ಸ್ಟೇಟಸ್ ಕತೆಗಳು (ಭಾಗ ೧೩೫೯) - ಕೇಳಿ

ಅಪ್ಪ‌ ಅಮ್ಮ ನೀವಿಬ್ಬರೂ ಯಾಕೆ ನನ್ನನ್ನ ಇನ್ನೊಬ್ಬರ ಹಾಗೆ ಇರೋದ್ದಕ್ಕೆ ಬಯಸ್ತೀರಾ? ನಾನು‌ ನಾನಾಗಿರೋದು ಯಾವಾಗ? ಅಂಕ ತೆಗೆಯುವುದಕ್ಕೆ ವೇದಿಕೆಯ ಮೇಲೆ ನಿಂತು ಮಿಂಚುವುದಕ್ಕೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನ ಮನೆಗೆ ತರುವುದಕ್ಕೆ ಹೀಗೆ ನಿಮ್ಮ ಪಟ್ಟಿಗಳು ಬೆಳೀತಾನೆ ಹೋಗ್ತಾ ಇವೆ. ಎಲ್ಲವನ್ನು ನನ್ನೊಬ್ಬನಿಂದ ಮಾಡಿಸುವುದಕ್ಕೆ ಪ್ರಯತ್ನ ಯಾಕೆ?

Image

ಶಿರಾ ತಾಲೂಕಿನ ಸುಂದರ ತಾಣಗಳು

‘ಶಿರಾ' ತುಮಕೂರಿನಿಂದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿ.ಮೀ. ದೂರದಲ್ಲಿ ಪಶ್ಚಿಮದಲ್ಲಿದೆ. ಇದು ತಾಲ್ಲೂಕು ಕೇಂದ್ರವಾಗಿದೆ. ರತ್ನಗಿರಿಯ ರಂಗಪ್ಪನಾಯಕನಿಂದ ಈ ಊರು ಹಾಗೂ ಕೋಟೆಗಳು ಕಟ್ಟಲ್ಪಟ್ಟವೆಂದು ತಿಳಿದು ಬರುತ್ತದೆ. 1686ರಲ್ಲಿ ಮೊಗಲರ ವಶವಾದಾಗ ಮೊಗಲರ ಸೈನ್ಯದ ಕೇಂದ್ರವಾಗಿದ್ದಿತ್ತು.

Image

ಪ್ಯಾರಾನಾರ್ಮಲ್

ಪುಸ್ತಕದ ಲೇಖಕ/ಕವಿಯ ಹೆಸರು
ಗುರುರಾಜ ಕೋಡ್ಕಣಿ, ಯಲ್ಲಾಪುರ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೭೫.೦೦, ಮುದ್ರಣ : ೨೦೨೫

ಕಥೆಗಾರ ಗುರುರಾಜ ಕೋಡ್ಕಣಿ ಬರೆದ ‘ಪ್ಯಾರಾನಾರ್ಮಲ್’ ಎನ್ನುವ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವು. ಆದರೆ ಈಗ ಹಾಗಲ್ಲ, ಪ್ಯಾರಾನಾರ್ಮಲ್ ಕ್ಷೇತ್ರವೆನ್ನುವುದು ಸಾಕಷ್ಟು ಬೆಳವಣಿಗೆ ಕಂಡಿದೆ.

ಹುಚ್ಚು ಯೋಚನೆ ಮತ್ತು ಯೋಜನೆ

ಕಾವೇರಿ ಆರತಿ ಮತ್ತು ಕೆಆರ್‌ಎಸ್ ಜಲಾಶಯದ ಬಳಿ ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವ ಸರ್ಕಾರದ ತೀರ್ಮಾನ. ಯಾಕ್ರೀ ಸ್ವಾಮಿ, ನದಿಯನ್ನು ಇಟ್ಕೊಂಡು ರಾಜಕೀಯನೋ, ದುಡ್ಡು ಮಾಡಲಿಕ್ಕೋ, ಪ್ರಚಾರ ಪಡೆಯಲಿಕ್ಕೋ ಪ್ರಯತ್ನ ಪಡ್ತೀರಿ. ಅದೊಂದು ಜೀವ ಜಲ. ಅದನ್ನು ಅದರ ಪಾಡಿಗೆ ಬಿಟ್ಟು ಬಿಡಿ.

