಸರಾವ್ ನಿಂಜೂರ್ ಗೌರವ ಸಂಪಾದಕರು. ಶ್ರೀನಿವಾಸ ಜೋಕಟ್ಟೆ ಸಂಪಾದಕರು. ಶ್ರೀಮತಿ ಮಿತ್ರಾ ವೆಂಕಟ್ರಾಜ್, ಶ್ರೀಮತಿ ಅಹಲ್ಯಾ ಬಲ್ಲಾಳ ಹಾಗೂ ಜಗದೀಶ್ ಆಚಾರ್ಯ ಅವರು ಸಲಹಾ ಮಂಡಳಿ ಸದಸ್ಯರು. ಶ್ರೀಮತಿ ಪ್ರೇಮಾ ಎಸ್. ರಾವ್, ಡಾ |ಅರುಣ್ ರಾವ್, ಡಾ | ನಿತಿನ್ ರಾವ್ ಹಾಗೂ ಶ್ರೀಮತಿ ಚಿತ್ರಾ ಮೇಲ್ಮನೆ ಅವರು ಸಂಪಾದಕ ಮಂಡಳಿ ಸದಸ್ಯರಾಗಿದ್ದಾರೆ. ಮಾಟುಂಗ ವೆಸ್ಟ್ ನ ಸರಿತಾ ಆರ್ಟ್ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ನವೀನ್ ಪ್ರಿಂಟರ್ಸ್ ನ ದೀಪಕ್ ಶೆಟ್ಟಿ ಪತ್ರಿಕಾ ವಿನ್ಯಾಸಕರಾಗಿದ್ದಾರೆ.
೧೦೪ ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಬರುತ್ತಿರುವ ಗೋಕುಲವಾಣಿಯ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಗಳು. ಕನ್ನಡದ ಅನೇಕ ಹಿರಿ - ಕಿರಿಯ ಬರೆಹಗಾರರು ಬರೆದ ಸಾಹಿತ್ಯ, ಸಂಸ್ಕೃತಿ, ಕಲೆ, ಸಮಾಜಕ್ಕೆ ಸಂಬಂಧಿಸಿದ ವೈವಿಧ್ಯಮ ಬರಹಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಾ ಬರುತ್ತಿದೆ.
~ ಶ್ರೀರಾಮ ದಿವಾಣ