ಸಿಂಪರಣೆಯಿಂದ ವಾಸಿಯಾಗದ ಅಡಿಕೆಯ ಎಲೆಚುಕ್ಕೆ ರೋಗ ! (ಭಾಗ ೧)

ಅಡಿಕೆಗೆ ಬಾಧಿತವಾದ ಎಲೆ ಚುಕ್ಕೆ ರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ. ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ ಶಿಲೀಂದ್ರ ನಾಶಕ- ದುಬಾರಿ ಕೂಲಿ ಸಂಭಾವನೆಯೊಂದಿಗೆ ಎಲೆಚುಕ್ಕೆ ರೋಗ ಓಡಿಸುವ ರೈತರ ಶ್ರಮ ಹೇಳತೀರದು.

Image

ಐತಿಹಾಸಿಕ ಮಹತ್ವದ ತೀರ್ಪು

ಶಾಸನ ಸಭೆಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದ ವಿರುದ್ಧ ಮಾತನಾಡಲು ಅಥವಾ ಅಲ್ಲಿ ನಡೆದಿರುವ ಮತದಾನದಲ್ಲಿ ಬೆಂಬಲಿಸಲು ಚುನಾಯಿತ ಜನಪ್ರತಿನಿಧಿ ಲಂಚ ಪಡೆದಿದ್ದರೆ ಅಂಥವರಿಗೆ ಇನ್ನು ಮುಂದೆ ರಕ್ಷಣೆ ಅಥವಾ ವಿನಾಯಿತಿ ಸಿಗುವುದಿಲ್ಲ.

Image

ಬಾಂಬಿನ ಸ್ಪೋಟ ಮತ್ತು ಪಾಕಿಸ್ತಾನದ ಪರ ಘೋಷಣೆ...

ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿ ಬಂದ ಪಾಕಿಸ್ತಾನ ಪರ ಘೋಷಣೆ ಮತ್ತು ಬೆಂಗಳೂರಿನ ರಾಮೇಶ್ವರಂ ಹೋಟೆಲಿನಲ್ಲಿ ಸಿಡಿದ ಬಾಂಬು ಚರ್ಚೆಯ ವಿಷಯವೂ ಅಲ್ಲ, ಪರ ವಿರೋಧಗಳ ಮಾತುಕತೆಯೂ ಅಲ್ಲ, ಸಾರ್ವಜನಿಕರು ಹೆಚ್ಚು ಪ್ರತಿಕ್ರಿಯೆ ಕೊಡಬೇಕಾದ ಘಟನೆಯೂ ಅಲ್ಲ. ಏಕೆಂದರೆ ಇದು ಸಂಪೂರ್ಣವಾಗಿ ಕಾನೂನು ಮತ್ತು ಸುವ್ಯವಸ್ಥೆಯ ವಿಷಯ ಹಾಗು ಕ್ರಿಮಿನಲ್ ಚಟುವಟಿಕೆ.

Image

ಸ್ಟೇಟಸ್ ಕತೆಗಳು (ಭಾಗ ೮೯೫)- ಮೂಟೆ

ಆ ದಾರಿಯಲ್ಲಿ ಸಾಗುವವರ ಎಲ್ಲರ ಬಳಿಯೂ ದೊಡ್ಡ ದೊಡ್ಡ ಮೂಟೆಗಳಿವೆ. ಆ ಗೋಣಿಯ ಮೂಟೆಗಳನ್ನ ಹೊತ್ತು ಹೆಜ್ಜೆ ಇರಿಸಿದ್ದಾರೆ. ಹಲವು ದಿನಗಳಿಂದ ಗೋಣಿಯೊಳಗಿನ ಮೂಟೆಯೊಳಗಿನ ಭಾರ ಹೆಚ್ಚಾದರೂ ಸಹ ಮೂಟೆಯನ್ನು ಬಿಡಿಸಿ ತೆರೆದು ನೋಡುವ ಕೆಲಸವನ್ನು ಮಾಡಲಿಲ್ಲ. ಸಾಗುತ್ತಿದ್ದವರಿಗೆ ಕುತ್ತಿಗೆ ನೋವಾಗಿದೆ. ಸಾಗುವ ವೇಗ ಕಡಿಮೆಯಾಗಿದೆ. ಏನೆಂದರು ಸಹ ಮೂಟೆ ಇಳಿಸುತ್ತಿಲ್ಲ.

Image

ಪ್ರಾಣಾಯಾಮ ಏನು ಮತ್ತು ಹೇಗೆ?