Image

ಸ್ಟೇಟಸ್ ಕತೆಗಳು (ಭಾಗ ೧೩೫೮) - ಇಬ್ಬರೂ

ಮನಸ್ಸಿನ ಕೋಣೆಯೊಳಗೆ ಜಗಳ ಆರಂಭವಾಗಿದೆ. ಇದು ಈ ದಿನದ ಜಗಳವಲ್ಲ ಸತತ ಹಲವು ದಿನಗಳಿಂದ ಆ ಜಗಳ ನಡೆಯುತ್ತಲೇ ಇದೆ. ನಾನು ಹಲವು ಬಾರಿ ಮಧ್ಯಪ್ರವೇಶ ಮಾಡಿ ರಾಜಿ ಮಾಡುವುದಕ್ಕೆ ಪ್ರಯತ್ನ ಪಟ್ಟರು ಕೂಡ ಅದು ಸಾಧ್ಯವಾಗಲೇ ಇಲ್ಲ .ಇಬ್ಬರಿಗೂ ಒಟ್ಟಾಗಿ ಬದುಕಿ ಅಂತ ಹೇಳುವುದಕ್ಕೆ ಸಾಧ್ಯವೇ ಆಗ್ತಾ ಇಲ್ಲ. ಅವರಿಬ್ಬರಲ್ಲಿ ಒಬ್ಬರಿಗೆ ಮಾತ್ರ ಆ ಮನೆಯೊಳಗೆ ಜಾಗವಿದೆ.

Image

ಭಾರತರತ್ನಕ್ಕೆ ನೊಬೆಲ್ ಒಲಿದದ್ದು ಯಾಕೆ?

ನೀವು ಗೋಡೆಗೆ ಒಂದು ಚೆಂಡಿನಿಂದ ಹೊಡೆಯುತ್ತೀರಿ ಎಂದಿಟ್ಟುಕೊಳ್ಳೋಣ. ಆಗ ಚೆಂಡು ಅದೇ ವೇಗದಲ್ಲಿ ಹಿಂದಕ್ಕೆ ಬರುತ್ತದೆ ಅಲ್ಲವೇ? ಇಲ್ಲಿ ಗೋಡೆಗೆ ಸ್ವಲ್ಪ ಪ್ರಮಾಣದ ಶಕ್ತಿ ವರ್ಗಾವಣೆಯಾಗುವುದರಿಂದ ಚಂಡಿನ ವೇಗ ಕಡಿಮೆಯಾಗಬಹುದು. ಆದರೆ ಒಂದು ಆದರ್ಶ ಪರಿಸ್ಥಿತಿಯನ್ನು (ideal condition) ಊಹಿಸಿಕೊಳ್ಳಿ. ಇಲ್ಲಿ ಯಾವುದೇ ಶಕ್ತಿ ವರ್ಗಾವಣೆಯಾಗುವುದಿಲ್ಲ.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 28

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.

245) ಮೂಲ ಹಾಡು:- ಜೋ ವಾದಾ ಕಿಯಾ

ನನ್ನ ಅನುವಾದ :
ಮಾತು ಕೊಟ್ಟ ಮೇಲೆ
ಉಳಿಸಿಕೊಳ್ಳಬೇಕು
ಲೋಕ ಬೇಡೆಂದರೂ
ಆ ದೇವ್ರೆ ಬೇಡೆಂದರೂ
ನೀನು ಬರಲೇಬೇಕು

246) ಮೂಲ ಹಾಡು:- ಕಸಮೆ ವಾದೇಂ ಪ್ಯಾರ ವಫಾ

ನನ್ನ ಅನುವಾದ : 
ಪ್ರೇಮ ಪ್ರೀತಿ ಆಣೆ ವಚನ
ಎಲ್ಲ ಬರಿಯ ಶಬ್ದಗಳು
ಯಾರಿಗೆ ಯಾರೂ ಸಂಬಂಧ ಇಲ್ಲ
ಎಲ್ಲ ಬರಿಯ ಶಬ್ದಗಳು

247) ಮೂಲ ಹಾಡು : ತುಝೆ ದೇಖಾ ತೋ ಏ ಜಾನಾ