ಕನ್ನಡ ಪತ್ರಿಕಾ ಲೋಕ (ಭಾಗ ೨೧೪) - ಆತ್ಮೀಯ ಬೋಧಕ

ಕನ್ನಡ ಪತ್ರಿಕಾ ಲೋಕ (ಭಾಗ ೨೧೪) - ಆತ್ಮೀಯ ಬೋಧಕ

ಕುಂಜೂರು ಮಂಜುನಾಥ ಆಚಾರ್ಯರ "ಆತ್ಮೀಯ ಬೋಧಕ"

ಉಡುಪಿ ಜಿಲ್ಲೆ ಕಾಪು ತಾಲೂಕು ಪಣಿಯೂರು ಕುಂಜೂರುವಿನ ಲೇಖಕರಾದ ಮಂಜುನಾಥ ಆಚಾರ್ಯರು ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿ ನಡೆಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಆತ್ಮೀಯ ಬೋಧಕ".

ರಾಣೆಬೆನ್ನೂರಿನ ಮೌನೇಶ್ವರ ಆಚಾರ್ಯ ಗುರೂಜಿ, ನ್ಯಾಮತಿ ನಾಗರಾಜ ಅರ್ಕಾಚಾರ್ ಹಾಗೂ ರೋಡಲ ಬಂಡ ನೀಲಕಂಠಾಚಾರ್ ಅವರು ಸಂಪಾದಕ ಮಂಡಳಿಯಲ್ಲಿದ್ದಾರೆ. ಭಾಸ್ಕರ ಆಚಾರ್ಯ ಕಜಾರುಗಿರಿ ಉಪಸಂಪಾದಕರಾಗಿದ್ದಾರೆ. ಪತ್ರಿಕೆ ಕಟಪಾಡಿಯ ಶ್ರುತಿ ಪ್ರಕಾಶನ ಪ್ರಿಂಟರ್ಸ್ & ಪಬ್ಲಿಚರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ.

32 + 8 ಪುಟಗಳ "ಆತ್ಮೀಯ ಬೋಧಕ"ದಲ್ಲಿ ಸಣ್ಣಕಥೆ, ಕವನದಂಥ ಸಾಹಿತ್ಯಿಕ ಬರಹಗಳಲ್ಲದೆ ವೈವಿಧ್ಯಮಯ ಲೇಖನಗಳು ಪ್ರಕಟವಾಗುತ್ತವೆ. ಮುಖ್ಯವಾಗಿ ವಿಶ್ವಕರ್ಮ ಸಮಾಜದ ಪವಾಡ ಪುರುಷರ, ಆಚಾರ್ಯ ಪುರುಷರ, ಯುಗಪುರುಷ ಮಹನೀಯರ, ಸಾಧಕರ ಜೀವನ ಚರಿತ್ರೆ, ವ್ಯಕ್ತಿ ಪರಿಚಯ ಇತ್ಯಾದಿಗಳ ಜೊತೆಗೆ ಕೆಲ ಆಯ್ದ ಸುದ್ಧಿಗಳೂ ಪ್ರಕಟವಾಗುತ್ತವೆ. ಪ್ರತೀವರ್ಷ ಮೌಲಿಕವೂ, ಸಂಗ್ರಹಯೋಗ್ಯವೂ ಆದ ವಾರ್ಷಿಕ ವಿಶೇಷಾಂಕವನ್ನೂ ಬಿಡುಗಡೆಗೊಳಿಸುತ್ತಾರೆ.

~ ಶ್ರೀರಾಮ ದಿವಾಣ