ಡಿಜಿಟಲ್ ಪಾವತಿ ವೇಗವರ್ಧನೆ ಜತೆಗೆ ಸುರಕ್ಷೆಯೂ ಹೆಚ್ಚಲಿ

ಕೊಡು-ಕೊಳ್ಳುವ ವ್ಯವಹಾರದಲ್ಲಿ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಉಂಟು ಮಾಡಿರುವ ಯೂನಿಫೈಡ್ ಪೇಮೆಂಟ್ ಇಂಟ‌ಫೇಸ್-ಯುಪಿಐ ಸೋಮವಾರದಿಂದ ಇನ್ನಷ್ಟು ವೇಗವಾಗಿದೆ. ಇದಕ್ಕೆ ಮುನ್ನ ೩೦ ಸೆಕೆಂಡ್‌ಗಳಷ್ಟು ಅವಧಿ ತೆಗೆದುಕೊಳ್ಳುತ್ತಿದ್ದ ಈ ಪಾವತಿ ಪ್ರಕ್ರಿಯೆ ಇನ್ನು ೧೦ರಿಂದ ೧೫ ಸೆಕೆಂಡ್ ಗಳಲ್ಲಿ ನಡೆಯಲಿದೆ.

Image

ಶೋಷಿತರ ಧ್ವನಿಯನ್ನು ನೆನೆಯುತ್ತಾ....

ಇಸಂಗಳನ್ನು ಮೀರಿ ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕಾದ ಸನ್ನಿವೇಶದಲ್ಲಿ… ಕಮ್ಯುನಿಸ್ಟ್ ಜಗತ್ತಿನ ಗ್ಲಾಮರಸ್ ಹೀರೋ ಆರ್ನೆಸ್ಟ್ ಚೆಗುವಾರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ, ಜೂನ್ 14, ಬಂಡವಾಳ ಶಾಹಿ ವ್ಯವಸ್ಥೆಯ ಕಾರ್ಪೊರೇಟ್ ಸಂಸ್ಕೃತಿ ಬಹುತೇಕ ಇಡೀ ಜಗತ್ತನ್ನು ಆಕ್ರಮಿಸಿರುವಾಗ, ಜಾಗತೀಕರಣದ ಮುಕ್ತ ಮಾರುಕಟ್ಟೆಯ ಹೊಸ ಪೀಳಿಗೆ ಮುಖ್ಯವಾಹಿನಿಯಲ್ಲಿ ಮಹತ್ವ ಪಡ

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 25

(ಅಂದಹಾಗೆ https://bit.ly/3FQURZd

ಈ ಕೊಂಡಿಯನ್ನು ಇನ್ನೊಮ್ಮೆ ನೋಡಿ. ಅಲ್ಲಿ ಮೊದಲಿಗೆ ಒಂದು ಹಾಡಿನ ಆರಂಭ ಮಾತ್ರ ಇದ್ದಿತು. ಈಗ ಅದನ್ನು ಪೂರ್ಣ ಮಾಡಿದ್ದೇನೆ)

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.

215) ಮೂಲ ಹಾಡು - ಢಲ್ ಗಯಾ ದಿನ್, ಹೋ ಗಯೀ ಶಾಮ್

ನನ್ನ ಅನುವಾದ:

ಇಳಿದ ಸೂರ್ಯ

ಹೆ: ಆಯಿತು ಸಂಜೆ

ಹೋಗಲು ಬಿಡು ನನ್ನ

ನಾ ಹೋಗ್ಬೇಕು

ಗಂ: ಇದೇ ಈಗ ಬಂದಿರುವಿ

ಈಗಲೇ ನೀನು ಹೋಗುವುದೇ?

216) ಮೂಲ ಹಾಡು:-ಕಯೀ ಬಾರ್ ಯೂ ಹಿ ದೇಖಾ ಹೈ

ನನ್ನ ಅನುವಾದ : 

ಒಮ್ಮೊಮ್ಮೆ ಹೀಗೆ ಆಗುವುದು

ಸ್ಟೇಟಸ್ ಕತೆಗಳು (ಭಾಗ ೧೩೫೫) - ಹೀಗಿದೆ

ಸಂಸಾರ ಆಗಬೇಕಾಯಿತು ಬದುಕು ಅರ್ಥವಾಗುವುದಕ್ಕೆ ಹೀಗೆ ಮಾತುಗಳನ್ನ ಆರಂಬಿಸಿದವ ಅಶೋಕ. ಮಳೆ ಇಲ್ಲದ ಊರನ್ನು ಬಿಟ್ಟು ಮಳೆ ಸದಾ ನೆಲೆಯೂರಿರುವ ಕರಾವಳಿಗೆ ಬಂದು ಈಗಷ್ಟೇ ತಿಂಗಳುಗಳಾಗಿದೆ. ಆತ ಈ ಊರಿಗೆ ಹೊಸಬನೇನಲ್ಲ. ಸುಮಾರು ಏಳು ವರ್ಷಗಳ ಹಿಂದೆ ಈ ಊರಿನಲ್ಲಿ ಕೆಲಸವನ್ನ ಮಾಡಿ ಅನುಭವ ಪಡೆದವ. ಆಗ ಸಂಸಾರದ ಭಾರ ಹೆಗಲ ಮೇಲಿರಲಿಲ್ಲ.

Image

ಪನಾಮಾ ಸೊರಗು ರೋಗಕ್ಕೆ ಬಾಳೆ ಬೆಳೆ ಬಲಿ

ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಕುನಿಯಾವೋನ್ ತಾಲೂಕಿನ ತಂಪಾದ ಮತ್ತು ತೇವಭರಿತ ಗಾಳಿ ಬಾಳೆ ಬೆಳೆಗೆ ಹೇಳಿ ಮಾಡಿಸಿದಂತಿದೆ. ಅಲ್ಲಿ ನೇಪಾಳದ ಗಡಿಯ ಪಕ್ಕದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಸುದರ್ಶನ್ ಮೌರ್ಯ ಅವರ ಐದು ಹೆಕ್ಟೇರ್ ಬಾಳೆ ತೋಟದಲ್ಲಿ ಬಾಳೆಗೊನೆಗಳು ಕೊಯ್ಲಿಗೆ ಸಿದ್ಧವಾಗಿವೆ. ಆದರೆ, ಮುಂದೇನಾಗುತ್ತದೋ ಎಂಬ ಭಯ ಅವರನ್ನು ಕಾಡುತ್ತಿದೆ.

Image

ನೇರಳೆ ಹಣ್ಣು ದೇಹಕ್ಕೆ ಎಷ್ಟು ಅಗತ್ಯ?

ಈಗ ನೇರಳೆ ಹಣ್ಣಿನ ಸೀಸನ್. ಮಧುಮೇಹಿಗಳಿಗೆ ಬಹಳ ಉತ್ತಮ ಎಂಬ ಲೇಬಲ್ ಹಚ್ಚಿಕೊಂಡು ಗಲ್ಲಿ ಗಲ್ಲಿಗಳಲ್ಲಿ ಮಾರುವವರಿಗೇನೂ ಕಡಿಮೆ ಇಲ್ಲ. ನೇರಳೆ ಹಣ್ಣು ನಿಜಕ್ಕೂ ಉತ್ತಮ ಪೌಷ್ಟಿಕಾಂಶ ಹೊಂದಿರುವ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಂತೂ ಅದರ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ.

Image

ಬೀದಿಯ ಬದುಕು

ಪುಸ್ತಕದ ಲೇಖಕ/ಕವಿಯ ಹೆಸರು
ಜಯರಾಮ ಹೆಗಡೆ
ಪ್ರಕಾಶಕರು
ಚಿತ್ರಭಾನು ಪ್ರಕಾಶನ, ಮಿಜಾರು, ಮಂಗಳೂರು
ಪುಸ್ತಕದ ಬೆಲೆ
ರೂ. ೫೦೦.೦೦, ಮುದ್ರಣ: ೨೦೨೫

`ಬೀದಿಯ ಬದುಕು’ ಜಯರಾಮ ಹೆಗಡೆ ಅವರ ಜೀವನ ಕಥನ. ಸುಮಾರು ಇಪ್ಪತ್ತು ವರ್ಷಗಳ ಹಿಂದಿನಿಂದಲೂ ತೊಡಗಿಕೊಂಡ ಈ ಬರಹ ಗಜಗರ್ಭವೇ ಆಗಿದ್ದಂತೂ ಸತ್ಯದ ಸಂಗತಿ. ಜಯರಾಮ ಹೆಗಡೆ ಅವರ ಹಿನ್ನೆಲೆ ಅವರ ಜೀವನದಲ್ಲಾದ ಆಗು ಹೋಗುಗಳು ಅವರ ಊರು ಕೇರಿ ಅಲ್ಲಿಯ ಜನ ಹೀಗೆ ಪೂರ್ತಿ ಜೀವನದಲ್ಲಿ ಘಟಿಸಿದ ಘಟನೆಗಳನ್ನು ಒಗ್ಗೂಡಿಸಿ ಈ ಕೃತಿಯ ಮೂಲಕ ಓದುಗರ ಮುಂದಿಟ್ಟಿದ್ದಾರೆ.

ಜೀವನ ಪ್ರಯಾಣದ ಗುಣಮಟ್ಟ

" ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " - ಜಾರ್ಜ್ ವಾಷಿಂಗ್ಟನ್. ಅರ್ಥವಾಯಿತೆ ? ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ ಸರಳ ಅರ್ಥ ನೀಡುವ ಪ್ರಯತ್ನ. ಇದು ಎಲ್ಲಾ ವಯಸ್ಸಿನ, ಎಲ್ಲಾ ಪ್ರದೇಶದ, ಎಲ್ಲಾ ವರ್ಗಗಳಿಗೂ ಅನ್ವಯಿಸುವ ಮಾತು.

Image