ಈ ದಿನ ಪ್ರಾಣಾಯಾಮದ ಬಗ್ಗೆ ತಿಳಿದುಕೊಳ್ಳೋಣ. ಪ್ರಾಣಾಯಾಮ ಎಂದರೆ ಶ್ವಾಸ ಪ್ರಶ್ವಾಸಗಳ ಗತಿಯನ್ನು ವಿಚ್ಛೇದನಗೊಳಿಸುವುದೇ ಪ್ರಾಣಾಯಾಮ. ಜೀವನವನ್ನು ನಿಯಮಿತಗೊಳಿಸುವುದೇ ಪ್ರಾಣಾಯಾಮ. ಆಯಾಮ ಎಂದರೆ ನಿಯಮಿತಗೊಳಿಸುವುದು, ನಿಯಮನ ಮಾಡೋದು, ಒಂದು ರೀತಿ ತಂದು ಕೊಡುವುದು. ಪ್ರಾಣಾಯಾಮ ಎಂದರೆ ಪ್ರಾಣಕ್ಕೆ ನಿಯತಿಯನ್ನು, ನಿಯಮವನ್ನು ತರುವುದು. ಒಂದು ಅಚ್ಚು ಕಟ್ಟು ಮಾಡುವುದು.

Image

ಒಂದು ಒಳ್ಳೆಯ ನುಡಿ - 265

ಕೋಪ, ಸಿಟ್ಟು, ದ್ವೇಷದಲ್ಲಿ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ, ಮಾಡಲೂಬಾರದು. ಒಳ್ಳೆಯ ಕಾರ್ಯಗಳನ್ನು ಸಾಧಿಸಲು ಒಳ್ಳೆಯ ಮಾತು, ನಡತೆ, ವ್ಯವಹಾರ, ನಯ-ವಿನಯಗಳಿದ್ದರೆ ಚಂದ. ಸುಖಾಸುಮ್ಮನೆ ಬಂದಿಲ್ಲ 'ಒಲಿದರೆ ನಾರಿ ಮುನಿದರೆ ಮಾರಿ' ಎಂಬುದಾಗಿ. ಪ್ರೀತಿಯಿಂದ, ನಯವಾಗಿ ಒಲಿಸಿಕೊಂಡರೆ ಕ್ಷೇಮ. ಕೆರಳಿದರೆ 'ಸಿಂಹಿಣಿ'ಯಾಗಬಲ್ಲಳು.

Image

ಒಗ್ಗಟ್ಟಿನಲ್ಲಿದ್ದರೆ ಬೆಲೆಯಿದೆ !

ದ್ರಾಕ್ಷಿ ಹಣ್ಣಿನ ಸೀಸನ್ ಮತ್ತೆ ಬಂದಿದೆ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ದ್ರಾಕ್ಷಿಗಳು ಬಂದಿವೆ. ಬೀಜ ಇರುವ, ಇಲ್ಲದಿರುವ (ಸೀಡ್ ಲೆಸ್) ನೇರಳೆ, ಹಸಿರು, ಕೆಂಪು ಬಣ್ಣದ ದ್ರಾಕ್ಷಿಗಳು ಮಾರುಕಟ್ಟೆಯಲ್ಲಿ ಲಭ್ಯ. ಈ ದ್ರಾಕ್ಷಿಗಳನ್ನು ಓರ್ವ ತನ್ನ ತಳ್ಳು ಗಾಡಿಯಲ್ಲಿ ಪೇರಿಸಿ ದೂಡಿಕೊಂಡು ಹೋಗುತ್ತಾ ಮಾರುತ್ತಿದ್ದ.

Image

ಇಮೋಜಿ ಭಾಷೆ

ಪುಸ್ತಕದ ಲೇಖಕ/ಕವಿಯ ಹೆಸರು
ಕರ್ಕಿ ಕೃಷ್ಣಮೂರ್ತಿ
ಪ್ರಕಾಶಕರು
ಛಂದ ಪುಸ್ತಕ, ಬಗ್ಗೇರುಘಟ್ಟ ರಸ್ತೆ, ಬೆಂಗಳೂರು-೫೬೦೦೭೯, ಮೊ: ೯೮೪೪೪೨೨೭೮೨
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ಓದಲು ಸೊಗಸಾಗಿರುವ ಬಹಳ ಚಂದನೆಯ ಪುಸ್ತಕಗಳನ್ನು ಹೊರತರುವ ‘ಛಂದ ಪುಸ್ತಕ'ವು ಈ ಬಾರಿ ಬರಹಗಾರ ಕರ್ಕಿ ಕೃಷ್ಣಮೂರ್ತಿ ಅವರ ‘ಇಮೋಜಿ ಭಾಷೆ' ಎಂಬ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿದೆ.