ಎಲ್ಲ ಮರೆತು ಹೋದೆ ತಂದೆ
ಕವನ
ಎಲ್ಲ ಮರೆತು ಹೋದೆ ತಂದೆ
ನನ್ನ ಬುವಿಗೆ ತರುತಲೆ
ಮೌನವಾದ ಕಡಲಿನೊಳಗೆ ನಿನ್ನ ಪ್ರೀತಿಯಿಡುತಲೆ
ಮಾತುಕತೆಯ ನೋಡದಾದೆ
ಮುದ್ದಿಸುವುದ ಕಾಣದಾದೆ
ದೂರದಲ್ಲೆ ಕೂತ ನಿನ್ನ ಅಳುವ ಕಂಡು ಬೆಳೆದೆನೆ
ನಿನ್ನ ಒಡಲ ಪ್ರೀತಿ ಸಿಗದೆ
ಸಾಗುತಿರುವೆ ಎಲ್ಲೆ ಇರದೆ
ಹೃದಯದಾಳದೊಳಗೆ ಇರುವ ನಲಿವ ಮರೆತು ಕುಳಿತೆನೆ
ಬೀದಿಯೆಡೆಯೆ ತಿರುಗಿ ನಿಂದೆ
ದಾರಿ ಸವೆದ ಚಿತ್ರವೆಂದೆ
ಬದಿಗೆ ಸರಿದ ಒಲುಮೆಯನ್ನು ತಬ್ಬಿ ಹಿಡಿದು ಮಲಗಿದೆ
ವ್ಯಾಧಿಯೊಳಗೆ ಸಾಗುತಿರುವೆ
ಮತ್ತೆ ಸವಿಯು ಮೂಡದೆ
ಅಂತರಂಗ ಗಗನ ಕುಸುಮ ಎನುತ ಕಾಲ ಕರೆದಿದೆ
ನನ್ನ ಹಸಿವ ನೋಡದಿರದೆ
ಕಲೆಯು ಸನಿಹ ಕುಳಿತಿದೆ
ಸತ್ಯವೆನುವ ಬದುಕಿನೊಡನೆ ಉಸಿರ ಪಯಣ ಸಾಗಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
